ಕೊರೊನಾ ಸೋಂಕಿನ ರೋಗಿಗಳಿಗೆ ನೀಡುವ ಆಹಾರಗಳೇನು?
ಬೆಂಗಳೂರು, ಮಾರ್ಚ್ 18 : ಕೊರೊನಾ ಸೋಂಕು ಹರಡದಂತೆ ತಡೆಯಲು ಕರ್ನಾಟಕ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸೋಂಕು ತಗುಲಿರುವ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರಣಾಂತಿಕ ಕೊರೊನಾ ಸೋಂಕಿಗೆ ಕರ್ನಾಟಕದ ಕಲಬುರಗಿಯ ವೃದ್ಧರೊಬ್ಬರು ಬಲಿಯಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಸೋಂಕು ಹರಡದಂತೆ ತಡೆಯಲು ಬಿಬಿಎಂಪಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ಕರ್ನಾಟಕ ಸರ್ಕಾರ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಒಂದು ವಾರಗಳ ಕಾಲ ಮಾಲ್, ಚಿತ್ರಮಂದಿರ, ಪಬ್ ಬಂದ್ ಮಾಡಿ ಆದೇಶ ಹೊರಡಿಸಿದೆ. ಜಾತ್ರೆ, ಸಮಾವೇಶ, ಹೆಚ್ಚು ಜನರು ಸೇರುವ ಕಾರ್ಯಕ್ರಮ ನಡೆಸದಂತೆ ಸೂಚನೆಗಳನ್ನು ನೀಡಲಾಗಿದೆ.
ಕೊರೊನಾ ಬರಂದಂತೆ ತಡೆಯಲು ಇಂತಹ ಆಹಾರಗಳನ್ನು ಸೇವಿಸಿ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕು ತಗುಲಿರುವ ರೋಗಿಗಳ ಆಹಾರ ಪದ್ಧತಿಗಳೇನು? ಚಿತ್ರದಲ್ಲಿದೆ ವಿವರ

ಪ್ಯಾಕ್ ಮಾಡಿದ ತಾಜಾ ಆಹಾರಗಳು
ಕೊರೊನಾ ಸೋಂಕು ಹೊಂದಿರುವ ರೋಗಿಗಳಿಗೆ ತಾಜಾ ಆಹಾರವನ್ನು ನೀಡಲಾಗುತ್ತದೆ. ಆಹಾರವನ್ನು ನೀಡುವಾಗ ಪ್ಯಾಕ್ ಮಾಡಿ ಕೊಡಲಾಗುತ್ತದೆ. ಮೊಟ್ಟೆ, ಚಪಾತಿ, ತರಕಾರಿ ಪಲ್ಯ ಸೇರಿದಂತೆ ವಿವಿಧ ಖಾದ್ಯಗಳನ್ನು ಕೊಡಲಾಗುತ್ತದೆ.

ಬೆಳಗ್ಗಿನ ಉಪಹಾರ
ರೋಗಿಗಳಿಗೆ ಬೆಳಗಿನ ಉಪಹಾರಕ್ಕೆ ಇಡ್ಲಿ, ಪೊಂಗಲ್, ಬಿಸಿಬೇಳೆಬಾತ್, ಅವಲಕ್ಕಿ ಬಾತ್, ರವೆ ಇಡ್ಲಿ ಅಥವ ಬ್ರೇಡ್ ನೀಡಲಾಗುತ್ತದೆ. ಉಪಹಾರವಾದ ಕೆಲವು ಸಮಯದ ಬಳಿಕ ರಾಗಿ ಮಾಲ್ಟ್ ನೀಡಲಾಗುತ್ತದೆ.

ಮಧ್ಯಾಹ್ನದ ಊಟ
ಎರಡು ಮೊಟ್ಟೆ, ರಾಗಿ ಮುದ್ದೆ, ಅನ್ನ, ವಿವಿಧ ತರಕಾರಿಗಳ ಪಲ್ಯ, ಮೊಸರು, ಹಣ್ಣುಗಳನ್ನು ನೀಡಲಾಗುತ್ತದೆ. ಪ್ರತಿದಿನ ಸಂಜೆ ರೋಗಿಗಳಿಗೆ ಹಾಲನ್ನು ನೀಡಲಾಗುತ್ತದೆ.

ರಾತ್ರಿ ಊಟದ ಮೆನು?
ರೋಗಿಗಳಿಗೆ ರಾತ್ರಿ ಊಟಕ್ಕೆ 2 ಚಪಾತಿ, ಅನ್ನ, ತರಕಾರಿ ಪಲ್ಯ, ವಿವಿಧ ತರಕಾರಿಗಳಿಂದ ಮಾಡಿದ ಸಾಂಬಾರ್ ನೀಡಲಾಗುತ್ತದೆ.












Click it and Unblock the Notifications