• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೇಸ್ಬುಕ್ಕಿಗೆ ಮಾಜಿ ಸಂಸದೆ ರಮ್ಯಾ ರೀ ಎಂಟ್ರಿ, ನ್ಯಾಯಕ್ಕಾಗಿ ಆಗ್ರಹ

|

ಬೆಂಗಳೂರು, ಜೂನ್ 4: ಕಾಂಗ್ರೆಸ್ ಸಾಮಾಜಿಕ ಜಾಲ ತಾಣ ನಿರ್ವಹಣೆ ವಿಭಾಗದ ಮಾಜಿ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರ ಫೇಸ್ಬುಕ್ ಅಧಿಕೃತ ಖಾತೆ ಸಕ್ರಿಯವಾಗಿದೆ.

ಲೋಕಸಭೆ ಚುನಾವಣೆಯ ಸೋಲಿನ ನಂತರ ದಿವ್ಯಸ್ಪಂದನ ಅವರ ಫೇಸ್ಬುಕ್, ಟ್ವಿಟ್ಟರ್ ಖಾತೆ ಖಾತೆಯನ್ನು ನಿಷ್ಕ್ರಿಯ(deactivated)ವಾಗಿತ್ತು. ಎಲ್ಲಾ ಟ್ವೀಟ್ ಡಿಲೀಟ್ ಆಗಿತ್ತು.

ಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಪಾಪಿ ಜನರು:ನೀರಿನಲ್ಲೇ ನಿಂತು ಪ್ರಾಣ ಬಿಟ್ಟ ಗರ್ಭವತಿ ಆನೆ

ಲೋಕಸಭೆ ಚುನಾವಣೆಯ ಸೋಲಿನ ನಂತರವು ಒಂದಷ್ಟು ದಿನ ಟ್ವಿಟ್ಟರ್ ನಲ್ಲಿ active ಆಗಿಯೇ ಇದ್ದ ರಮ್ಯಾ ಇದ್ಯಾಕೆ ಇದ್ದಕ್ಕಿದ್ದಂತೆ ಮೈಕ್ರೋ ಬ್ಲಾಗಿಂಗ್ ಸೈಟ್ ನಿಂದ ಹೊರಹೋದರು ಎಂಬ ಅನುಮಾನ ಎದ್ದಿತ್ತು.

ಕೇವಲ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ಮಾತ್ರವಲ್ಲದೆ ದಿವ್ಯ ಸ್ಪಂದನ ಅವರು ಕಾಂಗ್ರೆಸ್ ನ ಆಂತರಿಕ ವಾಟ್ಸಾಪ್ ಗ್ರೂಪ್ ನಿಂದಲೂ ಎಕ್ಸಿಟ್ ಆಗಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿತ್ತು. ಅವರು ರಾಜಕಾರಣದಿಂದ ಕೆಲ ಕಾಲ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದಂತಿದೆ ಎಂದು ಪಕ್ಷದ ಕೆಲವು ಮೂಲಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ; ಎಫ್‌ಐಆರ್ ದಾಖಲು

ಆದರೆ, ಈಗ ಫೇಸ್ಬುಕ್ ನಲ್ಲಿ ಅವರ ಅಧಿಕೃತ ಪುಟ ಸಕ್ರಿಯವಾಗಿದೆ. ಮೇ 29, 2019 ರ ನಂತರ ಜೂನ್ 3 ರಂದು ಮೊದಲ ಪೋಸ್ಟ್ ಹಾಕಿದ್ದಾರೆ.

ಕೇರಳದ ಗರ್ಭವತಿ ಆನೆಯನ್ನು ಅನಾನಸ್ ಪಟಾಕಿ ಮೂಲಕ ಕೊಂದ ಪಾತಕಿಗಳನ್ನು ಬಂಧಿಸಿ, ಆನೆಗೆ ನ್ಯಾಯ ಸಿಗಬೇಕಿದೆ ಎಂದು ಚೇಂಜ್. ಆರ್ಗ್ ನಲ್ಲಿರುವ ಆನ್ ಲೈನ್ ಪಿಟೀಷನ್ ಹಂಚಿಕೊಂಡಿದ್ದಾರೆ. ರಮ್ಯಾ ಅವರ ಮರು ಆಗಮನವನ್ನು ಅವರ ಅಭಿಮಾನಿಗಳು ಮುಕ್ತವಾಗಿ ಸ್ವಾಗತಿಸಿದ್ದಾರೆ.

ಕಾಂಗ್ರೆಸ್ ಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಟ್ವಿಟ್ಟರ್ ಖಾತೆ ನಿಷ್ಕ್ರಿಯ

2019ರ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52(543) ಸ್ಥಾನಗಳಲ್ಲಿ ಗೆದ್ದು ಹೀನಾಯ ಪ್ರದರ್ಶನ ತೋರಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಅಂದರೆ ಮೇ 01 ರಂದು ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು.

English summary
Former MP, Congress Social Media wing chief Ramya alias Divya Spandana's Facebook account is activated now with a online petition seeking justice for Kerala Elephant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more