ಸಾಮಾನ್ಯರಂತೆ ಟ್ರಾಫಿಕ್‌ನಲ್ಲೇ ಪ್ರಯಾಣಿಸಿ ಜನಮೆಚ್ಚುಗೆ ಗಳಿಸಿದ ಸಿದ್ದರಾಮಯ್ಯ
Recommended Video

ಬೆಂಗಳೂರು, ಜನವರಿ 2: ಟ್ರಾಫಿಕ್‌ನಲ್ಲೇ ಗಂಟೆಗಟ್ಟಲೆ ನಿಂತು ಜನ ಸಾಮಾನ್ಯರಂತೆ ಪ್ರಯಾಣಿಸಿದ ಸಿದ್ದರಾಮಯ್ಯ ಅವರ ಗುಣ ಇದೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ತುಮಕೂರಿನಿಂದ ಬೆಂಗಳೂರು ಕಡೆಗೆ ತೆರಳುವಾಗ ಮಾಜಿ ಸಿಎಂ ಸಿದ್ದರಾಮಯ್ಯ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುವಂತಾಯಿತು ಆದರೂ ಟ್ರಾಫಿಕ್‌ನಲ್ಲೇ ಸಾಮಾನ್ಯರಂತೆ ತೆರಳಿದ್ದಾರೆ.
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ಸರ್ಕಾರ ಝೆಡ್ ಸೆಕ್ಯೂರಿಟಿ ಭದ್ರತೆ ನೀಡಿದ್ದರೂ ಮಂಗಳವಾರ ಯಾವುದೇ ಭದ್ರತೆ ಇಲ್ಲದೆ ರಸ್ತೆಗಿಳಿದಿದ್ದರು. ಅಧಿಕಾರವಿದ್ದರೆ ಸಾಕು ಝೀರೋ ಟ್ರಾಫಿಕ್ ಸೌಲಭ್ಯ ಬಳಸಿಕೊಂಡು ಓಡಾಡುವವರೇ ಹೆಚ್ಚು ಆದರೆ ಯಾವುದೇ ಸೆಕ್ಯುರಿಟಿಯು ಇಲ್ಲದೆ, ವಿಐಪಿ ಲೈನ್‌ನಲ್ಲಿ ಕೂಡ ಹೋಗದೆ ಸಾಮಾನ್ಯರಂತೆ ಟೋಲ್ ಕಟ್ಟಿ ಪ್ರಯಾಣಿಸಿದ್ದಾರೆ.

ಹೊಸ ವರ್ಷ ಮುಗಿಸಿಕೊಂಡು ಮಂಗಳವಾರ ಎಲ್ಲರೂ ಬೆಂಗಳೂರಿಗೆ ಆಗಮಿಸಿದ್ದಾರೆ ಹಾಗಾಗಿ ಟ್ರಾಫಿಕ್ ವಿಪರೀತವಾಗಿತ್ತು. ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದಿದ್ದವು, ನೆಲಮಂಗಲ ನವಯುಗ ಟೋಲ್ ಬಳಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿತ್ತು, ಹೀಗಾಗಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರು ಕೂಡ ಟ್ರಾಫಿಕ್‌ನಲ್ಲಿ ಸಿಲುಕಬೇಕಾಯಿತು. ಆದರೆ ಇದು ಜನರ ಮೆಚ್ಚುಗೆಗೆ ಪಾತ್ರವಾಯಿತು.












Click it and Unblock the Notifications