ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ಮನವಿ
ಬೆಂಗಳೂರು, ನವೆಂಬರ್ 27: ಶನಿವಾರ ನಿಧನರಾದ ನಟ, ಮಾಜಿ ಸಚಿವ ಅಂಬರೀಶ್ ಅವರ ಹೆಸರನ್ನು ಚಿರಸ್ಮರಣೀಯವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾಗಿವೆ.
ವಿಶಿಷ್ಟ ವ್ಯಕ್ತಿತ್ವದ ಅಂಬರೀಶ್ ನೆನಪು ಸುದೀರ್ಘ ಕಾಲ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತದೆಯಾದರೂ, ಅವರ ಗೌರವಾರ್ಥ ಸ್ಮಾರಕ ನಿರ್ಮಾಣದಂತಹ ಕಾರ್ಯಗಳು ನಡೆಯಲಿವೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಈಗಾಗಲೇ ಘೋಷಿಸಿದ್ದಾರೆ.
ಅದರ ಬೆನ್ನಲ್ಲೇ ರಸ್ತೆಗೂ ಅಂಬರೀಶ್ ಅವರ ಹೆಸರು ಇರಿಸುವಂತೆ ಒತ್ತಾಯ ಕೇಳಿಬಂದಿದೆ.

ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರು ಮೃತಪಟ್ಟ ಬಳಿಕ ಅವರ ಜ್ಞಾಪಕಾರ್ಥ ರಸ್ತೆಗಳಿಗೆ ಅವರ ಹೆಸರು ಇರಿಸಲಾಗಿತ್ತು. ಅದೇ ರೀತಿ ಅಂಬರೀಶ್ ಅವರ ಹೆಸರು ಕೂಡ ರಸ್ತೆಗೆ ಇರಿಸುವಂತೆ ಆಗ್ರಹಿಸಲಾಗಿದೆ.
ಅಂಬರೀಶ್ ರವರು ಚಿತ್ರರಂಗಕ್ಕೆ ಸಲ್ಲಿಸಿರು ಸೇವೆಯನ್ನು ಗುರುತಿಸಿ ಅವರ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯನ್ನ ಅಂಬರೀಶ್ ರಸ್ತೆ ಎಂದು ಬದಲಿಸಿ ಎಂದು
— BAMA HARISH (@BamaHarish) 27 November 2018
ಮಾನ್ಯ ಮುಖ್ಯಮಂತ್ರಿಗಳಲಿ ಮನವಿ @hd_kumaraswamy
- ಭಾ.ಮ.ಹರೀಶ್
ಕಾರ್ಯದರ್ಶಿಗಳು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ pic.twitter.com/Ejm9yBo6Q7
ಅಂಬರೀಶ್ ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಗಣನೀಯ ಸೇವೆಯನ್ನು ಗಮನಿಸಿ ಅವರ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಇರಿಸುವ ಮೂಲಕ ಅದಕ್ಕೆ ಅಂಬರೀಶ್ ರಸ್ತೆ ಎಂದು ಮರುನಾಮಕರಣ ಮಾಡಬೇಕು ಎಂಬುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಭಾ.ಮ. ಹರೀಶ್ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.












Click it and Unblock the Notifications