ಬೆಂಗಳೂರಿನಲ್ಲಿ ಮೊದಲ ಬಾರಿ ಕೋವಿಡ್ ವ್ಯಕ್ತಿಯ ಶವಪರೀಕ್ಷೆ: ಕುತೂಹಲಕಾರಿ ಸಂಗತಿ ಬಹಿರಂಗ
ಬೆಂಗಳೂರು, ಅಕ್ಟೋಬರ್ 22: ಕೊರೊನಾ ವೈರಸ್ ಸಾವಿನ ಪ್ರಕರಣಗಳು ವರದಿಯಾದ 6-7 ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ರೋಗಿಯ ದೇಹವನ್ನು ಬೆಂಗಳೂರಿನಲ್ಲಿ ಶವಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಕೆಲವು ಅಪರೂಪದ ಸಂಗತಿಗಳು ಬಹಿರಂಗವಾಗಿದೆ.
ಕೋವಿಡ್ ಸೋಂಕಿತ ರೋಗಿಯೊಬ್ಬರು ಮೃತಪಟ್ಟ 15 ಗಂಟೆಗಳ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ ವಿಧಿವಿಜ್ಞಾನ ಪರಿಣತ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜ್‌ನ ಡಾ. ದಿನೇಶ್ ರಾವ್ ಅವರಿಗೆ, ಮೃತವ್ಯಕ್ತಿಯ ಮುಖದ ಚರ್ಮ, ಕುತ್ತಿಗೆ ಅಥವಾ ಉಸಿರಾಟದ ಮಾರ್ಗ ಸೇರಿದಂತೆ ಒಳಾಂಗಗಳು ಹಾಗೂ ಶ್ವಾಸಕೋಶದಲ್ಲಿ ಯಾವುದೇ ವೈರಸ್ ಪತ್ತೆಯಾಗಿಲ್ಲ. ದೇಹದ ಅನೇಕ ಕಡೆಗಳಿಂದ ಅವರು ಸ್ವಾಬ್ ಸಂಗ್ರಹಿಸಿದ್ದು, ಅವುಗಳಲ್ಲಿ ವೈರಸ್ ಕಂಡುಬಂದಿಲ್ಲ.
ಆದರೆ ಕೋವಿಡ್‌ನಿಂದ ಮೃತಪಟ್ಟ 60 ವರ್ಷದ ಪುರುಷನ ಮೂಗು ಮತ್ತು ಗಂಟಲಿನಲ್ಲಿ ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ವೈರಸ್ ಕಂಡುಬಂದಿದೆ. ಸಾಮಾನ್ಯವಾಗಿ ಮೃದುವಾದ ಸ್ಪಾಂಜ್ ಚೆಂಡಿನಂತೆ ಇರುವ ಶ್ವಾಸಕೋಶಗಳು ಈ ಮೃತವ್ಯಕ್ತಿಯಲ್ಲಿ ಲೆದರ್ ಚೆಂಡಿನಂತೆ ಗಟ್ಟಿಯಾಗಿತ್ತು ಎಂದು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ. ಮುಂದೆ ಓದಿ.

ಹೆಪ್ಪುಗಟ್ಟಿದ್ದ ರಕ್ತ
'ಶ್ವಾಸಕೋಶಗಳು ಸಾಮಾನ್ಯವಾಗಿ 600-700 ಗ್ರಾಂ ತೂಕ ಇರುತ್ತವೆ. ಆದರೆ ಈ ಕೋವಿಡ್ ವ್ಯಕ್ತಿಯ ಶ್ವಾಸಕೋಶಗಳು ಸೇರಿ 2.1 ಕೆಜಿ ಇದ್ದವು. ಹಾಗೆಯೇ ಅದರ ಮೇಲ್ಮೈ ಮೃದು ಅಥವಾ ಸ್ಪಾಂಜಿಯಾಗಿರಲಿಲ್ಲ. ಲೆದರ್‌ನಂತೆ ಇತ್ತು. ಶ್ವಾಸಕೋಶದಲ್ಲಿ ರಕ್ತ ಹೆಪ್ಪಗಟ್ಟಿದ್ದವು. ಶ್ವಾಸಕೋಶದ ಮೇಲೆ ವೈರಸ್ ಮಾಡಿರುವ ದಾಳಿ ಆಘಾತ ಮೂಡಿಸುವಂತಿತ್ತು' ಎಂದು ಡಾ. ದಿನೇಶ್ ರಾವ್ ಹೇಳಿದ್ದಾಗಿ ವರದಿ ತಿಳಿಸಿದೆ.

ಭಾರತದಲ್ಲಿ ವೈರಸ್ ದಾಳಿ ವಿಭಿನ್ನ
14 ದಿನಕ್ಕೂ ಹೆಚ್ಚು ಸಮಯ ಅವರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರು. ಇಟಲಿ ಅಥವಾ ಜಗತ್ತಿನ ಬೇರೆ ದೇಶಗಳಲ್ಲಿ ಕಂಡುಬಂದ ವೈರಸ್ ಸ್ವರೂಪಕ್ಕಿಂತ ಭಾರತದಲ್ಲಿ ವಿಭಿನ್ನವಾಗಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಉದಾಹರಣೆಗೆ ಭಾರತೀಯ ರೋಗಿಗಳಲ್ಲಿ ಶ್ವಾಸಕೋಶದ ಮೇಲೆ ವೈರಸ್ ದಾಳಿ ನಡೆಸುವ ರೀತಿ ವಿಭಿನ್ನವಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಸಂಶೋಧನೆ ನಡೆಯಬೇಕು
ಈ ಅಧ್ಯಯನ ಶೀಘ್ರದಲ್ಲಿಯೇ ವೈಜ್ಞಾನಿಕ ನಿಯತಕಾಲಿಕೆಯೊಂದರಲ್ಲಿ ಪ್ರಕಟಗೊಳ್ಳಲಿದೆ. ಮರಣ ಪ್ರಮಾಣವನ್ನು ತಗ್ಗಿಸಲು ಮತ್ತು ಕಾಯಿಲೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ ಎಂದಿದ್ದಾರೆ.

ಮೃತದೇಹ ಸ್ಪರ್ಶಿಸಬಹುದೇ?
ಮೃತ ವ್ಯಕ್ತಿಯ ದೇಹ ಸ್ಪರ್ಶಿಸಲು ಅವರ ಸಂಬಂಧಿಕರಿಗೆ ಅವಕಾಶ ನೀಡುವ ವಿಚಾರದಲ್ಲಿ ಕೂಡ ಮತ್ತಷ್ಟು ಅಧ್ಯಯನ ನಡೆಯಬೇಕಿದೆ. ವ್ಯಕ್ತಿ ಸತ್ತಾಗ ವೈರಸ್ ಕೂಡ ಸಾಯಬಹುದು. ಆದರೆ ಬ್ಯಾಕ್ಟೀರಿಯಾ ಸೋಂಕುಗಳು ಹೆಚ್ಚುವ ಅಪಾಯವಿರುತ್ತದೆ ಎಂದು ತಿಳಿಸಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?









Click it and Unblock the Notifications