ಇನ್ಸ್ ಪೆಕ್ಟರ್ ರಫೀಕ್ ಬೆಳಗ್ಗೆ ಅರೆಸ್ಟ್, ಸಂಜೆಗೆ ರಿಲೀಸ್

ಬೆಂಗಳೂರು, ಜು. 18: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಬಂಧಿತರಾಗಿದ್ದ ಪುಲಿಕೇಶಿನಗರ ಇನ್ಸ್ ಪೆಕ್ಟರ್ ಮಹಮ್ಮದ್ ರಫೀಕ್ ಅವರು ಸಂಜೆ ವೇಳೆಗೆ ರಿಲೀಸ್ ಆಗಿದ್ದಾರೆ. ಇತ್ತೀಚೆಗೆ ಫ್ರೇಜರ್‌ಟೌನ್ ಬಳಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತಂತೆ ಸರಿಯಾದ ರೀತಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳದೆ ಕರ್ತವ್ಯ ಲೋಪ ಎಸಗಿದ ಆರೋಪವನ್ನು ರಫೀಕ್ ಎದುರಿಸುತ್ತಿದ್ದಾರೆ.

ಇದೀಗ ಬಂದಿರುವ ಸುದ್ದಿ: ಇನ್ಸ್ ಪೆಕ್ಟರ್ ರಫೀಕ್ ಅವರನ್ನು ಬಂಧಿಸಿದ ಮೇಲೆ ಸುಮಾರು ಎರಡೂವರೆ ಗಂಟೆಗಳ ಕಾಲ ಹಲಸೂರು ಠಾಣೆ ಎಸಿಪಿ ಮಂಜುನಾಥ್ ಅವರು ವಿಚಾರಣೆ ನಡೆಸಿದ್ದರು. ನಂತರ ರಫೀಕ್ ಅವರಿಗೆ ಸ್ಟೇಷನ್ ಜಾಮೀನು ನೀಡಲಾಯಿತು. ವಿಚಾರಣೆಗೆ ಕರೆದಾಗ ಕೂಡಲೇ ಬರಬೇಕು. ಪ್ರತಿದಿನ ಸ್ಟೇಷನ್ ಗೆ ಬಂದು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ರಫೀಕ್ ರನ್ನು ಬಿಡುಗಡೆ ಮಾಡಲಾಗಿದೆ.

ಫ್ರೇಜರ್‌ಟೌನ್ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪುಲಿಕೇಶಿನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಹ್ಮದ್ ರಫೀಕ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಎಫ್ ಐಆರ್ ಹಾಕುವಂತೆ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರ ಆದೇಶಿಸಿದ್ದರು. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 166(ಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. [ಇನ್ಸ್ ಪೆಕ್ಟರ್ ಮೇಲೆ ಎಫ್ಐಆರ್]

Pulakeshinagar Police Inspector Mohammad Rafiq arrested

ಅದರಂತೆ ರಫೀಕ್ ಅವರ ಪತ್ತೆಗೆ ಹಲಸೂರು ಠಾಣೆ ಎಸಿಪಿಯೊಬ್ಬರಿಗೆ ಜವಾಬ್ದಾರಿ ವಹಿಸಲಾಗಿತ್ತು. ಇಂದು ಬೆಳಗ್ಗೆ ರಫೀಕ್ ಅವರನ್ನು ಪತ್ತೆಹಚ್ಚಿ ಆಯುಕ್ತರ ಮುಂದೆ ಹಾಜರು ಪಡಿಸಲಾಗಿದೆ ಎಂದು ಡಿಸಿಪಿ ಸತೀಶ್‌ಕುಮಾರ್ ಅವರು ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪುಲಿಕೇಶಿನಗರ(ಈ ಹಿಂದಿನ ಫ್ರೇಜರ್ ಟೌನ್) ಠಾಣಾಧಿಕಾರಿಗಳು ಹಾಗೂ ಹಲಸೂರು ಠಾಣೆ ಎಸಿಪಿ ಅವರು ನಾಪತ್ತೆಯಾಗಿರುವ ಇಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಡಿಸಿಪಿ ಸತೀಶ್ ಹೇಳಿದರು.

22 ವರ್ಷದ ಯುವತಿ ನ್ಯಾಯಕೋರಿ ಠಾಣೆಗೆ ಬಂದಾಗ ಐಪಿಸಿ ಸೆಕ್ಷನ್ 376(ರೇಪ್) ಬದಲಾಗಿ ಐಪಿಸಿ ಸೆಕ್ಷನ್ 364 ಎ(ಕಿಡ್ನಾಪ್) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ರಫೀಕ್ ಅವರು ಈಗ ಬಂಧಿತರಾಗಿದ್ದಾರೆ. ಈ ರೀತಿ ಪ್ರಕರಣವನ್ನು ಬೇರೆ ಸೆಕ್ಷನ್ ನಲ್ಲಿ ದಾಖಲಿಸುವಂತೆ ಯಾರು ಒತ್ತಡ ಹೇರಿದ್ದರು ಎಂಬುದು ವಿಚಾರಣೆ ಬಳಿಕ ತಿಳಿಯುವ ಸಾಧ್ಯತೆಯಿದೆ.

ಆರೋಪಿಗಳಿಗೆ ಪ್ರಭಾವಿ ರಾಜಕಾರಣಿಗಳ ಸಂಪರ್ಕ ಇರುವುದು ಈಗಾಗಲೇ ಎಲ್ಲರಿಗೂ ತಿಳಿದ ಸತ್ಯವಾಗಿದ್ದು, ಈ ಬಗ್ಗೆ ಸದನದಲ್ಲೂ ಚರ್ಚೆ ನಡೆದಿತ್ತು. ಬಿಜೆಪಿ ಇನ್ನೂ 48 ಗಂಟೆಗಳಲ್ಲಿ ಗೃಹ ಸಚಿವ ಕೆಜೆ ಜಾರ್ಜ್ ಅವರು ರಾಜೀನಾಮೆ ನೀಡಬೇಕು ಎಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲ ತಾಣ ಖಾತೆಗಳಿಗೂ ಕಪ್ಪು ಪಟ್ಟಿ ಹಾಕಿ ಹೋರಾಟ ಮುಂದುವರೆಸಲಾಗಿದೆ.[ದೂರು ವಾಪಸ್‌ ಪಡೆ ಇಲ್ಲಾಂದ್ರೆ ಅಷ್ಟೇ..!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+