ಸಿಎಂ ರಾಜೀನಾಮೆ ಕುರಿತು ಹರಿದಾಡುತ್ತಿದೆ ನಕಲಿ ರಾಜೀನಾಮೆ ಪತ್ರ
Recommended Video
ಬೆಂಗಳೂರು, ಜುಲೈ 22: ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪತ್ರವೊಂದು ಹರಿದಾಡುತ್ತಿದೆ. ಆದರೆ ಇದು ನಕಲಿ ಆಗಿದೆ.
ಸಿಎಂ ಕುಮಾರಸ್ವಾಮಿ ಅವರು ರಾಜ್ಯಪಾಲರಿಗೆ ಬರೆದಿರುವ ರಾಜೀನಾಮೆ ಪತ್ರ ಎಂಬ ಹೆಸರಿನಲ್ಲಿ ಪತ್ರ ಹರಿದಾಡುತ್ತಿದ್ದು, ಕೆಲವು ಮಾಧ್ಯಮಗಳಲ್ಲಿಯೂ ಪತ್ರ ಪ್ರಕಟವಾಗಿದೆ. ಪತ್ರದಲ್ಲಿ ಇಂದಿನ ದಿನಾಂಕ ಇದ್ದು, ಕುಮಾರಸ್ವಾಮಿ ಅವರ ಸಹಿಯೂ ಇದೆ. ಆದರೆ ಈ ಸಹಿ ನಕಲಿ ಆಗಿದೆ.
ಈ ಬಗ್ಗೆ ಸದನದಲ್ಲೂ ಸಿಎಂ ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ್ದು, 'ನನ್ನ ನಕಲಿ ರಾಜೀನಾಮೆ ಪತ್ರ ಹರಿದಾಡುತ್ತಿದೆ, ನಾನು ರಾಜೀನಾಮೆ ನೀಡಲಿ ಎಂದು ಎಷ್ಟು ಜನರಿಗೆ ಆತುರವಿದೆಯೋ ಗೊತ್ತಿಲ್ಲ' ಎಂದು ಹೇಳಿದರು.

'ನನ್ನನ್ನು ಸಿಎಂ ಸ್ಥಾನದಿಂದ ಇಳಿಸಿ ಎಷ್ಟು ತಾವು ಸಿಎಂ ಆಗಬೇಕು ಎಂದು ಎಷ್ಟು ಜನರಿಗೆ ಆತುರವಿದೆಯೋ ಗೊತ್ತಿಲ್ಲ' ಎಂದ ಸಿಎಂ ಕುಮಾರಸ್ವಾಮಿ ಅವರು ಸದನಕ್ಕೆ ನಕಲಿ ರಾಜೀನಾಮೆ ಪತ್ರ ತೋರಿಸಿದರು.

ಅಷ್ಟೆ ಅಲ್ಲದೆ, ತಮ್ಮ ಸಹಿಯನ್ನು ನಕಲು ಮಾಡಿರುವ ಬಗ್ಗೆಯೂ ಸಿಎಂ ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದರು.












Click it and Unblock the Notifications