ಮಗಳನ್ನು ಮಾತನಾಡಿಸಿದಕ್ಕೆ ಯುವಕನಿಗೆ ತಂದೆ ಮಾಡಿದ್ದೇನು?
ಬೆಂಗಳೂರು, ನವೆಂಬರ್ 29: ಯುವತಿಯರನ್ನು ಚುಡಾಯಿಸುವುದು, ರೇಗಿಸುವುದು , ಪ್ರೇಮ ನಿವೇದನೆ ಮಾಡುವುದು ಕೂಡ ಕಾಮನ್ ಆಗಿರುವ ಈ ಕಾಲದಲ್ಲಿ ಮಗಳನ್ನು ಯುವಕನೊಬ್ಬ ಮಾತನಾಡಿಸಿದ ಎನ್ನುವ ಕಾರಣಕ್ಕೆ ಯುವತಿ ತಂದೆ ಯುವಕನಿಗೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.ಅವಿನಾಶ್ (28) ಹಲ್ಲೆಗೊಳಗಾದ ವ್ಯಕ್ತಿ , ಈತನ ತಂದೆ ಲಕ್ಷ್ಮಣ್ ನೀಡಿದ ದೂರಿನ ಮೇರೆಗೆ ಯುವತಿಯ ತಂದೆ ನಾಗೇಶ್ ಸಹಚರರಾದ ಶ್ಯಾಮ್, ಕಾರ್ತಿಕ್ , ಶಶಾಂಕ್ ವಿರುದ್ಧ ಪ್ರಕರಣ ದಾಖಲಾಗಿದೆ.
ನಾಗೇಶ್ ಅವರ ಪುತ್ರಿ ಭೂಮಿಕಾ, ಅವಿನಾಶ್ ಜೊತೆ ಆಗಾಗ ಮಾತನಾಡುತ್ತಿದ್ದರು, ಇದು ಎರಡೂ ಮನೆಯವರಿಗೂ ಗೊತ್ತಾಗಿ ನವೆಂಬರ್ 23ರಂದು ಭೂಮಿಕಾ ಮತ್ತು ಅವಿನಾಶ್ ಇಬ್ಬರನ್ನೂ ಕಡೆದು ಬುದ್ಧಿ ಹೇಳಿದ್ದರು. ಆದರೂ ಇಬ್ಬರು ಆಗಾಗ ಮಾತನಾಡುತ್ತಿದ್ದರು ಎನ್ನುವ ಸಂಗತಿ ನಾಗೇಶ್ ಕಿವಿಗೆ ಬಿದ್ದಿದ್ದರಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಡೀ ದೇಹದ ಮೇಲೆ ಸ್ವಾಧೀನ ಕಳೆದುಕೊಳ್ಳುವಂತೆ ಹಲ್ಲೆ ಮಾಡಿದ್ದಾರೆ ಅವಿನಾಶ್ ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ, ಈ ಕುರಿತು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications