• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೈಂಗಿಕ ದೌರ್ಜನ್ಯ ಹೆಸರಲ್ಲಿ ಬ್ಲ್ಯಾಕ್ ಮೇಲ್‌: ಪತ್ರಕರ್ತ ಸೆರೆ

|

ಬೆಂಗಳೂರು. ನ. 25: ಖಾಸಗಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದುಷ್ಕರ್ಮಿಗಳು ಬ್ಲ್ಯಾಕ್ ಮೇಲ್ ತಂತ್ರಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ಪತ್ರಕರ್ತ ರಾಜೇಶ್ ಕಾರ್ವಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಪತ್ರಕರ್ತನ ಸೋಗಿನಲ್ಲಿ ಬಂದು ತನ್ನ ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಶಾಲಾ ಆಡಳಿತ ಮಂಡಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ರಾಜೇಶ್ ಕಾರ್ವಿ(30)ಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.[ಲಜ್ಜೆಗೆಟ್ಟ ಅಪ್ಪನ ಕಾಮದಾಹಕ್ಕೆ ಬಲಿಯಾದ ಮಗಳು]

ಹಣ ವಸೂಲಿ ಮಾಡುತ್ತಿದ್ದ ಮಾಡುತ್ತಿದ್ದ ಸಂದರ್ಭ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿಯೇ ಸಿಕ್ಕಿಬಿದ್ದಿದ್ದಾನೆ. ಬಸವೇಶ್ವರ ನಗರದ ನಾಗಶೆಟ್ಟಿಹಳ್ಳಿಯ ರಾಧಾಕೃಷ್ಣ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಗೆ ಆರೋಪಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಬಗ್ಗೆ ಮುಖ್ಯ ಶಿಕ್ಷಕಿ ಸುನೀತಾ ಪೊಲೀಸರಿಗೆ ಮಾಹಿತಿ ನೀಡಿದ್ದರು.

ರಾಜೇಶ್ ಪುತ್ರ ಇದೇ ಶಾಲೆಯಲ್ಲಿ ಎಲ್ ಕೆಜಿ ಓದುತ್ತಿದ್ದ. ಆತನ ಮೇಲೆ ನಿಮ್ಮ ಶಾಲೆಯಲ್ಲಿ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿದ್ದ. ಅಲ್ಲದೇ ಎರಡು ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಈತನ ವರ್ತನೆ ಗೆ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದಾಗ 'ನಾನೊಬ್ಬ ಪತ್ರಕರ್ತ, ನಿಮ್ಮ ಶಾಲೆಯ ಮಾನ ಹರಾಜು ಮಾಡುತ್ತೇನೆ' ಎಂದು ಬೆದರಿಸಿದ್ದ.['ಅತ್ಯಾಚಾರ ಪ್ರೇರೇಪಿಸುವ ಚಿತ್ರ ಕಿತ್ತು ಬಿಸಾಕಿ']

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ

ಹಣಕ್ಕಾಗಿ ಪೀಡಿಸುತ್ತಿದ್ದ ರಾಜೇಶನನ್ನು ಒಂದು ಲಕ್ಷ ರೂ. ನೀಡುತ್ತೇವೆ ಎಂದು ಹೇಳಿ ಕಚೇರಿಗೆ ಕರೆಸಿಕೊಳ್ಳಲಾಗಿದೆ. ಹಣವನ್ನು ಮುಖ್ಯಶಿಕ್ಷಕಿ ಸುನೀತಾ ಎಣಿಸಿ ನೀಡಿದ್ದಾರೆ. ಆದರೆ ಈ ವೇಳೆಗೆ ಹಾಜರಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಘಟನಾವಳಿಗಳೆಲ್ಲ ಕ್ಯಾಮರಾದಲ್ಲಿ ಚಿತ್ರೀಕರಣವಾಗಿದೆ. ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a bizarre case, the father of a four-year-old boy was arrested on Monday for trying to extort money from his child's school after falsely claiming the LKG student had been sexually abused on campus. The man had threatened to slap a case under the POCSO Act unless the school paid up Rs 2 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more