ಬೆಂಗಳೂರಿನ ಫೀವರ್ ಕ್ಲಿನಿಕ್‌ನಲ್ಲಿ ಉಚಿತ ಕೊವಿಡ್ ಪರೀಕ್ಷೆ!
ಬೆಂಗಳೂರು, ಜುಲೈ 9: ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ನಿಯಂತ್ರಣಕ್ಕಾಗಿ ಬಿಬಿಎಂಪಿ ನೂತನ ಪ್ರಯತ್ನಕ್ಕೆ ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲಾಗಿದ್ದು, ಅದರಲ್ಲಿ ಉಚಿತ ಕೊವಿಡ್ ಪರೀಕ್ಷಾ ಮಾಡಲಾಗುತ್ತದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 395 ಪೊಲೀಸರಿಗೆ ಕೊರೊನಾ, 20 ಠಾಣೆ ಸೀಲ್ಡೌನ್
ಕೆಮ್ಮು, ಜ್ವರ, ಶೀತ, ನೆಗಡಿಯಿಂದ ಬಳಲುತ್ತಿದ್ದರೆ ಫೀವರ್ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬಹುದು. ವಿಶೇಷವಾಗಿ ಐಎಲ್ಐ ಹಾಗೂ ಎಸ್ಎಆರ್‌ಐ ಲಕ್ಷಣಗಳಿಂದ ಬಳಲುತ್ತಿರುವವರಿಗೆ ಉಚಿತ ಕೊರೊನಾ ಪರೀಕ್ಷೆ ಮಾಡಲಾಗುವುದು.
ವೈದ್ಯರ ಸಲಹೆ ಮೆರೆಗೆ ಐಎಲ್ಐ ಹಾಗೂ ಎಸ್ಎಆರ್‌ಐ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹಾಗೂ ಕೆಮ್ಮು, ಜ್ವರ, ಶೀತ, ನೆಗಡಿಯಿಂದ ಬಳಲುತ್ತಿವವರಿಗೆ ಉಚಿತ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ಇನ್ನು ಖಾಸಗಿ ಆಸ್ಪತ್ರೆಗಳಲ್ಲೂ ಜ್ವರ ಅಥವಾ ಎಸ್ಎಆರ್ಐ ರೋಗಿಗಳಿಗೆ ಹೊರರೋಗಿ ಸೇವೆಗಳನ್ನು ವೆಚ್ಚ ಭರಿಸಿ ಪಡೆಬಹುದು. ಖಾಸಗಿ ಆಸ್ಪತ್ರೆ ಹಾಗೂ ಸ್ಯಾಂಪಲ್ ಸಂಗ್ರಹಕ್ಕೆ 350 ರೂಪಾಯಿ ನಿಗದಿ ಮಾಡಲಾಗಿದೆ.