ಅಡಿಕೆ ಬೆಳೆಗಾರರ ಮಾನ ಕಾಪಾಡಿದ ಚಹಾಕ್ಕೆ ಒಂದು ವರ್ಷ
ಬೆಂಗಳೂರು, ಜನವರಿ 24 : ವಿಶ್ವದ ಮೊದಲ, ವಿಶ್ವದರ್ಜೆಯ ಸ್ವದೇಶಿ ಉತ್ಪನ್ನವಾಗಿರುವ; ಆರೋಗ್ಯವರ್ಧಕ ಪೇಯ ಅರೇಕಾ ಟೀ' ಗೆ ಈಗ ಒಂದು ವರ್ಷ. ಸಾಂಪ್ರದಾಯಿಕ ಅಡಿಕೆ ಚಹಾ ಇಂದು ಅರೇಕಾ ಟೀ' ಆಗಿ ರೂಪುಗೊಳ್ಳಲು ಅಡಿಕೆ ಬೆಳೆಗಾರರು ನೀಡಿದ ಬೆಂಬಲ ಕಾರಣ. ಧನ್ಯವಾದಗಳು ಅಡಿಕೆ ಬೆಳೆಗಾರರೇ.
ಈ ಅಪ್ಪಟ ದೇಶಿ ಉತ್ಪನ್ನ ಆರಂಭವಾದ ಒಂದು ವರ್ಷದಲ್ಲೇ ವಿದೇಶಿ ಮಾರುಕಟ್ಟೆಗಳಿಗೂ ಲಗ್ಗೆ ಇಟ್ಟಿದೆ. ಈ ಸವಿನೆನಪಿನಲ್ಲಿ ಗ್ರೀನ್ ರೆಮಿಡೀಸ್ ಸಂಸ್ಥೆ ರೈತರನ್ನು ಅಭಿನಂದಿಸಲು ನಿರ್ಧರಿಸಿದೆ.[ಅಡಿಕೆ ಚಹಾಗೆ ವರ್ಷದ ಸಂಭ್ರಮ, ಜ.24ಕ್ಕೆ ಪತ್ರಿಕಾಗೋಷ್ಠಿ]
ಬದಲಾದ ಜೀವನ ಶೈಲಿ, ನಿಯಂತ್ರಣವಿಲ್ಲದ ಆಹಾರ ಸೇವನೆಯಿಂದ ನಮ್ಮ ಶರೀರ ಮಧುಮೇಹದ ಗೂಡಾಗುತ್ತಿದೆ. ಭಾರತವಂತೂ ಮಧುಮೇಹದ ತವರು ಎನಿಸಿಕೊಳ್ಳುತ್ತಿದೆ. ಇತ್ತೀಚಿನ ಆರೋಗ್ಯ ವರದಿಗಳಲ್ಲಿ ಮಧುಮೇಹಕ್ಕೆ ಮೊದಲ ಸ್ಥಾನ. ಕೇಂದ್ರ ಸರ್ಕಾರವಂತೂ ಮಧುಮೇಹ ಮುಕ್ತ ಭಾರತ' ಅಭಿಯಾನವನ್ನೇ ಆರಂಭಿಸಿಬಿಟ್ಟಿದೆ. ಇದಕ್ಕೆ ಪೂರಕವಾಗಿ ಗ್ರೀನ್ ರೆಮಿಡೀಸ್‌ನ ಅರೇಕಾ ಟೀ ಸಹ ಸ್ವಯಂಪ್ರೇರಣೆಯಿಂದ ಮಧುಮೇಹ ತಡೆ ಅಭಿಯಾನವನ್ನು ಶುರುಮಾಡಿದೆ.

ವಿಶೇಷವೆಂದರೆ, ವೈದ್ಯರ ನೆರವು ಮತ್ತು ಸಲಹೆ, ಸೂಚನೆಯೊಂದಿಗೆ ಅನೇಕ ಮಧುಮೇಹ ರೋಗಿಗಳಿಗೆ ಅರೇಕಾ ಟೀ ನೀಡಲಾಗುತ್ತಿದೆ. ವಿಶೇಷವಾಗಿ ವೈದ್ಯರೂ ಸಹ ಮಧುಮೇಹ ನಿಯಂತ್ರಣಕ್ಕೆ ರೋಗಿಗಳಿಗೆ ಅರೇಕಾ ಟೀ ಬಳಸುವಂತೆ ಸಲಹೆ ನೀಡುತ್ತಿದ್ದಾರೆ. ಅರೇಕಾ ಟೀ ಸಮಾಜಕ್ಕೆ ವ್ಯಾಪಕವಾಗಿ ಪ್ರಚಾರಗೊಳಿಸುತ್ತಿರುವ ಗ್ರೀನ್ ರೆಮಿಡಿಸ್ ಇದಕ್ಕೆ ಪೂರಕ ಸಹಕಾರ ನೀಡುತ್ತಿದೆ. ಈ ಮೂಲಕ ಅರೇಕಾ ಟೀ ಮಧುಮೇಹ ಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಅರೇಕಾ ಟೀ ಸಾಮಾಜಿಕ ಹೆಜ್ಜೆ ಇರಿಸಿದೆ.
ದೇಶಿ ಉತ್ಪನ್ನ ಅರೇಕಾ ಟೀ ಕುರಿತು ವ್ಯಾಪಕ ಪ್ರಚಾರದ ಸಹಕಾರ ನೀಡುತ್ತಿರುವ ಮಾಧ್ಯಮ ಮಿತ್ರರಿಗೆ ಅರೇಕಾ ಟೀ ಸಂಶೋಧಕ ನಿವೇದನ್ ನೆಂಪೆ ಹಾಗೂ ಗ್ರೀನ್ ರೆಮಿಡಿಸ್‌ನ ಎಂಡಿ ವೇಣುಗೋಪಾಲ್ ಹೆಬ್ಬಾರ್ ಅವರಿಂದ ಹೃತ್ಪೂರ್ವಕ ಅಭಿನಂದನೆ.
ಏನಿದು ಅರೇಕಾ ಟೀ? : ಸಾಮಾನ್ಯ ಅಡಿಕೆ ಮತ್ತು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಟೀ ಪೌಡರ್ ಇದು. ಶೇ.80ರಷ್ಟು ಚಿಟ್ಟಿ ಅಡಿಕೆಯನ್ನು ಸಂಸ್ಕರಿಸಿ ಮತ್ತು ಇದಕ್ಕೆ ಶೇ. 20ರಷ್ಟು ವಿವಿಧ ಗಿಡಮೂಲಿಕೆಗಳನ್ನು ಸೇರಿಸಿ ವಿಶೇಷ ಟೀ ಪೌಡರ್ ತಯಾರಿಸಲಾಗಿದೆ. ಇದಕ್ಕೆ ಅರೇಕಾ ಟೀ' ಎಂದು ಹೆಸರಿಸಲಾಗಿದೆ. ಗ್ರೀನ್ ಟೀಯಂತೆಯೇ ಇದೂ ಸಹ ಆರೋಗ್ಯಕರ ಪಾನೀಯ ಎಂದು ಪ್ರಯೋಗಗಳ ಮೂಲಕ ಸಾಬೀತಾಗಿದೆ.

ನಿವೇದನ್ ನಂಪೆ : ಗುಟುಕಾದಿಂದ ಮಾನ ಕಳೆದುಕೊಂಡಿದ್ದ ಅಡಿಕೆಯೊಳಗೆ ಇಂಥ ಅದ್ಭುತ ಔಷಧೀಯ ಗುಣಗಳಿಗೆ ಎಂಬುದನ್ನು ಕಂಡುಕೊಂಡಿದ್ದೇ ಈ ನಿವೇದನ್ ನಂಪೆ. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಎಂಬ ಹಳ್ಳಿಯಲ್ಲಿ. ಓದಿದ್ದು ಆಸ್ಟ್ರೇಲಿಯಾದ ಸ್ವಿಂಬರ್ನ್ ವಿಶ್ವವಿದ್ಯಾಲಯದಲ್ಲಿ.
ಉತ್ಪಾದನೆ ಮತ್ತು ಮಾರುಕಟ್ಟೆ ಎಂಬ ವಿಷಯದಲ್ಲಿ ವಿದೇಶಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದ ನಿವೇದನ್‌ಗೆ 6 ಲಕ್ಷ ರೂಪಾಯಿ ಸಂಬಳ ಕೈಬೀಸಿ ಕರೆಯುತ್ತಿತ್ತು. ಅದೇ ಹೊತ್ತಲ್ಲಿ ರಾಜ್ಯದಲ್ಲಿ ಗುಟಕಾ ನಿಷೇಧಗೊಂಡಿತ್ತು. ಅಡಿಕೆಯಲ್ಲಿ ವಿಷಕಾರಕ ಅಂಶಗಳಿವೆ ಎಂಬ ಗುಲ್ಲೆದ್ದಿತ್ತು. ಇದರಿಂದ ರಾಜ್ಯದ 6 ಲಕ್ಷ ಅಡಿಕೆ ಬೆಳೆಗಾರರು ಕಂಗಾಲಾಗಿಹೋಗಿದ್ದರು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವದೇಶಕ್ಕೆ ಮರಳಿದ ನಿವೇದನ್, ಅಡಿಕೆಯ ಮಾನ ಉಳಿಸೋಕೆ ಮುಂದಾದರು.
ಭಾರತೀಯ ಸಂಪ್ರದಾಯದಲ್ಲಿ ಬೆರೆದುಹೋಗಿದ್ದ ಅಡಿಕೆಯೊಳಗಿನ ಗುಣಗಳ ಸಂಶೋಧನೆಯಲ್ಲಿ ತೊಡಗಿದರು. ಅಡಿಕೆಯ ಬಗ್ಗೆ ಇವರಿಗಿದ್ದ ನಂಬಿಕೆ ಹುಸಿಯಾಗಲಿಲ್ಲ. 2015ರಲ್ಲಿ ಅಡಿಕೆಯೊಳಗೆ ಇಂಥ ಅಗಾಧ ಔಷಧೀಯ ಗುಣಗಳಿಗೆ ಎಂಬುದನ್ನು ಪ್ರಯೋಗಗಳ ಮೂಲಕವೇ ಸಾಬೀತುಪಡಿಸಿದರು. 2014-15ರ ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್ 2015ರಲ್ಲಿ ಇನೋವೇಟಿವ್ ಪ್ರೊಡಕ್ಟ್ ಆಫ್ ದಿ ಇಯರ್ ಪ್ರಶಸ್ತಿ. ಇವು ಅಡಿಕೆ ಚಹಾ (ಅರೇಕಾ ಟೀ)ಗೆ ಮೂಡಿರುವ ಹೆಮ್ಮೆಯ ಗರಿಗಳು.
2015ರಲ್ಲಿ ಧರ್ಮಸ್ಥಳ ಶ್ರೀವೀರೇಂದ್ರ ಹೆಗ್ಗಡೆಯವರ ಅಮೃತಹಸ್ತದಿಂದ ಮಾರುಕಟ್ಟೆಗೆ ಬಿಡುಗಡೆಯಾದ ಅರೇಕಾ ಟೀ ಇಂದು ಫೈವ್‌ಸ್ಟಾರ್ ಹೋಟೆಲ್‌ಗಳಿಗೂ ಲಗ್ಗೆ ಇಟ್ಟಿದೆ. ಪಂಚತಾರಾ ಹೋಟೆಲ್‌ಗಳಲ್ಲಿ ಅರೇಕಾ ಟೀಯನ್ನು ಕೇಳಿ ಪಡೆದು ಅದರ ಸ್ವಾದವನ್ನು ಸವಿಯುತ್ತಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications