ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ: ವ್ಯಾಟ್ ಇಳಿಸಲ್ಲ ಅಂದ್ರು ಎಚ್ಡಿಕೆ
Recommended Video

ಬೆಂಗಳೂರು, ಆಗಸ್ಟ್ 31: ಪೆಟ್ರೋಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಇಳಿಯುವಂತೆ ಕಾಣುತ್ತಿಲ್ಲ ಹೀಗಿದ್ದರೂ ಕೂಡ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಇಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದೀಗ ಪೆಟ್ರೋಲ್ ಬೆಲೆ 81ರೂ ತಲುಪಿದೆ, ಡೀಸೆಲ್ ಬೆಲೆ 71 ಆಗಿದೆ, ಈಗಲಾದರೂ ಸ್ಥಳೀಯ ತೆರಿಗೆಯನ್ನು ಇಳಿಸಿ ಗ್ರಾಹಕರಿಗೆ ಸರ್ಕಾರ ನೆರವಾಗುವುದೇ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ದರ ಏರಿಕೆಯಾಗುತ್ತಿದ್ದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗಳ ದರ ಗರಿಷ್ಠ ಮಟ್ಟವನ್ನು ಈಗಾಗಲೇ ತಲುಪಿದೆ.

ಸದ್ಯಕ್ಕೆ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್‌ಗಳ ಟಿಕೆಟ್ ದರ ಹೆಚ್ಚಿಗೆ ಮಾಡಿಲ್ಲ ಅದೂ ಆದರೆ ಸಾರ್ವಜನಿಕರಿಗೆ ಇನ್ನೂ ಕಷ್ಟವಾಗಲಿದೆ. ಸ್ವಂತ ವಾಹ ಬಿಟ್ಟು ಈಗಾಗಲೇ ಸಮೂಹ ಸಾರಿಗೆ ಮೊರೆ ಹೋಗುತ್ತಿದ್ದಾರೆ.
ಮೆಟ್ರೋ, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.ಬಿಜೆಪಿ ಗೆ ಹೋಲಿಸಿದರೆ ರಾಜ್ಯದಲ್ಲಿಯೇ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಅಗ್ಗ. ಸಾಲಮನ್ನಾದಂಥ ಯೋಜನೆಗಳಿಗೆ ಹಣ ಕ್ರೋಢೀಕರಿಸಲು ನಾವು ಆದ್ಯತೆ ನೀಡಿದ್ದೇವೆ, ತೆರಿಗೆ ತಗ್ಗಿಸುವ ಪ್ರಿಸ್ಥಿತಿಯಲ್ಲಿ ನಾವಿಲ್ಲ ಎನ್ನುತ್ತಿದ್ದಾರೆ.
ಕಳೆದ ಬುಧವಾರ ದಾಖಲೆಯ ಮಟ್ಟಕ್ಕೆ ಇಂಧನ ದರಗಳು ಏರಿಕೆಯಾಗಿದ್ದವು.ಬೆಂಗಳೂರಿನಲ್ಲಿ ಡೀಸೆಲ್ ದರ ಲೀಟರ್ ಗೆ 71.99 ಪೆಟ್ರೋಲ್ ದರ 80.73ಕ್ಕೆ ಏರಿಕೆಯಾಗಿದ್ದವು.
ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲ್ , ಡೀಸೆಲ್ ಅನ್ನು ತರಬೇಕು ಎನ್ನುವ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ರಾಜ್ಯಗಳು ಅಷ್ಟೇನೂ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ, ಒಂದು ವೇಳೆ ಜಿಎಸ್ ಟಿ ವ್ಯಾಪ್ತಿಗೆ ಬಂದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ.












Click it and Unblock the Notifications