ಬೆಂಕಿ ಅವಘಡ: ದೇವರ ದರ್ಶನಕ್ಕೆ ಹೋಗಿ ಜೀವ ಉಳಿಸಿಕೊಂಡ
ಬೆಂಗಳೂರು, ನವೆಂಬರ್ 8: ಮನೆಯೊಂದರಲ್ಲಿ ಅಗ್ನಿ ಅವಗಢ ಸಂಭವಿಸಿದ್ದು ಮನೆಯವರೆಲ್ಲರೂ ದೇವರ ದರ್ಶನಕ್ಕೆ ಹೋಗಿ ಜೀವ ಉಳಿಸಿಕೊಂಡ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.
ದೀಪಾವಳಿ ಎಲ್ಲರ ಬದುಕಲ್ಲಿ ಬೆಳಕನ್ನು ತರಲಿ ಎಂದು ಪ್ರಾರ್ಥಿಸುವ ಹಬ್ಬ ಒಂದೊಮ್ಮೆ ಮನೆಯವರ ಜೊತೆ ಮಹಾವೀರ್ ದೇವಸ್ಥಾನಕ್ಕೆ ತೆರಳಿರದೆ ಇದ್ದರೆ ಇಷ್ಟೊತ್ತಿಗಾಗಲೇ ಬೆಂಕಿಯಲ್ಲಿ ಬೆಂದಿರುತ್ತಿದ್ದರು. ದೇವರೇ ಅವರನ್ನು ರಕ್ಷಿಸಿದ ಎಂದರೆ ತಪ್ಪಾಲಾರದು.
ದೀಪಾವಳಿ ಹಬ್ಬದ ಪ್ರಯುಕ್ತ ಬೆಳಗ್ಗೆ ಬೇಗ ಎದ್ದು ಹೊಸ ಬಟ್ಟೆ ತೊಟ್ಟು ರಾಜಾಜಿನಗರ ನಿವಾಸಿ ಮಹಾವೀರ್ ಮನೆಯವರೊಂದಿಗೆ ಸೇವಸ್ಥಾನಕ್ಕೆ ತೆರಳಿದ್ದರು.

ಯಾಕೆಂರೆ 15 ವರ್ಷದ ಬಾಲಕ ಮಹಾವೀರ್ ಎಂದೂ ದೇವಸ್ಥಾನಕ್ಕೆ ಹೋಗಲು ತಕರಾರು ಮಾಡುತ್ತಿದ್ದ ನಾನು ಮನೆಯಲ್ಲಿಯೇ ಇರುತ್ತೇನೆ ಎಂದು ಹಠ ಮಾಡುತ್ತಿದ್ದ ಆದರೆ ಮನಸ್ಸು ಮಾಡಿ ದೇವಸ್ಥಾನಕ್ಕೆ ಹೋಗಿದ್ದ, ರಾಜಾಜಿನಗರದ 5 ನೇ ಬ್ಲಾಕ್‌ನಲ್ಲಿರುವ 63ನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ಅಗ್ನಿ ಅವಗಢ ಸಂಭವಿಸಿದೆ.
ರಾಜಾಜಿನಗರದ 5 ನೇ ಬ್ಲಾಕ್ 63 ನೇ ಅಡ್ಡರಸ್ತೆಯ ಮನೆ ಸಂಖ್ಯೆ 632 ರಲ್ಲಿ ಬೆಂಕಿ ಆಕಸ್ಮಿಕವುಂಟಾಯಿತು. ಯಾವುದೇ ಜೀವಹಾನಿಯಾಗಿಲ್ಲ. ದೇವಸ್ಥಾನಕ್ಕೆ ಹೋಗಲು ಯಾವತ್ತೂ ತಕರಾರು ಮಾಡುತ್ತಿದ್ದ 15 ವರ್ಷದ ಮಹಾವೀರ್ ಮನೆಯವರೊಂದಿಗೆ ಇಂದು ದೇವಸ್ಥಾನಕ್ಕೆ ಹೋಗಿದ್ದ. ಜೀವಸಹಿತ ಬದುಕಿದ. ಬೇಗ ಶಮನ ಮಾಡಿದ ಅಗ್ನಿಶಾಮಕದಳದ ಕಾರ್ಯಕ್ಕೆ ಅಭಿನಂದನೆಗಳು pic.twitter.com/uQgwq9eYXK
— Sureshkumar (@nimmasuresh) November 8, 2018
ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಲ್ಲೇಶ್ವರ ಶಾಸಕ ಸುರೇಶ್ ಕುಮಾರ್ ತಮ್ಮ ಟ್ವಿಟ್ಟರ್‌ನಲ್ಲಿ ವಿಡಿಯೋ ಸಮೇತ ಅಪ್‌ಲೋಡ್ ಮಾಡಿದ್ದಾರೆ.












Click it and Unblock the Notifications