ಗಣೇಶ ವಿಸರ್ಜನೆ: ಇಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ವ್ಯವಸ್ಥೆ
ಬೆಂಗಳೂರು, ಸೆಪ್ಟಂಬರ್ 11: ಬೆಂಗಳೂರಿನ ನಾನಾ ಕಡೆಗಳಲ್ಲಿ ಅದ್ಧೂರಿ ಗಣೇಶ ಪ್ರತಿಷ್ಠಾಪನೆ ನಡೆದಿತ್ತು. ಇಂದು ಸೆಪ್ಟಂಬರ್ 11ರಂದು ಬುಧವಾರ ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಟ್ಯಾನರಿ ರಸ್ತೆ ಮೂಲಕ ಗಣಪತಿ ಮೂರ್ತಿಗಳ ಮೆರವಣಿಗೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಸವಾರರು ಹಿತದೃಷ್ಟಿಯಿಂದ ಇಂದು ಮಧ್ಯಾಹ್ನದಿಂದ ರಾತ್ರಿ 1:00 ಗಂಟೆಯವರೆಗೆ ನಗರದ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಪರ್ಯಾಯ ರಸ್ತೆಗಳಿಗೆ ವ್ಯವಸ್ಥೆ ಮಾಡಲಾಗಿದೆ.
ಯಾವೆಲ್ಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
* ನಾಗವಾರ ಮುಖ್ಯ ರಸ್ತೆ ಮತ್ತು ಟ್ಯಾನರಿ / ಡೇವಿಸ್ ರೋಡ್ ಮುಖ್ಯ ರಸ್ತೆ,
* ನೇತಾಜಿ ಜಂಕ್ಷನ್ ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ ಸಂಚಾರಕ್ಕೆ ನಿರ್ಬಂಧ ಇದೆ.
* ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿದೆ.
* ರೋಜರ್ ರಸ್ತೆ, ಆರ್ಮ್ ಸ್ಟ್ರಾಂಗ್ ರಸ್ತೆ ಹಾಗೂ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ಸಂಚಾರಕ್ಕೆ ಅವಕಾಶ ಇಲ್ಲ.

* ಮಾಸ್ಕ್ ಜಂಕ್ಷನ್ ನಿಂದ ಕ್ಲಾರೆನ್ಸ್ ಬ್ರಿಡ್ಜ್ ಮೂಲಕ ಪಾಟರಿ ರಸ್ತೆ ಕಡೆಗೆ ಹೋಗುವ ಸಂಚಾರ ನಿಷೇಧಗೊಂಡಿದೆ.
* ಲಾಜರ್ ರಸ್ತೆ ಮತ್ತು ಎಂ.ಎಂ. ರಸ್ತೆ ಜಂಕ್ಷನ್ ನಿಂದ ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಬುಡ್ ವಿಹಾರಕ್ಕೆ ಹೋಗುವ ಮೂಲಕ ಸಂಚಾರವನ್ನು ನಿರ್ಬಂಧಿಸಲಾಗಿದೆ.
* ಸಿಂಧಿ ಕಾಲೋನಿ ಜಂಕ್ಷನ್‌ನಿಂದ ಮೆಮೋರಿಯಲ್ ಜಂಕ್ಷನ್ ಕಡೆಗೆ ಅಸ್ಸಾಯೇ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ಬದಲಾಯಿಸಲಾಗಿದೆ, ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ರಸ್ತೆ ನಿರ್ಬಂಧಕ್ಕೆ ಪರ್ಯಾಯ ವ್ಯವಸ್ಥೆ ಏನು?
* ಥಣಿಸಂದ್ರ ಮುಖ್ಯ ರಸ್ತೆಯ ಕಡೆಯಿಂದ ಮಲಕೇತಿನಗರ ಮತ್ತು ಶಿವಾಜಿನಗರ ಕಡೆಗೆ ಸಂಚರಿಸುವ ವಾಹನಗಳು ಥಣಿಸಂದ್ರ ಮುಖ್ಯ ರಸ್ತೆ ನಾಗವಾರ ಜಂಕ್ಷನ್ ಎಡತಿರುವು ಬಲತಿರುವು ಹೆಚ್.ಬಿ.ಆರ್ 80 ಅಡಿ ರಸ್ತೆ- ಸಿದ್ದಪ್ಪರೆಡ್ಡಿ ಜಂಕ್ಷನ್ ಲಿಂಗರಾಜಪುರಂ ರಸ್ತೆಯಿಂದ ಹೆಚ್.ಎಂ ರಸ್ತೆ ಡೇವಿಸ್ ರಸ್ತೆ ಮಾರ್ಗವಾಗಿ ಶಿವನಗರ ಪೊಲೀಸ್ ಠಾಣೆ ಕಡೆಗೆ ಸಂಚರಿಸಲಿಲ್ಲ. ಹೆಣ್ಣೂರು ಜಂಕ್ಷನ್ ಆಯೋಧ್ಯ ಜಂಕ್ಷನ್ ಮೂಲಕ ಸಂಚರಿಸಬೇಕು.
* ಇನ್ನೂ ಟ್ಯಾನರಿ ಮುಖ್ಯ ರಸ್ತೆ ಕಡೆಯಿಂದ ಥಣಿಸಂದ್ರದ ಕಡೆಗೆ ಸಂಚರಿಸುವ ವಾಹನಗಳು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ಮಾರ್ಗವಾಗಿ ಡೇವಿಸ್ ರಸ್ತೆ ಹೆಚ್.ಎಂ ರಸ್ತೆ ಜಂಕ್ಷನ್ ನೇರವಾಗಿ ರಾಜಮರಂ ಆಯೋಧ್ಯ ಜಂಕ್ಷನ್ ಮೂಲಕ ವರ್ತೂಲ ರಸ್ತೆ- ನಾಗವಾರ ಹೆಪ್ಪಾಡು ಜಂಕ್ಷನ್ ಜಂಕ್ಷನ್- ನಾಗವಾರ ಸಿದ್ದಣ್ಣನವರ ಜಂಕ್ಷನ್ ಕಡೆಗೆ ಥಣಿಸಂದ್ರದತ್ತ ಚಲಿಸಬಹುದು.

* ನೇತಾಜಿ ಜಂಕ್ಷನ್ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ ಹೋಗುವ ವಾಹನಗಳನ್ನು ಬದಲಿಸಿ ನೇತಾಜಿ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಎಂ.ಎಂ ರಸ್ತೆ ಮಾಸ್ಕ್ ಜಂಕ್ಷನ್‌ನಲ್ಲಿ ಎಡತಿರುವು ಕ್ಲಾರೆನ್ಸ್ ಬ್ರಿಡ್ಜ್ ಬಲ ತಿರುವು ಪಾಟರಿ ರಸ್ತೆ ಹೆಚ್.ಎಂ. ರಸ್ತೆ ಮೂಲಕ ಲಿಂಗರಾಜಪುರಂ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
* ನೇತಾಜಿ ಜಂಕ್ಷನ್ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ನೇತಾಜಿ ಜಂಕ್ಷನ್‌ನಿಂದ ಬಲತಿರುವು ಪಡೆದು ಎಂ.ಎಂ ರಸ್ತೆಯಲ್ಲಿ ನೇರವಾಗಿ ಚಲಿಸಿ ಪಾಟರಿ ರಸ್ತೆ ಆಂಡರ್ ಬ್ರಿಡ್ಜ್ ಮುಖಾಂತರ ಪಾಟರಿ ರಸ್ತೆ ಮಾರ್ಗವಾಗಿ ತೆರಳಿ ಅಲ್ಲಿಂದ ತಿರುವು ಪಡೆದು ಹೆಚ್.ಎಂ. ಮೂಲಕ ಲಿಂಗರಾಜಪುರಂ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಬಹುದು.
* ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್ ಕಡೆಗೆ ಸಂಚಾರ ಮಾರ್ಗ ಮಾಡಿ ಲಾಜರ್ ರಸ್ತೆಯಲ್ಲಿ ಸಂಚರಿಸಿ ಬದಲಾವಣೆ ಅಂಡರ್ ಬ್ರಿಡ್ಜ್ ಮುಖಾಂತರ ಎಂ.ಎಂ ರಸ್ತೆ ತಲುಪಿ ಪುಲಕೇಶಿನಗರ ಕಡೆಗೆ ಸಂಚರಿಸಲು ಅವಕಾಶ ಮಾಡಿಕೊಡಲು ಅವಕಾಶ ಕಲ್ಪಿಸಲಾಗಿದೆ.
* ರೋಜರ್ ರಸ್ತೆ, ಆರ್ಮ್ ಸ್ಟ್ರಾಂಗ್ ರಸ್ತೆ ಹಾಗೂ ಹಾಲ್ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ವಿವಿಯಾನಿ ರಸ್ತೆ ಮುಖಾಂತರ ಪಾಟರಿ ರಸ್ತೆ ತಲುಪಿ ಲಾಜರ್ ರಸ್ತೆ ಅಂಡರ್ ಬ್ರಿಡ್ಜ್ ಮುಖಾಂತರ ಎಂ.ಎಂ ರಸ್ತೆ ತಲುಪಿ ಪುಲಕೇಶಿನಗರ ಕಡೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗುವುದು.
* ಮಾಸ್ಕ್ ಜಂಕ್ಷನ್ ಕ್ಲರೆನ್ಸ್ ಬ್ರಿಡ್ಜ್ ಮೂಲಕ ಪಾಟರಿ ರಸ್ತೆ ಕಡೆಗೆ ಸಂಚಾರ ಬದಲಾವಣೆ ಮಾಡಿ ಮಾಸ್ಟ್ ಜಂಕ್ಷನ್‌ನಿಂದ ಎಂ.ಎಂ ರಸ್ತೆ ಮುಖಾಂತರ ಲಾಜರ್ ರಸ್ತೆ ಅಂಡರ್ ಬ್ರಿಡ್ಜ್ ಮೂಲಕ ಪಾಟರಿ ರಸ್ತೆ ತಲುಪಿ ಹೆಚ್.ಎಂ.ಎಂ ಮುಖೇನವಾಗಿ ಲಿಂಗರಾಜಪುರಂ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಬಹುದು.
* ಲಾಜರ್ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್‌ನಿಂದ ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಬುದ್ಧ ವಿಹಾರ ರಸ್ತೆ ಮೂಲಕ ಹೋಗುವ ಸಂಚಾರ ಮಾರ್ಗ ಬದಲಾವಣೆ ಮಾಡಿ ಎಂ.ಎಂ ರಸ್ತೆ ಮೂಲಕ ಮಾಸ್ಕ್ ಜಂಕ್ಷನ್ ಎಡ ತೆರವು ಪಡೆದು ವಿಹಾರ ರಸ್ತೆ ಮೂಲಕ ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
* ಸಿಂಧಿ ಕಾಲೋನಿ ಜಂಕ್ಷನ್‌ನಿಂದ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ರಸ್ತೆ ಸಂಚಾರಕ್ಕೆ ಬದಲಾಗಿ, ಮಿಲ್ಲರ್ಸ್ ರಸ್ತೆ ಮೂಲಕ ಥಾಮಸ್ ಕೆಫೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸೆಂಟ್ ಜಾನ್ಸ್ ಚರ್ಚ್ ಮೂಲಕ ರಸ್ತೆ ವಾರ್ ಮೆಮೋರಿಯಲ್ ಜಂಕ್ಷನ್ ಸಂಚರಿಸಲು ಅವಕಾಶ ಮಾಡಲಾಗಿದೆ.
ಪಾರ್ಕಿಂಗ್ ನಿರ್ಬಂಧಿತ ಸ್ಥಳಗಳು
ಪಾಟರಿ ಸರ್ಕಲ್ ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್ ನಿಂದ ಗೋವಿಂದಪುರ ಕಾ ಮತ್ತು ಸು ಟೆಂಟ್ ಜಂಕ್ಷನ್ ವರೆಗೆ, ಎಂ.ಎಂ ರಸ್ತೆ, ಪಾ ರಸ್ತೆ, ಲಾಜರ್ ರಸ್ತೆ, ಬುದ್ಧ ವಿಹಾರ ರಸ್ತೆ, ಅಸ್ಸಾಯೇ ರಸ್ತೆಗಳ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications