ಕ್ಲಿಕ್ ಅಂಡ್ ಪೋಸ್ಟ್: ದೇಶದಲ್ಲೇ ಮೊದಲ ಸೇವೆ ಬೆಂಗಳೂರಿನಲ್ಲಿ
ಬೆಂಗಳೂರು, ಜೂನ್ 26: ಇನ್ನುಮುಂದೆ ಸ್ಪೀಡ್ ಪೋಸ್ಟ್‌ಗಳನ್ನು ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲೇ ಬುಕಿಂಗ್ ಮಾಡಿ ರವಾನೆ ಮಾಡುವ ವ್ಯವಸ್ಥೆ ಜಾರಿಯಾಗಲಿದೆ.
ಇಷ್ಟು ದಿನ ಸ್ಪೀಡ್ ಹಾಗೂ ರಿಜಿಸ್ಟರ್ಡ್ ಪೋಸ್ಟ್ ರವಾನೆಗೆ ಗ್ರಾಹಕರು ಅಂಚೆ ಕಚೇರಿಗೆ ತೆರಳಿ ಗಂಟೆಗಟ್ಟಲೆ ಕಾಯಬೇಕಾಗಿತ್ತು, ಇದೀಗ ಮನೆಯಲ್ಲಿಯೇ ಕುಳಿತು ಪೋಸ್ಟ್ ಮಾಡಬಹುದಾದ ನೂತನ ವ್ಯವಸ್ಥೆಯನ್ನು ಭಾರತೀಯ ಅಂಚೆ ಇಲಾಖೆಯು ದೇಶದಲ್ಲೇ ಮೊದಲ ಬಾರಿಗೆ ಆರಂಭಿಸುತ್ತಿದೆ.
ಇದನ್ನು ಮೊದಲು ಬೆಂಗಳೂರು ದಕ್ಷಿಣ ವಿಭಾಗದ ಜಯನಗರ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದೆ. ಕ್ಲಿಕ್ ಅಂಡ್ ಬುಕ್ ಹೆಸರಿನಡಿ ಈ ಸೇವೆ ಸದ್ಯ ಬೆಂಗಳೂರಿನ ಪಿನ್ ಕೋಡ್ 560041ರ ವಿಳಾಸದಲ್ಲಿ ನೆಲೆಸಿರುವ ಗ್ರಾಹಕರಿಗೆ ಮಾತ್ರ ಲಭ್ಯವಿದೆ.

ಪುಸ್ತಕ, ಉಡುಗೊರೆ, ಇತರೆ ವಸ್ತುಗಳನ್ನು ರವಾನೆ ಮಾಡಲು ಹೆಚ್ಚಿನವರು ಸ್ಪೀಡ್ ಪೋಸ್ಟ್ ಮತ್ತು ರಿಜಿಸ್ಟರ್ಡ್ ಪೋಸ್ಟ್ ಅವಲಂಬಿಸುತ್ತಾರೆ.
ಇಂತಹವರಿಗೆ ಡಿಜಿಟಲ್ ಇಂಡಿಯಾದ ಭಾಗವಾಗಿ ಮತ್ತಷ್ಟು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಇದನ್ನು ಆರಂಭಿಸಲಾಗಿದೆ. ಆನ್‌ಲೈನ್‌ನಲ್ಲಿ ರಿಜಿಸ್ಟರ್ಡ್ ಇಲ್ಲವೇ ಸ್ಪೀಡ್‌ಪೋಸ್ಟ್‌ನ ಪ್ಯಾಕ್ ಮಾಡಿದ ಪಾರ್ಸೆಲ್ ಬಾಕ್ಸ್ ಅಥವಾ ಕವರ್ ಅನನ್ಉ ಬುಕ್ ಮಾಡಿದ ನಂತರ ಬೆಳಗ್ಗೆ 10ರಿಂದ ಸಂಜೆ 4ರ ಅವಧಿಯಲ್ಲಿ ಪೋಸ್ಟ್ ಮ್ಯಾನ್ ಸಂಗ್ರಹಿಸಿಕೊಂಡು ಹೋಗುತ್ತಾರೆ.











Click it and Unblock the Notifications