ಸೆ. 1ರಿಂದ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ

ಬೆಂಗಳೂರು, ಆಗಸ್ಟ್ 21: ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆಪ್ಟೆಂಬರ್ 1 ರಿಂದ ಟೋಲ್ ಶುಲ್ಕ ಹೆಚ್ಚಳವಾಗಲಿದೆ. ಟ್ರಕ್ ಹಾಗೂ ಬಸ್‌ಗಳು ಹಾದು ಹೋಗುವ ಶುಲ್ಕವನ್ನು ಕ್ರಮವಾಗಿ 10ರೂ., ಮತ್ತು 5 ರೂ. ಹೆಚ್ಚಿಸಲಾಗಿದೆ.

ಮಾಸಿಕ ಪಾಸ್ ದರವನ್ನು 140ರೂ.ನಷ್ಟು ಹೆಚ್ಚಿಸಲಾಗಿದೆ. ಇನ್ನುಮುಂದೆ ಇವರು ತಿಂಗಳಿಗೆ 4865 ರೂ. ಪಾವತಿಸಬೇಕಾಗುತ್ತದೆ. ಲಘು ವಾಣಿಜ್ಯ ವಾಹನಗಳ ಮಾಸಿಕ ಪಾಸ್ ದರವನ್ನು 75ರೂ.ಗೆ ಏರಿಸಲಾಗಿದೆ. ತಾವು ಬೆಳೆದ ತರಕಾರಿಗಳನ್ನು ನಿತ್ಯ ಮಾರುಕಟ್ಟೆಗೆ ಸಾಗಿಸುವ ರೈತರ ಮೇಲೆ ಇದರಿಂದ ಹೊರೆ ಹೆಚ್ಚಬಹುದು ಎಂದು ಹೇಳಲಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಶುಲ್ಕವನ್ನು ಪರಿಷ್ಕರಿಸಿದ್ದು, ಇದಕ್ಕೆ ಅಧಿಕೃತ ಒಪ್ಪಿಗೆಯೂ ದೊರೆತಿದೆ. ಇದರಿಂದ ನಿತ್ಯ ಪ್ರಯಾಣಿಸುವವರು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.

From September 1 Bengaluru-Hassan National Highway Toll To Go Up Know More

ಕೊರೊನಾದಿಂದಾಗಿ ಜನರ ಬದುಕು ಮೂರಾಬಟ್ಟೆಯಾಗಿದೆ, ಉದ್ಯೋಗವಿಲ್ಲದೆ ಎಷ್ಟೋ ತಿಂಗಳು ಹಾಗೆಯೇ ಕುಳಿತಿದ್ದಾರೆ, ಹೀಗಾಗಿ ಸರ್ಕಾರ ಕೂಡಲೇ ಹೆದ್ದಾರಿ ಶುಲ್ಕ ಪರಿಷ್ಕರಣೆ ನಿರ್ಧಾರ ಕೈಬಿಡಬೇಕು. ಅಥವಾ ಇನ್ನು ಎರಡು ವರ್ಷ ಇದನ್ನು ಮುಂದೂಡಲೇಬೇಕು, ಇಲ್ಲವಾದಲ್ಲಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ.

ಟ್ಯಾಕ್ಸಿ, ಲಾರಿ ಹಾಗೂ ಟ್ರಕ್‌ಗಳು ಒಂದೆಡೆಯಿಂದ ಮತ್ತೊಂದು ಕಡೆ ಸರಕು ಸಾಗಣೆ ಮಾಡುವುದರಿಂದ ಸರ್ಕಾರಕ್ಕೆ ಆದಾಯ ಹರಿದುಬರುತ್ತದೆ. ಕೋವಿಡ್‌ನಿಂದ ಟ್ರಾವೆಲ್ಸ್ ಮಾಲೀಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.

ಬೆಂಗಳೂರು-ತುಮಕೂರು-ಹಾಸನ-ಶಿವಮೊಗ್ಗದ ನಡುವೆ ಪ್ರಯಾಣಿಸುವವರು ನೆಲಮಂಗಲ ಹಾಗೂ ಕಾರ್ಬೈಲು ಟೋಲ್ ಸಂಗ್ರಹ ಕೇಂದ್ರಗಳ ಮೂಲಕ ಹಾದು ಹೋಗಬೇಕಾಗುತ್ತದೆ.

ಟೋಲ್ ಮೂಲಕ ಹೋಗಿ ಮತ್ತೆ ಹಿಂದಕ್ಕೆ ಬರುವ ಕಾರುಗಳು ನೆಲಮಂಗಲ ಟೋಲ್‌ನಲ್ಲಿ ಇನ್ನುಮುಂದೆ 65ರ ಬದಲು 70 ರೂ. ಪಾವತಿ ಮಾಡಬೇಕು. ಒಂದೇ ಬಾರಿ ಟೋಲ್ ಸಂಗ್ರಹ ಕೇಂದ್ರದ ಮೂಲಕ ಹಾದುಹೋಗುವ ಕಾರುಗಳು ಮೊದಲಿನಂತೆ 45ರೂ. ಶುಲ್ಕವನ್ನು ಪಾವತಿಸಬೇಕು. ಮಾಸಿಕ ಪಾಸ್ ದರವನ್ನು 40ರೂ(1390)ಗೆ ಹೆಚ್ಚಳ ಮಾಡಲಾಗಿದೆ.

ವಾಹನ ಸವಾರರು ಕನಿಷ್ಠ ಪಕ್ಷ ಟೋಲ್‌ ಶುಲ್ಕವನ್ನಾದರೂ ಕಡಿಮೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ವಾಹನ ಸವಾರರ ಬೇಡಿಕೆಗೆ ವಿರುದ್ಧವಾಗಿ ಟೋಲ್‌ ಶುಲ್ಕಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಈಗ ನಮ್ಮ ನೆರೆ ರಾಜ್ಯ ತಮಿಳುನಾಡಿನಲ್ಲಿರುವ ಟೋಲ್ ಗಳ ಶುಲ್ಕವನ್ನು ಶೀಘ್ರವೇ ಹೆಚ್ಚಿಸಲಾಗುವುದು ಎಂದು ವರದಿಯಾಗಿದೆ.

ತಮಿಳುನಾಡಿನ ಒಟ್ಟು 14 ಟೋಲ್‌ಗೇಟ್‌ಗಳಲ್ಲಿ ಶುಲ್ಕವನ್ನು ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಟೋಲ್ ಶುಲ್ಕವು 8% ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.

ಮೂಲಗಳ ಪ್ರಕಾರ, ತಿರುಚಿ - ದಿಂಡಿಗಲ್ ರಸ್ತೆಯ ಪೊನ್ನಂಬಲ ಪಟ್ಟಿ ಟೋಲ್‌ ಗೇಟ್ ಹಾಗೂ ತಂಜಾವೂರು - ತಿರುಚಿ ರಸ್ತೆಯ ವಾಜವದಂ ಕೋಟೈ ಟೋಲ್‌ ಗೇಟ್‌ನಲ್ಲಿ ಟೋಲ್ ಶುಲ್ಕ ಹೆಚ್ಚಾಗಲಿದೆ.

ಈ ಸುದ್ದಿ ಹೊರ ಬರುತ್ತಿದ್ದಂತೆ ವಾಹನ ಸವಾರರು ಮತ್ತಷ್ಟು ಚಿಂತಾ ಕ್ರಾಂತರಾಗಿದ್ದಾರೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಭಾರತದ ವಿವಿಧ ನಗರಗಳಲ್ಲಿ ಈಗಾಗಲೇ ರೂ. 100 ಗಳ ಗಡಿ ದಾಟಿದೆ.

ಆದರೆ ಕೆಲವು ಮೂಲಗಳ ಪ್ರಕಾರ ತಮಿಳುನಾಡಿನ 14 ಟೋಲ್‌ ಪ್ಲಾಜಾಗಳಲ್ಲಿ ಟೋಲ್ ಶುಲ್ಕವು ಹೆಚ್ಚಾಗಲಿದೆ. ವರದಿಗಳ ಪ್ರಕಾರ, ತಿಂಡಿವನಂ - ಉಳುಂದೂರು ಪೇಟೈಯ ರಸ್ತೆಯ ವಿಕ್ರವಾಂಡಿ ಟೋಲ್‌ ಗೇಟ್ ಹಾಗೂ ಉಳುಂದೂರು ಪೇಟೈ - ಬದಲೂರು ರಸ್ತೆಯ ತಿರುಮಂತುರೈ ಟೋಲ್‌ ಪ್ಲಾಜಾಗಳಲ್ಲಿ ಟೋಲ್ ಶುಲ್ಕವು ಹೆಚ್ಚಾಗಲಿದೆ.

ಚೆನ್ನೈ - ಟಾಡಾ ರಸ್ತೆಯ ನಲ್ಲೂರು ಟೋಲ್‌ ಗೇಟ್ ಹಾಗೂ ಸೇಲಂ - ಕುಮಾರ ಪಾಳ್ಯಂ ರಸ್ತೆಯಲ್ಲಿ ವೈಕುಂಠಂ ಟೋಲ್‌ ಗೇಟ್‌ನಲ್ಲಿ ಶುಲ್ಕಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಸೇಲಂ - ಉಳುಂದೂರು ಪೇಟೈಯ ರಸ್ತೆಯಲ್ಲಿರುವ ಮೆಟ್ಟುಪಟ್ಟಿ ಟೋಲ್‌ ಗೇಟ್‌ನಲ್ಲಿಯೂ ಟೋಲ್ ಶುಲ್ಕ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಟೋಲ್ ಶುಲ್ಕ ದರ ಏರಿಕೆ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಹೈರಣಾಗಿರುವ ವಾಹನ ಸವಾರರು ಟೋಲ್ ಶುಲ್ಕ ಏರಿಕೆಯ ಸುದ್ದಿ ಕೇಳಿ ಕಂಗಲಾಗಿದ್ದಾರೆ.

ಆದರೆ ಟೋಲ್ ಶುಲ್ಕ ಏರಿಕೆ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಿನ ವಾರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಗಳಿವೆ.

ವಾಹನ ಸವಾರರು ಗಂಟೆ ಗಟ್ಟಲೇ ಟೋಲ್ ಪ್ಲಾಜಾಗಳಲ್ಲಿ ಕಾಯುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.

ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಗಳನ್ನು ವಾಹನಗಳ ಮುಂಭಾಗದ ವಿಂಡ್ ಶೀಲ್ಡ್ ಮೇಲೆ ಅಳವಡಿಸಲಾಗುತ್ತದೆ. ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಹೊಂದಿರುವ ವಾಹನಗಳು ಟೋಲ್ ಪ್ಲಾಜಾ ಮೂಲಕ ಹಾದು ಹೋದಾಗ ಸಂಬಂಧಿಸಿದ ಟೋಲ್ ಶುಲ್ಕವು ಫಾಸ್ಟ್ ಟ್ಯಾಗ್ ಖಾತೆಯಿಂದ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

Recommended Video

      RCB ಆಟಗಾರರು ಈಗ ಎಲ್ಲಿದ್ದಾರೆ , ಸಿದ್ದತೆ ಹೇಗಿದೆ ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+