ಶಿವಾಜಿನಗರದಲ್ಲಿ ಗ್ಯಾಸ್ ಗೋದಾಮಿಗೆ ಬೆಂಕಿ
ಬೆಂಗಳೂರು, ಫೆಬ್ರವರಿ 23: ಇತ್ತೀಚೆಗೆ ನಗರದಲ್ಲಿ ಅಗ್ನಿಅವಘಡಗಳ ಸಂಖ್ಯೆ ಹೆಚ್ಚಾಗಿದೆ. ಇಂತಹಾ ಪ್ರಕರಣಗಳಿಗೆ ಹೊಸ ಸೇರ್ಪಡೆ ಶಿವಾಜಿನಗರದಲ್ಲಿ ಇಂದು ನಡೆದ ಗ್ಯಾಸ್ ಗೊಧಾಮು ಅಗ್ನಿ ಅವಘಡ.
ಗ್ಯಾಸ್ ಗೋಧಾಮಿನಲ್ಲಿಟ್ಟಿದ್ದ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಇಡೀಯ ಗೋಧಾಮು ಕ್ಷಣಮಾತ್ರದಲ್ಲಿ ಹೊತ್ತಿಕೊಮಡು ಉರಿದಿದೆ. ಆದರೆ ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಗ್ಯಾಸ್ ಗೋಧಾಮಿನಲ್ಲಿ ಬಹುತೇಕ ಖಾಲಿ ಸಿಲಿಂಡರ್‌ಗಳೇ ಇದ್ದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ. ಗ್ಯಾಸ್ ಗೊಧಾಮಿಗೆ ಬೆಂಕೆ ಹತ್ತಿದೆ ಎಂದು ಗೊತ್ತಾದ ಕೂಡಲೇ ಭಾರಿ ಸ್ಪೋಟ ಸಂಭವಿಸುವ ಭಯದಲ್ಲಿ ಸ್ಥಳಿರಯರೆಲ್ಲರೂ ದೂರ ಓಡಿದ್ದಾರೆ.

ಅಗ್ನಿ ಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಭಾರಿ ಶ್ರಮದ ಬಳಿಕ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.













Click it and Unblock the Notifications