Get Updates
Get notified of breaking news, exclusive insights, and must-see stories!

Dr BR Ambedkar: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಜೀವನ ಅನಾವರಣ

ಬೆಂಗಳೂರು, ಜುಲೈ. 09: ಆಗಸ್ಟ್ ತಿಂಗಳಲ್ಲಿ ಬೆಂಗಳೂರಿಗರ ನೆಚ್ಚಿನ ಕಾರ್ಯಕ್ರಮವಾದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವು ಆಗಸ್ಟ್ 8 ರಂದು ಆರಂಭವಾಗಲಿದ್ದು, ಆಗಸ್ಟ್ 19 ರವರೆಗೆ ನಡೆಯಲಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಪ್ರಸಿದ್ಧ ಪುಷ್ಪ ಪ್ರದರ್ಶನದ 216 ನೇ ಆವೃತ್ತಿಯಾಗಿದ್ದು, ತೋಟಗಾರಿಕಾ ಇಲಾಖೆಯು ಈ ವರ್ಷದ ಕೇಂದ್ರ ವಿಷಯವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ಹೂಗಳಲ್ಲಿ ಅನಾವರಣಗಳಿಸಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

Flower Show 2024 Lalbagh s Independence Day flower show to honour Dr BR Ambedkar

ಲಾಲ್‌ಬಾಗ್‌ ಸಸ್ಯೋದ್ಯಾನದ ಜಂಟಿ ನಿರ್ದೇಶಕ ಎಂ ಜಗದೀಶ ಸುದ್ದಿಗಾರರೊಂದಿಗೆ ಮಾತನಾಡಿ, ಬಹು ನಿರೀಕ್ಷಿತ ಕಾರ್ಯಕ್ರಮಕ್ಕೆ ಈಗಾಗಲೇ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಮುಂದಿನ 10 ದಿನಗಳಲ್ಲಿ ಅಂತಿಮ ವಿಷಯಾಧಾರಿತ ಪರಿಕಲ್ಪನೆ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.

"ಪುಷ್ಪ ಪ್ರದರ್ಶನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಲು ನಾವು ನಿರ್ಧರಿಸಿದ್ದೇವೆ. ಆದರೆ, ನಾವು ಇನ್ನೂ ಈ ಪರಿಕಲ್ಪನೆಯನ್ನು ಅಂತಿಮಗೊಳಿಸಬೇಕಾಗಿದೆ. ಸೂಕ್ಷ್ಮವಾದ ವಿವರಗಳನ್ನು ರೂಪಿಸಬೇಕಾಗಿದೆ. ನಾವು ಅವರ ಜೀವನ ಮತ್ತು ಸಾಧನೆಗಳನ್ನು ಚಿತ್ರಿಸಲು ತಜ್ಞರು ಮತ್ತು ಸಂಶೋಧಕರನ್ನು ಸಂಪರ್ಕಿಸುತ್ತಿದ್ದೇವೆ" ಎಂದು ಎಂ ಜಗದೀಶ್ ಹೇಳಿದ್ದಾರೆ.

Flower Show 2024 Lalbagh s Independence Day flower show to honour Dr BR Ambedkar

ತೋಟಗಾರಿಕಾ ಇಲಾಖೆಯು ವಿದ್ವಾಂಸರು ಮತ್ತು ಸಂಶೋಧಕರೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ. ಡಾ ಅಂಬೇಡ್ಕರ್ ಅವರ ಪರಂಪರೆಯ ಸಮಗ್ರ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಮುಂಬರುವ ದಿನಗಳಲ್ಲಿ ಕನಿಷ್ಠ 50 ಹೆಚ್ಚುವರಿ ತಜ್ಞರೊಂದಿಗೆ ತೊಡಗಿಸಿಕೊಳ್ಳಲು ಉದ್ದೇಶಿಸಿದೆ ಎಂದು ವರದಿ ತಿಳಿಸಿದೆ.

ಫಲಪುಷ್ಪ ಪ್ರದರ್ಶನ ಸಂಘಟಕರು ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಪಯಣದಲ್ಲಿನ ವಿವಿಧ ಮೈಲಿಗಲ್ಲುಗಳು ಮತ್ತು ಅವರ ಪ್ರಭಾವಶಾಲಿ ಭಾಷಣಗಳನ್ನು ಚಿತ್ರಿಸುವ ವೀಡಿಯೊಗಳನ್ನು ಪ್ರದರ್ಶಿಸಲು ಲಾಲ್‌ಬಾಗ್ ಉದ್ಯಾನದಾದ್ಯಂತ ಸುಮಾರು ಎಂಟು ಪರದೆಗಳನ್ನು ಸ್ಥಾಪಿಸಲು ಯೋಜಿಸಿದ್ದಾರೆ.

"ಗ್ಲಾಸ್‌ಹೌಸ್‌ನಲ್ಲಿ, ನಾವು ಬಾಲ್ಯದಿಂದ ಅವರ ನಂತರದ ವರ್ಷಗಳವರೆಗಿನ ಜೀವನ ಪಯಣವನ್ನು 'ಜೀವನ ದರ್ಶನ'ದಂತೆ ಚಿತ್ರಿಸುವ ಪ್ರದರ್ಶನಗಳನ್ನು ನೀಡಲು ಯೋಜಿಸಿದ್ದೇವೆ" ಎಂದು ಜಗದೀಶ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳಲ್ಲಿ ಅಂಬೇಡ್ಕರ್ ಅವರನ್ನು ನೋಡುವ ಜೊತೆಗೆ ಪರದೆಗಳಲ್ಲಿಯೂ ಅವರ ಭಾಷಣ ಕೇಳಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+