ಮಣಿಪುರ ನಿಷೇಧಿತ ಸಂಘಟನೆ ಉಪಾಧ್ಯಕ್ಷನ ಬಂಧನ

arrest
ಬೆಂಗಳೂರು, ಜೂ. 17 : ಮಣಿಪುರ ಮತ್ತು ಬೆಂಗಳೂರು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಷೇಧಿತ ಗಾರೋ ಲಿಬರೇಷನ್ ಆರ್ಮಿ ಸಂಘಟನೆ ಉಪಾಧ್ಯಕ್ಷ ಗಾರೋ ಸಂಗ್ಮಾ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಕಳೆದ ಆರು ತಿಂಗಳಿನಲ್ಲಿ ಆತ ತಲೆ ಮರಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮಣಿಪುರ ಮತ್ತು ಬೆಂಗಳೂರು ನಗರ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಕೋರಮಂಗಲದ ಅಪಾರ್ಟ್ ಮೆಂಟ್ ವೊಂದರಲ್ಲಿ ಅಡಗಿ ಕುಳಿತಿದ್ದ ಗಾರೋ ಸಂಗ್ಮಾ ಅವರನ್ನು ಬಂಧಿಸಲಾಗಿದೆ. ಮಣಿಪುರ ನಿಷೇಧಿತ ಗಾರೋ ಲಿಬರೇಷನ್ ಆರ್ಮಿ ಸಂಘಟನೆಗೆ ಸಂಗ್ಮಾ ಉಪಾಧ್ಯಕ್ಷರಾಗಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸಂಗ್ಮಾ ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಮಣಿಪುರ ಪೊಲೀಸರು ಸಂಗ್ಮಾ ಅವರನ್ನು ಮಣಿಪುರಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆ ಇದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ನಿಷೇಧಿತ ಸಂಘಟನೆ ಉಪಾಧ್ಯಕ್ಷರಾಗಿದ್ದ ಸಂಗ್ಮಾ ಸುಮಾರು ಆರು ತಿಂಗಳಿನಿಂದ ತಲೆಮರಿಸಿಕೊಂಡಿದ್ದು, ಕೋರಮಂಗಲದ ಅಪಾರ್ಟ್ ಮೆಂಟ್ ವೊಂದರಲ್ಲಿ ನೆಲೆಸಿದ್ದರು. ಪೊಲೀಸರು ಸಂಗ್ಮಾ ಅವರಿಗೆ ಬೆಂಗಳೂರಿನಲ್ಲಿ ಪರಿಚಯವಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+