Cash Prize: ಜಿಬಿಎ ಸ್ವಚ್ಚತಾ ಕಾರ್ಯಕ್ರಮ: 3 ವಿಧಾನಸಭಾ ಕ್ಷೇತ್ರಗಳಿಗೆ ನಗದು ಬಹುಮಾನ ಘೋಷಣೆ
ಬೆಂಗಳೂರು, ನವೆಂಬರ್ 03: ರಾಜಧಾನಿ ಬೆಂಗಳೂರು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಜನ ದಟ್ಟಣೆ, ವಾಹನ ದಟ್ಟಣೆ, ಜನರ ವಲಸೆ ಇಲ್ಲಿ ಹೆಚ್ಚು. ದಿನನಿತ್ಯ ಉತ್ಪತ್ತಿಯಾಗುವ ಕಸ ವಿಲೇವಾರಿ ದೊಡ್ಡ ಸವಾಲು. ಹಸಿ, ಒಣ ಕಸ ಬೇರ್ಪಡಿಸಿ ನಿಗದಿ ಜಾಗದಲ್ಲಿ, ಇಲ್ಲವೇ ಮನೆ ಮುಂದೆ ಬರುವ ಆಟೋ, ಟಿಪ್ಪರ್ ನಲ್ಲಿ ವಿಲೇವಾರಿ ಮಾಡದೇ ಕೆಲವೆಡೆ ನಾಗರಿಕರು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಈ ಸಂಬಂಧ ಪಾಲಿಕೆ ಸಿಬ್ಬಂದಿ ಕಸ ಎಸೆಯುವವರು, ದಂಡ ಕಟ್ಟದವರ ಮನೆ ಮುಂದೆ ಕಸ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ಮೂರು ಕ್ಷೇತ್ರಗಳಿಗೆ ಜಿಬಿಎ ನಗದು ಬಹುಮಾನ ಘೋಷಿಸಿದೆ.
ಹೌದು, ನಗರ ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ಹಾಗೂ ನಾಗರೀಕರಲ್ಲಿ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಮನೋಭಾವವನ್ನು ರೂಢಿಸಿಕೊಳ್ಳಲು ಜಿಬಿಎ ಅರಿವು ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರ ನೇತೃತ್ವದಲ್ಲಿ ಸಾಮೂಹಿಕ ತೀವ್ರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ.

ಈ ಕಾರ್ಯಕ್ರಮವು ನವೆಂಬರ್ 08 ರಂದು ಬೆಳಗ್ಗೆ 10:30ರಿಂದ ಸಂಜೆ 4:00ರವರೆಗೆ ನಡೆಯಲಿದೆ. ಉತ್ತರ ನಗರ ಪಾಲಿಕೆಯ ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞನಗರ, ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಿಭಾಗಗಳಲ್ಲಿ ಒಟ್ಟು 93.9 ಕಿಲೋ ಮೀಟರ್ ರಸ್ತೆಗಳಲ್ಲಿ ತ್ಯಾಜ್ಯ, ಸಿಲ್ಟ್, ಡೆಬ್ರಿಸ್ ಹಾಗೂ ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವ ಜೊತೆಗೆ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಜಿಬಿಎ ತಿಳಿಸಿದೆ.
ಈ ಮಹಾ ಸ್ವಚ್ಛತಾ ಅಭಿಯಾನದಲ್ಲಿ ಪಾಲಿಕೆಯ ಘನತ್ಯಾಜ್ಯ ವಿಭಾಗ, ಇಂಜಿನಿಯರಿಂಗ್ ವಿಭಾಗ, ರಸ್ತೆ ಮೂಲಸೌಕರ್ಯ (RI) ವಿಭಾಗ, ಆರೋಗ್ಯ ವಿಭಾಗ, ಟ್ರಾಫಿಕ್ ಪೋಲಿಸ್, ತೋಟಗಾರಿಕೆ ವಿಭಾಗ, ಅರಣ್ಯ ವಿಭಾಗ, ಕೆರೆಗಳ ನಿರ್ವಹಣೆ ವಿಭಾಗ ಸೇರಿದಂತೆ ಇತರೆ ಇಲಾಖೆಗಳು ಹಾಗೂ ಸ್ಥಳೀಯ ಸಂಘಟನೆಗಳು ಪಾಲ್ಗೊಳ್ಳಲಿವೆ.
ಪಾಲಿಕೆ ಅಧಿಕಾರಿಗಳನ್ನು ಗುರುತಿಸಿ ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ಉತ್ತಮವಾಗಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವ ಮೊದಲ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಪಾಲಿಕೆಯ ವತಿಯಿಂದ ಬಹುಮಾನಗಳನ್ನು ನೀಡಲಾಗುವುದು. ಉತ್ತಮವಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ವಿಧಾನಸಭಾ ಕ್ಷೇತ್ರಗಳನ್ನು NGO/ ಸಂಘ ಸಂಸ್ಥೆಗಳ ಮೂಲಕ ತಪಾಸಣೆ ಮಾಡಿಸಿ ಆಯ್ಕೆ ಮಾಡಿ ನಗದು ಬಹುಮಾನ ವಿತರಿಸಲಾಗುತ್ತದೆ.
ಸ್ವಚ್ಚತಾ ವಿಧಾನಸಭಾ ಕ್ಷೇತ್ರಗಳ ಬಹುಮಾನ ವಿವರ
* ಪ್ರಥಮ ಬಹುಮಾನ - 01 ಲಕ್ಷ ರೂಪಾಯಿ
* ದ್ವಿತೀಯ ಬಹುಮಾನ - 50 ಸಾವಿರ ರೂಪಾಯಿ
* ತೃತೀಯ ಬಹುಮಾನ - 25 ಸಾವಿರ ರೂಪಾಯಿ
* ವಿಭಾಗವಾರು ಪ್ರತ್ಯೇಕ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತವೆ.
ಬೆಂಗಳೂರಿನ ಸ್ವಚ್ಛತೆಯನ್ನು ಕಾಪಾಡಲು ಪಾಲಿಕೆಯ ಸಿಬ್ಬಂದಿಗಳು ಪ್ರತಿದಿನ ಶ್ರಮಿಸುತ್ತಿದ್ದಾರೆ. ಪ್ರತಿ ಶುಕ್ರವಾರ ಬೆಳಗ್ಗೆ 7.00ರಿಂದ 9.00ರವರೆಗೆ, ಮಾನ್ಯ ಆಯುಕ್ತರ ನೇತೃತ್ವದಲ್ಲಿ "ಫೋನ್ ಇನ್" ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಆಲಿಸಿ ಪರಿಹರಿಸುವ ಕ್ರಮ ಕೈಗೊಳ್ಳಲಾಗುತ್ತದೆ. ವಾಟ್ಸಪ್, ಸಹಾಯ ಆಪ್ ಹಾಗೂ ಕೇಂದ್ರೀಕೃತ ಸಹಾಯವಾಣಿ ಮೂಲಕ ಸ್ವೀಕೃತವಾಗುವ ದೂರುಗಳನ್ನು 24 ರಿಂದ 48 ಗಂಟೆಗಳೊಳಗೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ.
ಉತ್ತಮವಾದ ಪರಿಸರವನ್ನು ನಿರ್ಮಿಸಲು ಹಾಗೂ ನಾಗರೀಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪಾಲಿಕೆಯು ಅನೇಕ ಕಾರ್ಯಕ್ರಮಗಳ ಮೂಲಕ ಪ್ರಥಮ ಹೆಜ್ಜೆ ಇರಿಸಿದ್ದು. ಈ ಪ್ರಯತ್ನದಲ್ಲಿ ನಾಗರೀಕರ ಸಹಭಾಗಿತ್ವ ಹಾಗೂ ಪ್ರೋತ್ಸಾಹ ಅಗತ್ಯವಿದೆ. ಇದಕ್ಕಾಗಿ ನಾಗರೀಕರು ಕೈಜೋಡಿಸಬೇಕೆಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications