ಬೆಂಗಳೂರಲ್ಲಿ ಇಂದು "ಗರ್ಭಗುಡಿ" ಯಕ್ಷಗಾನ ಪ್ರದರ್ಶನ
ಬೆಂಗಳೂರು, ಜುಲೈ 26: ಬೆಂಗಳೂರಿನ ಯಕ್ಷಗಾನಪ್ರಿಯರಿಗೆ ಈ ಕಲೆಯನ್ನು ನೋಡುವ ಅವಕಾಶ ಬಂದಿದೆ. ಪೆರ್ಡೂರಿನ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಇಂದು ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಸಲು ಸಜ್ಜಾಗಿದೆ.
ಜುಲೈ 26, ಶುಕ್ರವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ "ಗರ್ಭಗುಡಿ" ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಜಿನ್ಸಾಲೆ ರಂಗ ಸಾರಥ್ಯದಲ್ಲಿ ಈ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಕಥಾರಚನೆ, ಪರಿಕಲ್ಪನೆ ಕುಮಾರಿ ಶುಭಾಷಯ ಜೈನ್ ಅವರದ್ದಾಗಿದೆ. ಎಂ.ಕೆ.ರಮೇಶ್ ಆಚಾರ್ಯ ಪದ್ಯರಚನೆ ಮಾಡಿದ್ದಾರೆ.
ಹಿಮ್ಮೇಳದಲ್ಲಿ ರಾ.ಆ. ಜನ್ಸಾಲೆ, ಬಾಳ್ಕಲ್, ಕಡತೋಕ, ಬೆಳ್ಕಲೆ (ಮದ್ದಳೆ), ಹಾಲಾಡಿ, ಕಾಡೂರು (ಚಂಡೆ) ಇರಲಿದ್ದಾರೆ. ಯಲಗುಪ್ಪ, ಬೀಜಮಕ್ಕಿ, ಕುಂಕಿಪಾಲ್, ದೇವಲ್ಕುಂದ ಸ್ತ್ರೀಪಾತ್ರಧಾರಿಗಳಾಗಿದ್ದಾರೆ. ಮೂರೂರು, ಕಮಲಶಿಲೆ, ಮೂಡ್ಕಣಿ ಹಾಸ್ಯ ಭಾಗ ನಿರ್ವಹಿಸಲಿದ್ದಾರೆ. ಥಂಡಿಮನೆ, ಜಲವಳ್ಳಿ, ತೊಂಭಟ್ಟು, ಕಿರಾಡಿ, ಕಾ. ಚಿಟ್ಟಾಣಿ, ಮಾಗೋಡು, ಪ್ರಣವ್ ಭಟ್ ಸಿದ್ಧಾಪುರ, ಸನ್ಮಯ ಭಟ್, ವಿನಾಯಕ ಪುರುಷ ಪಾತ್ರಧಾರಿಗಳಾಗಿದ್ದಾರೆ.

ಶುಕ್ರವಾರ ರಾತ್ರಿ 9.30ರಿಂದ ಪ್ರದರ್ಶನ ಆರಂಭಗೊಳ್ಳಲಿದೆ. 300, 200 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.












Click it and Unblock the Notifications