ಉಚಿತ ಊಟ, ನೀರು, ಮಾಸ್ಕ್ ಒದಗಿಸುವ ಘೋಷಣೆ ಮಾಡಿದ MLC ಶರವಣ
ಬೆಂಗಳೂರು, ಏಪ್ರಿಲ್ 3: ಕೊರೊನಾ ವೈರಾಣು ಹರಡದಿರುವಂತೆ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಮಧ್ಯೆ ಇಂದಿರಾ ಕ್ಯಾಂಟೀನ್ ಕೂಡ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದ್ದು, ಉಚಿತ ಊಟ ವಿತರಣೆ ಬಂದ್ ಆಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಉಚಿತ ಆಹಾರ, ನೀರು ಹಾಗೂ ಮಾಸ್ಕ್ ವಿತರಣೆಗೆ ಜೆಡಿಎಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ನಿರ್ಧಾರ ಮಾಡಿದ್ದಾರೆ.
ಈ ಉದ್ದೇಶಕ್ಕಾಗಿ ಯಾರಿಗೆ ಅಗತ್ಯ ಇದೆಯೋ ಅವರ ಮನೆ ಬಾಗಿಲಿಗೇ ಆಹಾರ, ನೀರು, ಮಾಸ್ಕ್ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದು, ಅಪ್ಪಾಜಿ ಕ್ಯಾಂಟೀನ್ ವತಿಯಿಂದ ಉಚಿತವಾಗಿ ಈ ಸೌಲಭ್ಯ ಒದಗಿಸುವುದಾಗಿ ಶುಕ್ರವಾರದಂದು ಘೋಷಣೆ ಮಾಡಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರ ಇದೆ.

ಯಾರಿಗೆ ಈ ಉಚಿತ ಸೇವೆಯ ಅಗತ್ಯ ಇದೆಯೋ ಅಂಥವರು 24 ಗಂಟೆ ಮುಂಚಿತವಾಗಿ ಕರೆ ಮಾಡಬೇಕು. ಬೆಂಗಳೂರಿನ ಯಾವುದೇ ಭಾಗದಿಂದ ಕರೆ ಮಾಡಿದರೂ ಈ ಉಚಿತ ಸೇವೆ ಸೌಲಭ್ಯವನ್ನು ಪಡೆಯಬಹುದು. ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆ 9901771122 ಹಾಗೂ 9008888665.












Click it and Unblock the Notifications