ಸಿಬಿಐ ತನಿಖೆಗಾಗಿ ತಿವಾರಿ ಗೆಳೆಯರಿಂದ ಮೊಂಬತ್ತಿ ಮೆರವಣಿಗೆ
ಮೇ 17ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಶವವಾಗಿ ಪತ್ತೆಯಾಗಿದ್ದ ತಿವಾರಿ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ಅವರ ಗೆಳೆಯರು ಶನಿವಾರ ಮೊಂಬತ್ತಿ ಮೆರವಣಿಗೆ ನಡೆಸಿದ್ದಾರೆ.
ಬೆಂಗಳೂರು, ಮೇ 21: ಅನುಮಾನಾಸ್ಪದವಾಗಿ ಸಾವಿಗೀಡಾದ ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ.
ಮೇ 17ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಶವವಾಗಿ ಪತ್ತೆಯಾಗಿದ್ದ ತಿವಾರಿ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಅವರ ಗೆಳೆಯರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಅವರ ಸಹೋದರರೂ ಸಿಬಿಐ ತನಿಖೆಗೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.[ಆಯುಕ್ತ ಅನುರಾಗ್ ತಿವಾರಿ ಸಾವು; ಏನು ಹೇಳ್ತಾರೆ ಪೊಲೀಸರು?]
ಈ ಹಿಂದೆ ಬಿಜೆಪಿ ನಾಯಕರು ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೇಳಿಕೊಂಡಿದ್ದರು. ಇದೀಗ ಸಾರ್ವಜನಿಕರೂ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಹೇಳುತ್ತಿದ್ದಾರೆ.

ಯುನಿವರ್ಸಿಟಿ ಗೆಳೆಯರಿಂದ ಪ್ರತಿಭಟನೆ
ಅನುರಾಗ್ ತಿವಾರಿಯವರು ಓದುತ್ತಿದ್ದ ಕಾಲೇಜಿನ ಗೆಳೆಯರು ಮತ್ತು ಮದನ್ ಮೋಹನ್ ಮಾಳವೀಯ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಗಳು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಶನಿವಾರ ಕ್ಯಾಂಡಲ್ ಲೈಟ್ ಮೆರವಣಿಗೆ ನಡೆಸಿದ್ದಾರೆ.[ಇಲಾಖೆ ಭ್ರಷ್ಚಾಚಾರ ಬಯಲಿಗೆಳೆದ್ದಿದ್ದೇ ತಿವಾರಿ ಸಾವಿಗೆ ಕಾರಣವಾಯ್ತೆ?]

ಸಹಪಾಠಿಗಳಿಂದ ಪ್ರತಿಭಟನೆ
ಇನ್ನು ಎಚ್.ಎಸ್.ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್ ನಲ್ಲಿ ಅವರ ಸಹಪಾಠಿಗಳು ಕ್ಯಾಂಡಲ್ ಲೈಟ್ಸ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ತಿವಾರಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಅವರು ಒತ್ತಾಯಿಸಿದರು.[ತಿವಾರಿ ಸಾವಿನ ಕೇಸ್, ಶೋಭಾ ಮನವಿ ಪುರಸ್ಕರಿಸಿದ ಸಿಎಂ ಯೋಗಿ]

ಕುಟುಂಬಸ್ಥರಿಂದ ಪ್ರಧಾನಿಗೆ ಪತ್ರ
ಉತ್ತರ ಪ್ರದೇಶದ ಹಜರತ್ ಗಂಜ್ ಪ್ರದೇಶದಲ್ಲಿ ಅನುಮಾನಸ್ಪದ ಸಾವಿಗೀಡಾಗಿದ್ದ ಅನುರಾಗ್ ತಿವಾರಿ ಪ್ರಕಣವನ್ನು ಸಿಬಿಐ ನಿಂದ ತನಿಖೆಗೆ ಒಳಪಡಿಸಬೇಕು ಎಂದು ಕೋರಿ ಅವರ ಸಹೋದರ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ದಕ್ಷ, ಪ್ರಮಾಣಿಕರಾಗಿದ್ದಕ್ಕೆ ತಿವಾರಿಯನ್ನು ಕೊಲೆ ಮಾಡಲಾಗಿದೆ. ಅವರು ಹಗರಣವೊಂದನ್ನು ಬಯಲಿಗೆಳೆಯಲಿದ್ದರು. ಈ ಕಾರಣಕ್ಕೆ ಅವರ ಮೇಲೆ ಹಿರಿಯ ಅಧಿಕಾರಿಗಳು ಒತ್ತಡ ಹೇರಿದ್ದರು ಮತ್ತು ಅವರನ್ನು ಟಾರ್ಗೆಟ್ ಮಾಡಿದ್ದರು ಎಂದು ಹೇಳಿದ್ದಾರೆ.[ಮತ್ತೊಬ್ಬ ಡಿಕೆ ರವಿ? ಅನುರಾಗ್ ತಿವಾರಿ ಸಾವಿನಲ್ಲೂ ರಾಜಕೀಯ]

ಯೋಗಿಗೆ ಪತ್ರ ಬರೆದ ಸಿದ್ದರಾಮಯ್ಯ
ಕರ್ನಾಟಕ ರಾಜ್ಯ ಆಹಾರ ಇಲಾಖೆ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಅವರ ಸಾವಿನ ತನಿಖೆ ಕುರಿತಂತೆ ಅನೇಕ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಸರಿಯಾದ ತನಿಖೆ ನಡೆಸಿ, ಸತ್ಯಾಸತ್ಯತೆ ಹೊರಬರಲಿ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.
ಜತೆಗೆ ಪ್ರಕರಣದ ತನಿಖೆ ಬಗ್ಗೆ ಗಮನ ಹರಿಸಲು ಇಬ್ಬರು ಐಎಎಸ್ ಅಧಿಕಾರಿಗಳಾದ ಅಭಿರಾಮ್ ಶಂಕರ್ ಮತ್ತು ಪಂಕಜ್ ಕುಮಾರ್ ಪಾಂಡೆಯವರನ್ನು ಸಿದ್ಧರಾಮಯ್ಯ ನೇಮಿಸಿದ್ದಾರೆ.

ಅನುಮಾನಾಸ್ಪದ ಸಾವು
ರಾಜ್ಯ ಸರ್ಕಾರದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ಕುಂದುಕೊರತೆ ಇಲಾಖೆಯ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಅವರು ಲಕ್ನೋದಲ್ಲಿ ಮೇ 17ರಂದು ಸಾವಿಗೀಡಾಗಿದ್ದರು. ಬುಧವಾರ ಬೆಳಗಿನ ಜಾವ ಅವರ ಶವ ಹಜರತ್ ಗಂಜ್ ಪ್ರಾಂತ್ಯದ ಮೀರಾಬಾಯಿ ಗೆಸ್ಟ್ ಹೌಸ್ ನಿಂದ ಸುಮಾರು 50 ಮೀ. ದೂರದಲ್ಲೇ ಪತ್ತೆಯಾಗಿತ್ತು. ದಾರಿ ಹೋಕರು ಇದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಶವದ ಪ್ಯಾಂಟ್ ಜೇಬುಗಳನ್ನು ಪರಿಶೀಲಿಸಿದಾಗ, ಮೃತ ವ್ಯಕ್ತಿಯ ಹೆಸರು, ವಿಳಾಸ ಹಾಗೂ ಅವರು ಕರ್ನಾಟಕದಲ್ಲಿ ಆಹಾರ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವುದರ ವಿವರಗಳು ಲಭ್ಯವಾಗಿದ್ದವು.[ತಿವಾರಿ ಸಾವು: ತನಿಖೆಗೆ ಕೋರಿ ಯೋಗಿಗೆ ಪತ್ರ ಬರೆದ ಸಿದ್ದರಾಮಯ್ಯ]












Click it and Unblock the Notifications