• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಗಿಣಿ ವಿಚಾರಣೆಗೆ ಯಾರ ಒತ್ತಡವಿದೆ? ಸಿ.ಟಿ. ರವಿಗೆ ಪ್ರಶ್ನೆ!

|

ಬೆಂಗಳೂರು, ಸೆ. 04: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ತನಿಖೆ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಡ್ರಗ್ಸ್ ಮಾಫಿಯಾ ವಿಚಾರವಾಗಿ ಕನ್ನಡ ಚಿತ್ರರಂಗ ಇಬ್ಭಾಗವಾಗಿದೆ. ಇದೇ ಸಂದರ್ಭದಲ್ಲಿ ಡ್ರಗ್ಸ್ ವಿಚಾರವಾಗಿ ಸಿಸಿಬಿ ಪೊಲೀಸರು ಸ್ಟಾರ್ ನಟಿ ರಾಗಿಣಿ ಅವರನ್ನು ಬಂಧಿಸಿದ್ದಾರೆ. ನಟಿ ರಾಗಿಣಿ ಅವರ ಡ್ರಗ್ಸ್ ವಿಚಾರವೀಗ ರಾಜಕೀಯ ತಿರುವು ಪಡೆದುಕೊಂಡಿದೆ. ರಾಗಿಣಿ ಅವರ ವಿಚಾರಣೆ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿಕೆಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ಕೇಳಿದ್ದಾರೆ.

   ಇದ್ದಕ್ಕಿದ್ದಂತೆ ಮತ್ತೆ ಆಸ್ಪತ್ರೆಗೆ ದಾಖಲಾದ DK ಶಿವಕುಮಾರ್ | Oneindia Kannada

   ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಜವಾಬ್ದಾರಿಯುತ ಸ್ಥಾನ ದಲ್ಲಿದ್ದಾರೆ. ನಟಿ ರಾಗಿಣಿ ಅವರ ವಿಚಾರವಾಗಿ ಇರುವ ಒತ್ತಡವನ್ನು ಬಹಿರಂಗಗೊಳಿಸಲಿ. ವಿಚಾರಣೆ ನಡೆಸದಂತೆ ಯಾರು ಒತ್ತಡ ಹಾಕುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಅವರು ಬಹಿರಂಗವಾಗಿ ಹೇಳಲು ಆಗದಿದ್ದರೆ ಸಿಸಿಬಿ ಎದುರಾದರೂ ಹೇಳಲಿ ಎಂದಿದ್ದಾರೆ. ಸರ್ಕಾರದ ಮೇಲೆ ಯಾರ ಒತ್ತಡವಿದೆ ಎಂಬುದನ್ನು ಸಚಿವ ಸಿ.ಟಿ. ರವಿ ಅವರು ಸಿಸಿಬಿ ಗಮನಕ್ಕೆ ತರಲಿ. ಒತ್ತಡದ ಕುರಿತು ಗೊತ್ತಿದ್ದರೂ ಅದನ್ನು ಮುಚ್ಚಿಟ್ಟರೆ ತಪ್ಪಾಗಲಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

   "ಡ್ರಗ್ ಮಾಫಿಯಾ; ಯಾರು ಒತ್ತಡ ತಂದರೂ ಮಣಿಯುವುದಿಲ್ಲ"

   ನಟಿ ರಾಗಿಣಿ ಅವರ ಡ್ರಗ್ಸ್ ಪ್ರಕರಣ ಮುಚ್ಚಿಹಾಕುವುದಕ್ಕೆ ಒತ್ತಡವಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿಕೆ ಕೊಟ್ಟಿದ್ದರು. ಸಿ.ಟಿ. ರವಿ ಅವರ ಹೇಳಿಕೆಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟನೆ ಕೇಳಿದ್ದಾರೆ.

   English summary
   C.T. Ravi had made a statement that there is pressure to cover up actress Ragini's drug case. Former minister Priyank Kharge has asked for clarification on C T Ravi's statement.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X