ಬೆಂಗಳೂರಲ್ಲಿ ಫ್ರೀ ಒಬ್ಬಟ್ಟು & ಪಲಾವ್ ಎಲ್ಲಿ, ಯಾಕೆ ಇಲ್ಲಿದೆ ಡಿಟೇಲ್ಸ್‌

ಬೆಂಗಳೂರಿನ ಕೆಲವು ಕಡೆ ದುಡ್ಡು ಕೊಟ್ಟರೂ ಒಳ್ಳೆಯ ಊಟ ಸಿಗಲ್ಲ. ಅದರಲ್ಲೂ ಫ್ರೀ ಊಟದ್ದು ದೂರದ ಮಾತು. ಆದರೆ, ಬೆಂಗಳೂರಿನಲ್ಲಿ ನಿಮಗೆ ಅಕ್ಟೋಬರ್‌ 2ರಂದು ಬೆಂಗಳೂರಿನ ಈ ಭಾಗದಲ್ಲಿ ವೆಜಿಟೆಬಲ್‌ ಪಲಾವ್‌, ಕಾಯಿ ಒಬ್ಬಟ್ಟು, ಸಮೋಸ, ಹಣ್ಣು ಹಾಗೂ ಸಿಹಿ ತಿನಿಸು ಸೇರಿದಂತೆ ಹಲವು ಆಹಾರ ಪದಾರ್ಥಗಳು ಉಚಿತವಾಗಿ ಸಿಗಲಿದೆ. ಈ ರೀತಿ ಬೆಂಗಳೂರಿನಲ್ಲಿ ಉಚಿತವಾಗಿ ಊಟ ಹಾಗೂ ಸಿಹಿ ತಿನಿಸು ಕೊಡ್ತಾರೆ ಅಂದರೆ ಯಾವುದೋ ಅನ್ನಸಂತರ್ಪಣೆ, ಅನ್ನದಾನ ನಡೆಯುತ್ತಿರಬೇಕು ಎಂದು ಭಾವಿಸಬೇಡಿ. ಅದ್ಯಾವುದು ಅಲ್ಲ. ಇದು ಬೇರೆ ಈ ಕಾರ್ಯಕ್ರಮದ ವಿವರ ಇಲ್ಲಿದೆ.

ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಬುಧವಾರ (02-10-2024) ಫ್ರೀ ವೆಜಿಟೆಬಲ್‌ ಪಲಾವ್‌, ಕಾಯಿ ಒಬ್ಬಟ್ಟು, ಸಮೋಸ, ಹಣ್ಣುಗಳು, ಬಿಸ್ಕೆಟ್‌, ಬ್ಲಾಕ್‌ ಟೀ ಹಾಗೂ ಸಿಹಿ ತಿನಿಸುಗಳನ್ನು ವಿತರಿಸಲಾಗುತ್ತದೆ. ಫ್ರೀಯಾಗಿ ನೀಡುತ್ತಿರುವುದರ ಹಿಂದೆಯೂ ಒಂದು ಕಾರಣ ಇದೆ. ಈ ರೀತಿ ಫ್ರೀಯಾಗಿ ನೀಡುತ್ತಿರುವುದು ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ಅಕ್ಟೋಬರ್‌ 2ರಂದು ಸೂರ್ಯಗ್ರಹಣ ಇದೆ.

Free Obbattu amp amp Palau in Bengaluru where why Here are the details

ಸೂರ್ಯಗ್ರಹಣದ ದಿನದಂದು ವೈಜ್ಞಾನಿಕ ಮನೋಧರ್ಮದೊಂದಿಗೆ ಸೂರ್ಯಗ್ರಹಣ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ದಿನವನ್ನು ಮೂಢನಂಬಿಕೆ ವಿರೋಧಿ ಒಕ್ಕೂಟ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಪ್ರಗತಿಪರ ಸಂಘಟನೆಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ.

ರಾತ್ರಿ ತರಾವೇರಿ ಊಟ: ಅಕ್ಟೋಬರ್‌ 2ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ (ಬುಧವಾರ) ರಾತ್ರಿ 8ರ ನಂತರ ಉಚಿತವಾಗಿ ಫ್ರೀ ವೆಜಿಟೆಬಲ್‌ ಪಲಾವ್‌, ಕಾಯಿ ಒಬ್ಬಟ್ಟು, ಸಮೋಸ, ಹಣ್ಣುಗಳು, ಬಿಸ್ಕೆಟ್‌, ಬ್ಲಾಕ್‌ ಟೀ ಮತ್ತು ಸಿಹಿ ತಿನಿಸುಗಳನ್ನು ನೀಡಲಾಗುತ್ತದೆ.

Free Obbattu amp amp Palau in Bengaluru where why Here are the details

ಸೂರ್ಯಗ್ರಹಣ ಎನ್ನುವುದು ಪ್ರಕೃತಿಯಲ್ಲಿ ನಡೆಯುವ ಸಹಜ ಕ್ರಿಯೆಯಾಗಿದ್ದು, ಜನ ಇದರಲ್ಲಿ ಭಾಗವಹಿಸಬೇಕು. ಗ್ರಹಣ ಸಂಭವಿಸುವ ಸಮಯದಲ್ಲಿ ಏನು ತಿನ್ನುವುದಿಲ್ಲ. ಗ್ರಹಣವನ್ನು ನೋಡುವುದಿಲ್ಲ ಎಂದು ಕೆಲವರು ಹೇಳುತ್ತಾರೆ ಇದು ಮೂಢನಂಬಿಕೆ ಎನ್ನುವುದು ಮೂಢನಂಬಿಕೆ ವಿರೋಧಿ ಒಕ್ಕೂಟದ ಅಭಿಪ್ರಾಯವಾಗಿದೆ. ಹೀಗಾಗಿ, ಗ್ರಹಣದ ಸಮಯದಲ್ಲೇ ಈ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ.

ಹಲವು ವರ್ಷಗಳಿಂದ ಕಾರ್ಯಕ್ರಮ: ಮೂಢನಂಬಿಕೆ ವಿರೋಧಿ ಒಕ್ಕೂಟವು ಗ್ರಹಣದ ಸಂದರ್ಭಗಳಲ್ಲಿ ಈ ರೀತಿ ಉಚಿತ ಆಹಾರ ನೀಡುವ ಪದ್ಧತಿಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಬೆಂಗಳೂರಿನ ಹೃದಯಭಾಗವಾದ ಟೌನ್‌ಹಾಲ್‌ನಲ್ಲಿ ಹಲವು ವರ್ಷಗಳಿಂದ ಈ ಭಿನ್ನ ಆಚರಣೆ ನಡೆಯುತ್ತಿದ್ದು, ಈ ಆಚರಣೆಯಲ್ಲಿ ನೂರಾರು ಜನ ಭಾಗವಹಿಸುತ್ತಿದ್ದಾರೆ.

Free Obbattu amp amp Palau in Bengaluru where why Here are the details

ಪ್ರತಿ ಬಾರಿಯು ಗ್ರಹಣದ ಸಂದರ್ಭದಲ್ಲಿ ಹಿರಿಯರು, ಕಿರಿಯರು ಎನ್ನದೆ ನೂರಾರು ಜನ ಈ ಕಾರ್ಯಕ್ರಮದಲ್ಲಿ ಭಾಗಹಿಸುತ್ತಾರೆ. ಈ ಬಾರಿಯೂ ಸೂರ್ಯಗ್ರಹಣದ ಸಮಯದಲ್ಲಿ ನೂರಾರು ಜನ ಟೌನ್‌ಹಾಲ್‌ನಲ್ಲಿ ಸೇರುವ ನಿರೀಕ್ಷೆ ಇದೆ.

ಇದರ ಮತ್ತೊಂದು ವಿಶೇಷವೆಂದರೆ, ಕಾರ್ಯಕ್ರಮದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಆಸಕ್ತಿ ಇರುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂರ್ಯಗ್ರಹಣದ ಸಂದರ್ಭದಲ್ಲಿ ಸವಿ ಊಟವನ್ನು ಸವಿಯಬಹುದು ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+