Fire Accident: ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಧಗಧಗಿಸಿದ ಬೆಂಕಿ, ಇಲ್ಲಿದೆ ಮಾಹಿತಿ- ವಿಡಿಯೋ ನೋಡಿ
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಇದಕ್ಕೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ.
ಬೆಂಗಳೂರು, ಮಾರ್ಚ್, 10: ವೀರನಪಾಳ್ಯ (ಮಾನ್ಯತಾ ಟೆಕ್ ಪಾರ್ಕ್) ಬಳಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಇದಕ್ಕೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ದಟ್ಟನೆಯದಾಗಿ ಹೊತ್ತಿ ಉರಿಯುತ್ತಿರುವ ಬೆಂಕಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಅಲ್ಲಿದ್ದ ಸ್ಥಳೀಯರು ಬೇರೆ ದಾರಿಯಿಲ್ಲದೆ ಕೈಗೆ ಸಿಕ್ಕ ಪಾತ್ರೆ, ಬಕೆಟ್‌ಗಳಲ್ಲಿ ನೀರನ್ನು ಹಾಕುತ್ತಾ ಬೆಂಕಿ ನಂದಿಸಲು ಮುಂದಾಗಿದ್ದಾರೆ.
#Bengaluru
— Kamran (@CitizenKamran) March 10, 2023
Huge fire outbreak near veeranapalya (near manyata tech park) This video was recorded at 10:30 am .
What's happening?
This is 4th fire incident I am reporting in 24 hours pic.twitter.com/vt31eOrnEC
ಬೆಂಗಳೂರಿನಲ್ಲಿ ಧಗಧಗಿಸಿದ ಬೆಂಕಿ
ಈ ವಿಡಿಯೋ ಪ್ರಕಾರ ಅಗ್ನಿ ಅವಘಡ ಬೆಳಗ್ಗೆ 10:30ಕ್ಕೆ ನಡೆದಿದೆ ಎನ್ನಲಾಗಿದೆ. ಹಾಗೆಯೇ ಯಾವುದೇ ಅನಾಹುತಗಳು ಸಂಭವಿಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಅಲ್ಲಿದ್ದ ಸ್ಥಳೀಯರು ಆಕಾಶದೆತ್ತರಕ್ಕೆ ಧಗಧಗಿಸುತ್ತಿದ್ದ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ.

ರಾತ್ರಿ ವೇಳೆ ನಾಯಂಡಹಳ್ಳಿಯ ಪ್ರಮೋದ್ ಲೇಔಟ್ ಬಳಿ ಪ್ಲಾಸ್ಟಿಕ್ ಗೊಡಾನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸದ್ಯ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಮೂರು ಹೆಕ್ಟೇರ್ ವಿಸ್ತೀರ್ಣದಲ್ಲಿರುವ ಪ್ಲಾಸ್ಟಿಕ್ ಗೊಡಾನ್ ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ.

ಘಟನಾ ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿವಲ್ಲಿ ಯಶಸ್ವಿಯಾಗಿದ್ದವು. ಇನ್ನು ಗೊಡಾನ್‍ನಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳು ಹಾಗೂ ನಾಲ್ಕಕ್ಕೂ ಹೆಚ್ಚು ಗೂಡ್ಸ್ ವಾಹನಗಳು ಸುಟ್ಟು ಹೋಗಿದ್ದು, 50 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications