Namma metro: ರಂಗೋಲಿಯಲ್ಲಿ ಅರಳಿದ ಸುಂದರ 'ಗಾಂಧೀಜಿ' ಕಲಾಕೃತಿ, ಫೋಟೊ
ಬೆಂಗಳೂರು, ಅಕ್ಟೋಬರ್ 02: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ 154ನೇ ಜನ್ಮ ದಿನೋತ್ಸವ ಆಚರಣೆಯನ್ನು ಬೆಂಗಳೂರು ಕರ್ನಾಟಕ ಸೇರಿದಂತೆ ದೇಶವೇ ಆಚರಿಸಿದೆ. ಇದರಲ್ಲಿ ನಮ್ಮ ಮೆಟ್ರೋ ನಿಲ್ದಾಣವೊಂದರಲ್ಲಿ ರಂಗೋಲಿ ಆರ್ಟ್ ವಿಶೇಷವಾಗಿ ಸಂಭ್ರಮಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಹಕಾರದಲ್ಲಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ರಂಗೋಲಿಯಲ್ಲಿ ಗಾಂಧೀಜಿ ಅರಳಿದ್ದಾರೆ. ರಂಗೋಲಿ ಆರ್ಟ್ ಸಂಸ್ಥೆ ಕಲಾವಿದ ಅಕ್ಷಯ್ ಜಾಲಿಹಾಳ್ ಅವರು ವಿವಿಧ ವರ್ಣಗಳ ರಂಗೋಲಿಯಲ್ಲಿ ಮೆಟ್ರೋ ನಿಲ್ದಾಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಈ ಕಲಾಕೃತಿಯನ್ನು ರಚಿಸಿದ್ದಾರೆ.

ಕೇವಲ ಮೆಟ್ರೋ ನಿಲ್ದಾಣ ಮತ್ತು ರಂಗೋಲಿ ಆರ್ಟ್ ಸಂಸ್ಥೆಯಲ್ಲಿ ಮಾತ್ರವಲ್ಲದೇ ಇಡಿ ಬೆಂಗಳೂನಾದ್ಯಂತೆ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಲಾಯಿತು. ಇದರಲ್ಲಿ ರಂಗೋಲಿಯಲ್ಲಿ ಅರಳಿ ಗಾಂಧೀ ತಾತಾ ಕಲಾಕೃತಿ ನಾಗರಿಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಹಲವು ಗಂಟೆಗಳ ಶ್ರಮದಿಂದ ಅರಳಿದ ಈ ಕಲಾಕೃತಿಯನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ಎಂಜಿ ರಸ್ತೆ ನಿಲ್ದಾಣದಲ್ಲಿ ಮೆಟ್ರೋ ರೈಲು ಹತ್ತಿಇಳಿಯುವ ಪ್ರಯಾಣಿಕರ ಅನೇಕರು ಸೆಲ್ಫಿ ಮತ್ತು ಫೋಟೋ ಕ್ಲಿಕ್ಕಿಸಿಕೊಳ್ಳುವಲ್ಲಿ ನಿರತರಾಗಿದ್ದ ದೃಶ್ಯ ಕಂಡು ಬಂತು.
ಈ ರಂಗೋಲಿ ಆರ್ಟ್ ಸಂಸ್ಥೆಯಿಂದ ವರ್ಷಗಳಿಂದಲೂ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಸಂಸ್ಥೆ ಮತ್ತು ಅದರ ಆವರಣದಲ್ಲಿ ವಿವಿಧ ಬಗೆಯ ಕಲಾಕೃತಿಗಳು, ಫೋಟೊಗಳು ಕಾಣಿಸುತ್ತವೆ. ಹೆಸರೇ ಹೇಳುವಂತೆ ರಂಗೋಲಿಯಲ್ಲಿ ಕಲಾವಿದರು ಅನೇಕ ಕೆಲೆಗಳನ್ನು ಪ್ರದರ್ಶನ ಮಾಡುತ್ತಾರೆ ಬಂದಿದ್ದಾರೆ. ಆಯಾಯ ಆಚರಣೆ, ಸಂದರ್ಭಗಳಿಗೆ ತಕ್ಕಂತೆ ಸಂಸ್ಥೆಯ ಕಲಾವಿದರ ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ.












Click it and Unblock the Notifications