ಇನ್ನು ಗ್ರಾಮದಲ್ಲೂ ಹೆಲ್ಮೆಟ್ ಧರಿಸಿಯೇ ಬೈಕ್ ಓಡಿಸಿ
ಬೆಂಗಳೂರು, ಡಿ. 22: ರಾಜ್ಯದ ನಗರ ಪ್ರದೇಶದಲ್ಲಿ ಹೆಲ್ಮೆಟ್ ಕಡ್ಡಾಯ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಬೆಳಗಾವಿ ಸೇರಿದಂತೆ ಕೆಲವು ನಗರಗಳಲ್ಲಿ ಈ ಕಾನೂನನ್ನೂ ಸರಿಯಾಗಿ ಜಾರಿಗೊಳಿಸಿಲ್ಲ.
ಆದ್ದರಿಂದ ರಾಜ್ಯದ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗುವುದು. ನಿಯಮವನ್ನು ಸರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. [ಬೆಂಗಳೂರಿಗರೆ ಹೆಲ್ಮೆಟ್ ಧರಿಸಿ, ಇಲ್ಲವೇ ದಂಡ ಕಟ್ಟಿ]

ಜನರಲ್ಲಿ ರಸ್ತೆ ಸುರಕ್ಷೆ ಕುರಿತು ಅರಿವು ಮೂಡಿಸಬೇಕೆಂದು ಕೇಂದ್ರ ಸರ್ಕಾರ ಸ್ಪಷ್ಟ ಮಾರ್ಗದರ್ಶನ ನೀಡಿದೆ. ಈ ವಾರವನ್ನು ಸುರಕ್ಷಿತ ರಸ್ತೆ ಸಪ್ತಾಹವಾಗಿ ಆಚರಿಸಲಾಗುತ್ತಿದೆ. ಆದ್ದರಿಂದ 2015ರ ಜನವರಿ ತಿಂಗಳ ಮೊದಲ ವಾರದಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗುವುದು. [ಬೈಕ್ ಸವಾರರ ತಲೆಗೆ ಹೆಲ್ಮೆಟ್ ಹಾಕಿದ ಸರ್ಕಾರ]
ರಸ್ತೆ ಸಾರಿಗೆಯಲ್ಲಿ ಸುರಕ್ಷತೆ ಪಾಲಿಸಲು ಹೆಲ್ಮೆಟ್ ಕಡ್ಡಾಯ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕೆಂದು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ದ್ವಿಚಕ್ರ ವಾಹನ ಪ್ರಯಾಣದಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವ ಕುರಿತು ಯೋಚಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.












Click it and Unblock the Notifications