Namma Metro: ನಮ್ಮ ಮೆಟ್ರೋದಲ್ಲಿ ಫೋಲ್ಡಬಲ್ ಸೈಕಲ್ ಜೊತೆ ಯುವಕರ ಪ್ರಯಾಣ
ನಮ್ಮ ಮೆಟ್ರೋ ಬೆಂಗಳೂರು ಮಹಾನಗರದ ಟ್ರಾಫಿಕ್ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಳದಿ ಮತ್ತು ನೀಲಿ ಮಾರ್ಗಗಳು ಆರಂಭವಾದ ನಂತರ ಬೆಂಗಳೂರಿನ ಜನರಿಗೆ ಪ್ರಯಾಣ ಮಾಡುವುದು ಇನ್ನೂ ಸುಲಭವಾಗಲಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗ ಸಂಪೂರ್ಣವಾಗಿ ಕಾರ್ಯಾಚರಣೆ ಶುರು ಮಾಡಿದ ಬಳಿಕ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಟೆಕ್ಕಿಗಳು ಮತ್ತು ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಆದರೂ, ಮೆಟ್ರೋ ನಿಲ್ದಾಣದಿಂದ ಆಫೀಸ್ ಮತ್ತು ಮನೆಗಳಿಗೆ ತಲುಪಲು ಕೆಲವು ಉದ್ಯೋಗಿಗಳು ಮಡಚಬಹುದಾದ ಬೈಸಿಕಲ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ನಮ್ಮ ಮೆಟ್ರೋ ಬೆಂಗಳೂರು ನಾಗರಿಕರಿಗೆ ಪ್ರಯಾಣವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದ್ದರೂ, ಟೆಕ್ ಕ್ಯಾಪಿಟಲ್‌ಗೆ ಕೊನೆಯ ಮೈಲಿ ಸಂಪರ್ಕವು ಇನ್ನೂ ಪ್ರಮುಖ ಸಮಸ್ಯೆಯಾಗಿದೆ. ಬೆಂಗಳೂರಿನ ಜನರು ಸಮಸ್ಯೆಯನ್ನು ಪರಿಹರಿಸಲು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಮೆಟ್ರೋ ರೈಲಿನೊಳಗೆ ಕಾಂಪ್ಯಾಕ್ಟ್ ಸೈಕಲ್‌ಗಳೊಂದಿಗೆ ಯುವಕರ ಗುಂಪು ಕಾಣಿಸಿಕೊಂಡಿದೆ.
Making full of #Nammametro #purpleline to Whitefield on our @BromptonBicycle s.. super feeling .. @east_bengaluru @NammaMetro_ @ChristinMP_ @PCMohanMP @Tejasvi_Surya pic.twitter.com/15ORsriV35
— Vikram Limsay (@VikramLimsay) October 15, 2023
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
ವಿಕ್ರಮ್ ಲಿಮ್ಸೇ ಎಂಬ ಉದ್ಯಮಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ಗೆ ತೆಗೆದುಕೊಂಡು ಇತ್ತೀಚೆಗೆ ಪ್ರಾರಂಭಿಸಲಾದ ಪರ್ಪಲ್ ಲೈನ್ ಮೆಟ್ರೋದೊಳಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರು ಬರೆದಿದ್ದಾರೆ, "ನಮ್ಮ ಫೋಲ್ಡಬಲ್ ಸೈಕಲ್‌ಗಳನ್ನು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್‌ನಿಂದ ಕೊಂಡೊಯ್ಯಲಾಗುತ್ತಿದೆ. ಈ ಭಾವನೆ ಚನ್ನಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಫೋಲ್ಡಬಲ್ ಮತ್ತು ಕಾಂಪ್ಯಾಕ್ಟ್ ಬೈಸಿಕಲ್‌ಗಳು ಇತರ ಸಾರಿಗೆ ವಿಧಾನಗಳನ್ನು ಅವಲಂಬಿಸದೆ, ಮೆಟ್ರೋ ನಿಲ್ದಾಣದಿಂದ ತಮ್ಮ ಗಮ್ಯಸ್ಥಾನವನ್ನು ತಲುಪಲು ಪ್ರಯಾಣಿಕರಿಗೆ ಸಹಾಯ ಮಾಡುತ್ತವೆ. ಈ ಬೈಸಿಕಲ್‌ಗಳು ಪ್ರಯಾಣಿಕರಿಗೆ ತೀವ್ರ ಟ್ರಾಫಿಕ್ ದಟ್ಟಣೆಯ ಮೂಲಕ ಚಲಿಸಲು ಸಹಾಯ ಮಾಡುತ್ತವೆ ಮತ್ತು ಜಾಮ್ ಇದ್ದಾಗ ಅವುಗಳನ್ನು ಮಡಚಿಕೊಂಡು ನಡೆದುಕೊಂಡು ಹೋಗಬಹುದಾಗಿದೆ.
ಫೀಡರ್ ಬಸ್ ಸೇವೆ ಆರಂಭ
ಕಳೆದ ವಾರ, ಕರ್ನಾಟಕ ಸಾರಿಗೆ ಇಲಾಖೆಯು 37 ಫೀಡರ್ ಬಸ್‌ಗಳನ್ನು ಪ್ರಾರಂಭಿಸಿತು, ಇದು ಇತ್ತೀಚೆಗೆ ತನ್ನ ಸಂಪೂರ್ಣ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನೇರಳೆ ಮಾರ್ಗದ ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ ಲಭ್ಯವಿರುತ್ತದೆ. ಟೆಕ್ಕಿಗಳು, ಸಿಇಒಗಳು ಮತ್ತು ಸಹ-ಸಂಸ್ಥಾಪಕರು ಉದ್ಘಾಟನಾ ದಿನದಂದು ಫೀಡರ್ ಬಸ್ ಸೇವೆಗೆ ಬಂದಿದ್ದರು.
ಪರ್ಪಲ್ ಲೈನ್ ಅನ್ನು ಪ್ರಾರಂಭಿಸಿದಾಗಿನಿಂದ, ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗವನ್ನು ತೆರೆಯುವ ಮೊದಲು, ಕೆಆರ್ ಪುರ -ವೈಟ್‌ಫೀಲ್ಡ್ ನಡುವೆ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 28,000 ಆಗಿತ್ತು ಮತ್ತು ಉದ್ಘಾಟನೆಯ ನಂತರ ದ್ವಿಗುಣವಾಗಿದ್ದು. ಎರಡನೇ ದಿನವೇ ಪ್ರಯಾಣಿಕರ ಸಂಖ್ಯೆ ದಿನಕ್ಕೆ ಏಳು ಲಕ್ಷದ ಗಡಿ ದಾಟಿದೆ.












Click it and Unblock the Notifications