ಕರುನಾಡ ಯುವರಾಜನ ಹುಟ್ಟು ಹಬ್ಬಕ್ಕೆ ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಟಿ
ಬೆಂಗಳೂರು, ಜನವರಿ 29 : ಮೊಹಮ್ಮದ್ ನಲಪಾಡ್ ಹುಟ್ಟು ಹಬ್ಬ ಆಚರಣೆಯ ಆಹ್ವಾನ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನವರಿ 31ರಂದು ಹುಟ್ಟು ಹಬ್ಬವನ್ನು ಸಂಭ್ರಮದಿಂದ ಅಭಿಮಾನಿಗಳು ಆಚರಣೆ ಮಾಡಲಿದ್ದಾರೆ.
ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್. ಎ. ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್. ಜನವರಿ 31ರಂದು ಅವರ ಹುಟ್ಟು ಹಬ್ಬ. ಎಂ. ಎಚ್. ನಲಪಾಡ್ ಅಭಿಮಾನಿಗಳು ಹುಟ್ಟು ಹಬ್ಬದ ದಿನ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಹ್ವಾನ ಪತ್ರಿಕೆಯಲ್ಲಿ ಮೊಹಮ್ಮದ್ ನಲಪಾಡ್‌ರನ್ನು ಕರುನಾಡ ಯುವರಾಜ, ಯುವಕರ ಕಣ್ಮಣಿ ಎಂದು ಬಣ್ಣಿಸಲಾಗಿದೆ. ಮೊಟ್ಟ ಮೊದಲ ಬಾರಿಗೆ ಮೋಟಪ್ಪನಪಾಳ್ಯದಲ್ಲಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.

ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ : ಮೊಹಮ್ಮದ್ ನಲಪಾಡ್ ಹುಟ್ಟು ಹಬ್ಬದಂದು ಕೇಕ್ ಕಟ್ ಮಾಡುವಾಗ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.
ಜನವರಿ 31ರಂದು ಮಧ್ಯಾಹ್ನ 1 ಗಂಟೆಗೆ ಸಂಭ್ರಮಾಚರಣೆ ಆರಂಭವಾಗುತ್ತದೆ. ಬಡವರಿಗೆ ಸೀರೆ ಮತ್ತು ಸಿಹಿ ತಿಂಡಿ ವಿತರಣೆಯನ್ನು ಮೋಟಪ್ಪನಪಾಳ್ಯದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕೆಲವು ದಿನಗಳ ಹಿಂದೆ ನಟ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಈಗ ಮೊಹಮ್ಮದ್ ನಲಪಾಡ್ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಅಭಿಮಾನಿಗಳು ಮುಂದಾಗಿದ್ದಾರೆ.












Click it and Unblock the Notifications