• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಮಾನದಲ್ಲಿ ಜೊತೆಯಾಗಿ ಬಂದಿದ್ದ ಕಳ್ಳಿ ಕಾರಿನಲ್ಲಿ ದೋಚಿದ್ದೆಷ್ಟು?

|

ಬೆಂಗಳೂರು, ಜೂನ್ 3: ವಿಮಾನದಲ್ಲಿಯೂ ಜೊತೆಯಲ್ಲೇ ಇದ್ದು ಕಾರಿನಲ್ಲಿಯೂ ಜೊತೆಯಲ್ಲೇ ಬಂದಿದ್ದ ಕಳ್ಳಿ ಬರೋಬ್ಬರಿ 80 ಸಾವಿರ ರೂ ದೋಚಿರುವ ಘಟನೆ ಬೆಂಗಲೂರಿನಲ್ಲಿ ನಡೆದಿದೆ.

ವಿಮಾನದಲ್ಲಿ ಗಾಳಿ ಬರುತ್ತಿಲ್ಲ ಎಂದು ಪ್ರಯಾಣಿಕ ಮಾಡಿದ್ದೇನು?

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಬಂದ ಮಹಿಳೆ ಮಾರ್ಗ ಮಧ್ಯೆ ಶೌಗೃಹಕ್ಕೆ ಹೋಗುವ ನೆಪದಲ್ಲು ಗೃಹಿಣಿಯ ಬ್ಯಾಗ್‌ನಲ್ಲಿದ್ದ 1 ಸಾವಿರ ಯೂರೋ(80 ಸಾವಿರ ರೂ) ಕರೆನ್ಸಿಯನ್ನು ದೋಚಿದ್ದಾಳೆ.

ಕೆಂಪೇಗೌಡ ಏರ್‌ಪೋರ್ಟ್‌ ಸುತ್ತಮುತ್ತಲ ನಿವಾಸಿಗಳಿಗೆ ನಿತ್ಯ ನರಕ

ಫ್ರೇಜರ್ ಟೌನ್ ರಾಬರ್ಟ್‌ ಸನ್ ರಸ್ತೆಯ ಲೂಸಿ ಡಿಸೋಜಾ ಹಣ ಕಳೆದುಕೊಂಡ ಗೃಹಿಣಿ. ಲೂಸಿ ಡಿಸೋಜಾ ಗಲ್ಫ್ ದೇಶದಿಂದ ವಿಮಾನದಲ್ಲಿ ಕೆಐಎಗೆ ಬರುತ್ತಿದ್ದಾಗ ಗೀತಾ ಪರಿಚಯವಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಎಂದು ಸ್ನೇಹ ಬೆಳೆಸಿದ್ದಾಳೆ. ಕೆಐಎಗೆ ಬಂದಿಳಿದಾಗ ಇಬ್ಬರೂ ಒಂದೇ ಕಾರಿನಲ್ಲಿ ಡ್ರಾಪ್ ತೆಗೆದುಕೊಳ್ಳಲು ನಿರ್ಧರಿಸಿದ್ದಾಳೆ.

ಕಾರಿನಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ಶೌಚಗೃಹಕ್ಕೆ ಹೋಗಬೇಕೆಂದು ಗೀತಾ ಹೇಳಿದ್ದಾರೆ, ಹೆಬ್ಬಾಳ ಬಳಿಯ ಸಾರ್ವಜನಿಕ ಶೌಚಗೃಹದ ಬಳಿ ಕಾರು ನಿಲ್ಲಿಸಿದ್ದಾರೆ, ಮೊದಲು ಗೀತಾ ತನ್ನ ವ್ಯಾನಿಟಿ ಬ್ಯಾಗ್‌ನ್ನು ಡಿಸೋಜಾಗೆ ಕೊಟ್ಟು ಹೋಗಿದ್ದಳು.

ಬಳಿಕ ಡಿಸೋಜಾ ತನ್ನ ಬ್ಯಾಗನ್ನು ಗೀತಾ ಕೈಗೆ ಕೊಟ್ಟು ತೆರಳಿದ್ದಾಳೆ, ಆ ಹೊತ್ತಲ್ಲಿ ಗೀತಾ ಡಿಸೋಜಾ ಅವರ ಬ್ಯಾಗಿನಲ್ಲಿದ್ದ ಹಣ ದೋಚಿದ್ದಾಳೆ. ಗೀತಾ ಫ್ರೇಜರ್‌ಟೌನ್‌ನಲ್ಲಿ ಇಳಿದುಕೊಂಡಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಬ್ಯಾಗ್ ನೋಡಿದಾಗ ಹಣ ಇಲ್ಲದಿರುವುದು ಗೊತ್ತಾಗಿ ಗೀತಾ ವಿರುದ್ಧ ದೂರು ದಾಖಲಿಸಿದ್ದಾಳೆ.

English summary
Co passenger of flight robs 80 thousand rupees from a lady passenger in airport taxi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X