20 ದಿನಗಳ ಹೆಣ್ಣು ಮಗುವನ್ನೇ ಕೊಂದ ದೂರ್ತ ತಂದೆ
ಬೆಂಗಳೂರು, ಅಕ್ಟೋಬರ್ 12: ತಂತ್ರಜ್ಞಾನಗಳು ಎಷ್ಟೇ ಮುಂದುವರೆದಿದ್ದರೂ , ಪೋಷಕರು ಎಷ್ಟೇ ವಿದ್ಯೆ ಕಲಿತಿದ್ದರೂ ಹೆಣ್ಣಿನ ಮೇಲೆ ತಾತ್ಸಾರ ಮನೋಭಾವ ಮಾತ್ರ ಬಿಟ್ಟಿಲ್ಲ.
ಆಕೆಯೂ ಪುರುಷನಿಗೆ ಸರಿಸಮಾನ, ಆಕೆಯೂ ಪೋಷಕರನ್ನು ನೋಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ ಎಂದು ಯಾವಾಗ ಅರಿವಾಗುತ್ತೋ ಅಂದು ನಮ್ಮ ಸಮಾಜ ಉದ್ಧಾರವಾಗುತ್ತದೆ. ಈ ಪೀಟಿಕೆ ಹಾಕಲು ಕೂಡ ಒಂದು ಕಾರಣವಿದೆ.
ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ 20 ದಿನಗಳ ಹಸುಗೂಸನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ, ಸುಬ್ಬನಪಾಳ್ಯದಲ್ಲಿ ವಾಸವಾಗಿರುವ ನೇಪಾಳ ಮೂಲದ ಗೋಕುಲ್ ಎಂಬಾತ ಗುರುವಾರ ರಾತ್ರಿ ಹೆಂಡಿತಿಯೊಂದಿಗೆ ಜಗಳವಾಡಿ, ಸಂದರ್ಭದಲ್ಲಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಘಟನೆ ಸಂಬಂಧ ಈತನ ಹೆಂಡತಿ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಹೆಣ್ಣು ಮಗು ಎಂಬ ಕಾರಣಕ್ಕೆ ಆತನ ಕೊಲೆ ಮಾಡಿದ್ದಾನೆ, ಕೋಪದಲ್ಲಿ ಕೊಲೆ ಮಾಡಿರುವುದಲ್ಲ ಎನ್ನುವುದು ಬೆಳಕಿಗೆ ಬಂದಿದೆ.
ಆ ಇಪ್ಪತ್ತು ದಿನಗಳ ಕಂದ ಆತನಿಗೆ ಏನು ಮಾಡಿದೆ ಎನ್ನುವುದೇ ಪ್ರಶ್ನೆಯಾಗಿದೆ. ಈ ಮೊದಲು ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮಾಡಿಸಿ ಹೆಣ್ಣು ಎಂದು ಗೊತ್ತಾದರೆ ಗರ್ಭವನ್ನು ತೆಗೆಸುತ್ತಿದ್ದರು ಆದರೆ ಇದೀಗ ಮಗು ಹುಟ್ಟಿದ ಮೇಲೂ ಕೊಲೆ ಮಾಡುವ ನೀಚ ಜನರೂ ಇನ್ನೂ ಇದ್ದಾರೆ ಎನ್ನುವುದೇ ವಿಪರ್ಯಾಸ.












Click it and Unblock the Notifications