ಕಲುಷಿತಗೊಂಡಿದ್ದ ಬೆಂಗಳೂರು ಕುಂದಲಹಳ್ಳಿ ಕೆರೆಗೆ ಮರುಜೀವ

Recommended Video

      ಕಲುಶಿತಗೊಂಡಿದ್ದ ಬೆಂಗಳೂರು ಕುಂದಲಹಳ್ಳಿಕೆರೆಗೆ ಮರುಜೀವ | Oneindia Kannada

      ಬೆಂಗಳೂರು, ಡಿಸೆಂಬರ್ 07 : ಕಲುಷಿತಗೊಂಡಿದ್ದ ಬೆಂಗಳೂರಿನ ಕುಂದಲಹಳ್ಳಿ ಕೆರೆಯನ್ನು, ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಒಂದಾದ 'ಜನರಲ್ ಎಲೆಕ್ಟ್ರಿಕ್' (ಜಿಇ), 'ಯುನೈಟೆಡ್ ವೇ ಬೆಂಗಳೂರು' ಎಂಬ ಎನ್ ಜಿ ಒ ನೆರವಿನೊಂದಿಗೆ ಪುನರುಜ್ಜೀವನಗೊಳಿಸಿದೆ.

      ವೈಟ್ ಫೀಲ್ಡ್ ಬಳಿ ಇರುವ ಕುಂದಲಹಳ್ಳಿ ಕೆರೆಯಲ್ಲಿದ್ದ ತುಂಬಿಹೋಗಿದ್ದ ತ್ಯಾಜ್ಯವನ್ನು ತೆಗೆದು ಹೊಸದಾಗಿ ಶುದ್ಧ ನೀರು ತುಂಬಲು ಕೆರೆಯ ದಡದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಜಿಇ ಇಂಡಿಯಾ ಟೆಕ್ನಾಲಜಿ ಸೆಂಟರ್ ನ ಮುಖ್ಯ ಕಾರ್ಯನುರ್ವಾಹಕ ಮನಿಜ್ ಮಖಿಜಾ ತಿಳಿಸಿದರು.

      GE helps give Bengaluru's clogged lake new lease of life

      ಇದರಿಂದ ಕುಂದಲಹಳ್ಳಿ ಕೆರೆಗೆ ಮರುಜೀವ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಸುಮಾರು 30 ಎಕರೆ ಪ್ರದೇಶದಲ್ಲಿ ಹರಡಿರುವ ಕುಂದಲಹಳ್ಳಿ ಕೆರೆಯಲ್ಲಿ ಅರ್ಧದಷ್ಟು ಚರಂಡಿ ನೀರು ಹಾಗೂ ಕೊಳಚೆ ನೀರಿನಿಂದ ಸಂಪೂರ್ಣವಾಗಿ ಹುದಿಗಿಹೋಗಿತ್ತು. ಸಂಸ್ಥೆಯ ಸ್ವಯಂ ಸೇವಕರು ನಿರಂತರ ಆರು ತಿಂಗಳ ಕಾಲ ಕೆರೆಯನ್ನು ಸ್ವಚ್ಛಗೊಳಿಸಿ ಕೆರೆಯನ್ನು ಸಂಪೂರ್ಣ ಪುನಶ್ಚೇತನಗಿಳಿಸಲು ಶ್ರಮಿಸಿದ್ದಾರೆ ಎನ್ನುತ್ತಾರೆ ಮಖಿಜಾ.

      ಹಸಿರು ಬೆಂಗಳೂರು ನಿರ್ಮಾಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಿಇ ಸೇರಿದಂತೆ ಸರ್ಕಾರಿ ಇತರೆ ಸಂಸ್ಥೆಗಳೊಂದಿಗೆ ಕೆರೆಗಳ ಪುನಶ್ಚೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಇದರ ಭಾಗವಾಗಿ ಕುಂದಲಹಳ್ಳಿ ಕೆರೆಯನ್ನು ಜಿಇ ಸಂಸ್ಥೆ ಪುನಶ್ಚೇತನ ಗೊಳಿಸಿದೆ.

      ಜನರಲ್ ಎಲೆಕ್ಟ್ರಿಕ್ ಹಾಗೂ ಯುನೈಟೆಡ್ ವೇ ಸಂಸ್ಥೆಗಳು ಜಂಟಿಯಾಗಿ 6 ಪರಿಸರ ಸ್ನೇಹಿ ಶೌಚಾಲಯವನ್ನು ಕೆರೆಯ ದಡದಲ್ಲಿ ನಿರ್ಮಿಸಿದ್ದು ಇದರಿಂದ ಕೆರೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡಲು ನೆರವಾಗುತ್ತದೆ. ಅಲ್ಲದೆ ಸುಮಾರು 5 ಸಾವಿರ ಸಸಿಗಳನ್ನು ಕೆರೆಯ ಸುತ್ತಲಿನ ಪ್ರದೇಶದಲ್ಲಿ ನೆಡಲಾಗಿದೆ ಎಂದು ಯುನೈಟೆಡ್ ವೇ ಮುಖ್ಯ ಕಾರ್ಯ ನಿರ್ವಾಹಕ ಮನೀಶ್ ಮಿಶೇಲ್ ತಿಳಿಸಿದ್ದಾರೆ.

      ಯುನೈಟೆಡ್ ವೇ ಬೆಂಗಳೂರು ಎನ್ ಜಿ ಒ ಜಿಇ ಕಂಪನಿ ಸಹಯೋಗದಲ್ಲಿ ಇತರೆ ೧೫ ಕೆರೆಗಳ ಪುನಶ್ಚೇತನ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದ್ದು ಮುಂದಿನ ಆರು ತಿಂಗಳಲ್ಲಿ ಪುರುತ್ಥಾನಗೊಳ್ಳಲಿದೆ ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+