Get Updates
Get notified of breaking news, exclusive insights, and must-see stories!

ಬೆಂಗಳೂರು ರಸ್ತೆಬದಿಗಳಲ್ಲಿದ್ದ ಲೈಂಗಿಕ ಚಿಕಿತ್ಸೆ ಟೆಂಟ್‌ಗಳು ಕಣ್ಮರೆ: ಫಲ ಕೊಟ್ಟ ಪೊಲೀಸ್ ಕಾರ್ಯಾಚರಣೆ

"ನಿಮ್ಮ ಎಲ್ಲ ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು, ಲೈಂಗಿಕ ಶಕ್ತಿ ವೃದ್ಧಿಗೆ ವಿಶೇಷ ಔಷಧ ನಮ್ಮಲ್ಲಿ ಲಭ್ಯ" ಎಂಬ ಫಲಕವುಳ್ಳ ಟೆಂಟ್‌ಗಳು ಹೆದ್ದಾರಿಗಳ ಬದಿಯಲ್ಲಿ ಹೆಚ್ಚಾಗಿ ಇರುತ್ತವೆ. ಈ ಲೈಂಗಿಕ ಆರೋಗ್ಯ ಚಿಕಿತ್ಸಾಲಯಗಳಿಗೆ ಯಾವುದೇ ಅನುಮತಿಯೂ ಇರುವುದಿಲ್ಲ. ಕ್ರಮೇಣ ಇಂತಹ ಟೆಂಟ್‌ಗಳು ಬೆಂಗಳೂರಿನ ರಸ್ತೆಗಳಲ್ಲೂ ಬೀಡುಬಿಟ್ಟವು. ಕೆಲವರು ಇದನ್ನು ನಂಬಿ ಮೋಸ ಹೋಗಿದ್ದೂ ಉಂಟು. ಆದರೆ ಇತ್ತೀಚಿನ ಪ್ರಕರಣದಿಂದ ಅಕ್ರಮವಾಗಿ ಹಾಕಿದ್ದ ಇಂತಹ ಟೆಂಟ್‌ಗಳು ಕಣ್ಮರೆಯಾಗಿವೆ. ಪೊಲೀಸ್ ಕಾರ್ಯಾಚರಣೆ ಫಲ ಕೊಟ್ಟಿದೆ.

ಬೆಂಗಳೂರಿನಲ್ಲಿ ಬಸ್ ನಿಲ್ದಾಣಗಳು ಮತ್ತು ಜನದಟ್ಟಣೆಯ ಜಂಕ್ಷನ್‌ಗಳಲ್ಲಿ ಇಂತಹ ಟೆಂಟ್‌ಗಳು ವರ್ಷಗಳಿಂದಲೂ ಇದ್ದವು. ಲೈಂಗಿಕ ಸಮಸ್ಯೆಗಳು, ಒತ್ತಡ ಮತ್ತು ಆತಂಕಗಳಿಗೆ ನಮ್ಮಲ್ಲಿ "ಖಚಿತ ಪರಿಹಾರ" ಎಂದು ಭರವಸೆ ನೀಡುತ್ತಿದ್ದವು. ಇತ್ತೀಚೆಗೆ ಇಂತಹ ಟೆಂಟ್‌ವೊಂದರಿಂದ ಟೆಕ್ಕಿಯೊಬ್ಬ ಲಕ್ಷಾಂತರ ರೂಪಾಯಿ ಹಣ ನೀಡಿ ಗಿಡಮೂಲಿಕೆ ಔಷಧ ಖರೀದಿಸಿ ವಂಚನೆಗೆ ಒಳಗಾಗಿದ್ದರು. ಅಲ್ಲದೆ ಅವರಿಗೆ ಮೂತ್ರಪಿಂಡ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಬಳಿಕ ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿ, ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರೆ. ಹೀಗಾಗಿ ನಗರದೊಳಗೆ ಇದ್ದ ಟೆಂಟ್‌ಗಳು ಒಂದೊಂದಾಗಿ ಹೊರವಲಯಗಳಿಗೆ ಸ್ಥಳಾಂತರಗೊಳ್ಳುತ್ತಿವೆ.

Fake Treatment Tents Disappear From Bengaluru Roads After Police Crackdown

ಏನಿದು ಪ್ರಕರಣ?

ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ಟೆಕ್ಕಿಯೊಬ್ಬರು ಕೆಂಗೇರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಯ ಪಕ್ಕದಲ್ಲಿದ್ದ ಟೆಂಟ್‌ನಲ್ಲಿ ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಬೋರ್ಡ್ ಇರುವುದನ್ನು ಗಮನಿಸಿ, ಚಿಕಿತ್ಸೆಗೆ ಸಲಹೆ ಕೇಳಿದ್ದರು. ಆಗ 1 ಗ್ರಾಂ ಔಷಧಿಗೆ 1,60,000 ಬೆಲೆಯ ಔಷಧವನ್ನು ಯಶವಂತಪುರದ ಆಯುರ್ವೇದಿಕ್ ಶಾಪ್ನಲ್ಲಿ ಮಾತ್ರ ಖರೀದಿಸುವಂತೆ ಹೇಳಿದ್ದ. ಆನ್‌ಲೈನ್ ಪೇಮೆಂಟ್ ಮಾಡಬಾರದು ಹಾಗೂ ಯಾರ ಜೊತೆಗೆ ಬರಬಾರದು ಎಂದು ಷರತ್ತು ಕೂಡ ಹಾಕಲಾಗಿತ್ತು. ಅದರಂತೆ ಒಟ್ಟು 17 ಲಕ್ಷ ರೂಪಾಯಿಯನ್ನು ಔಷಧಕ್ಕಾಗಿ ಖರ್ಚು ಮಾಡಿ, ಹಣದ ಕೊರತೆಯಿಂದ 20 ಲಕ್ಷ ಲೋನ್ ಪಡೆದಿದ್ದರು. ಔಷಧಿ ತೆಗೆದುಕೊಂಡ ಮೇಲೂ ಸಮಸ್ಯೆ ಬಗೆಹರಿದಿಲ್ಲ. ಕೊನೆಗೆ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಹಾನಿಯಾಗಿರುವುದು ವರದಿಯಲ್ಲಿ ದೃಢವಾಗಿತ್ತು.

ಅಕ್ರಮ ಲೈಂಗಿಕ ಚಿಕಿತ್ಸಾ ಕೇಂದ್ರದ ಹೆಸರಿನಲ್ಲಿ ನಕಲಿ ವೈದ್ಯನೊಬ್ಬ ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ಟೆಕ್ಕಿಗೆ ಬರೋಬ್ಬರಿ 48 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಗಿಡಮೂಲಿಕೆ ಔಷಧಿ ಸೇವಿಸಿದ ನಂತರ ಆ ವ್ಯಕ್ತಿಗೆ ತೀವ್ರ ಮೂತ್ರಪಿಂಡ ಹಾನಿಯಾದ ಈ ಆಘಾತಕಾರಿ ವಂಚನೆ ಪ್ರಕರಣ ನಗರವನ್ನೇ ಬೆಚ್ಚಿಬೀಳಿಸಿತ್ತು. ಪೊಲೀಸರು ಅಲರ್ಟ್‌ ಆಗಿ ಈ ಅಕ್ರಮ ದಂಧೆ ವಿರುದ್ಧ ಕಾರ್ಯಾಚರಣೆ ನಡೆಸಿ ಎತ್ತಂಗಡಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರಿಂದ ಎತ್ತಂಗಡಿ

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಆದೇಶದ ಮೇರೆಗೆ ನಗರ ವ್ಯಾಪ್ತಿಯಲ್ಲಿ ಇಂತಹ ಅಕ್ರಮ ಟೆಂಟ್‌ಗಳನ್ನು ಪತ್ತೆ ಹಚ್ಚಿ, ಚಿಕಿತ್ಸಾ ಕೇಂದ್ರಗಳನ್ನು ಮುಚ್ಚಲು ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದ್ದು, ಪ್ರಮಾಣಪತ್ರ ಪರಿಶೀಲನೆ ವೇಳೆ ಅವರು ಬಹುತೇಕರು ನಕಲಿ ಎಂದು ತಿಳಿದುಬಂದಿದೆ. ಹೀಗಾಗಿ ಅಂತಹ ನಕಲಿ ಟೆಂಟ್‌ಗಳನ್ನು ಎತ್ತಂಗಡಿ ಮಾಡಿಸಲಾಗಿದ್ದು, ಮತ್ತೆ ಕಡೆಗೆ ಬರದಂತೆ ಎಚ್ಚರಿಕೆಯೂ ನೀಡಲಾಗಿದೆ.

ಈ ನಕಲಿ ವೈದ್ಯರು ಸಾಮಾನ್ಯವಾಗಿ ಕರ್ನಾಟಕದವರೂ ಅಲ್ಲ. ಬೇರೆ ರಾಜ್ಯಗಳಿಂದ ಬಂದು ಹೆದ್ದಾರಿಗಳ ಪಕ್ಕದಲ್ಲಿ ಟೆಂಟ್‌ ಹಾಕಿಕೊಂಡು ಚಿಕಿತ್ಸೆ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೆ ಆರೋಗ್ಯ ಸಮಸ್ಯೆಗಳಿಂದ ಬಳಲುವ ಜನರು ಈ ಗಿಡಮೂಲಿಕೆಗಳನ್ನು ಬಳಸಿ, ಅಡ್ಡಪರಿಣಾಮಗಳಿಗೆ ಒಳಗಾಗುತ್ತಿರುವ ಪ್ರಕರಣಗಳೂ ಸಾಕಷ್ಟಿವೆ. ಇವರನ್ನು ತಾತ್ಕಾಲಿಕವಾಗಿ ಇಲ್ಲಿಂದ ನಿರ್ಬಂಧಿಸಿದರೆ ಸಾಲುವುದಿಲ್ಲ. ಮತ್ತೆ ಅವರ ಎಲ್ಲಿಯೂ ಇಂತಹ ಕೃತ್ಯಗಳನ್ನು ಎಸಗದಂತೆ ಕಾನೂನಿನ ಬಿಸಿ ಮುಟ್ಟಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+