Fact Check: ಬೆಂಗಳೂರಿನಲ್ಲಿ ಸೀಲ್ ಡೌನ್ ಮಾಡುವುದಿಲ್ಲವೇ?

ಬೆಂಗಳೂರು, ಆಗಸ್ಟ್.17: ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಸಿಲಿಕಾನ್ ಸಿಟಿಯಲ್ಲಿ ಮೊದಲಿಗೆ ಹೋಲಿಸಿದ್ದಲ್ಲಿ ಕೊಂಚ ತಗ್ಗಿದೆ. ಈ ಹಿನ್ನೆಲೆ ಬುಧವಾರದಿಂದ ನಗರದಲ್ಲಿ ಸಂಪೂರ್ಣವಾಗಿ ಸೀಲ್ ಡೌನ್ ಪ್ರಕ್ರಿಯೆ ಇರುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.

Recommended Video

      Lakshmi Hebbalkar ಪುತ್ರನ ನಿಶ್ಚಿತಾರ್ಥಕ್ಕೆ ಎಲ್ಲಾ ಪಕ್ಷದವರಿಗೂ ಆಮಂತ್ರಣ | Oneindia Kannada

      ಸೀಲ್ ಡೌನ್ ಕೈ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಯಾವುದೇ ಕಾರಣಕ್ಕೂ ಸಂಪೂರ್ಣವಾಗಿ ಸೀಲ್ ಡೌನ್ ತೆರವುಗೊಳಿಸುತ್ತಿಲ್ಲ ಎಂದಿದ್ದಾರೆ.

      ಒಂದು ಮನೆಯಲ್ಲಿ ಒಬ್ಬರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದಲ್ಲಿ ಅಂಥ ಮನೆಗಳ ಸುತ್ತಮುತ್ತ ಸೀಲ್ ಡೌನ್ ಮಾಡುವುದನ್ನಷ್ಟೇ ತೆರವುಗೊಳಿಸಲಾಗುತ್ತಿದೆ. ಅದರ ಬದಲಿಗೆ ಮನೆಯ ಸುತ್ತ ಪೋಸ್ಟ್ ಅಂಟಿಸುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

       Fact check: Sealdown Completely Clearance In Bengaluru

      3ಕ್ಕಿಂತ ಹೆಚ್ಚು ಕೇಸ್ ಪತ್ತೆಯಾಗಿದ್ದಲ್ಲಿ ಸೀಲ್ ಡೌನ್:

      ಒಂದು ಪ್ರದೇಶದಲ್ಲಿ ಮೂರಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದಲ್ಲಿ ಅಂಥ ಪ್ರದೇಶದ ಸುತ್ತಮುತ್ತಲಿನ 100 ಮೀಟರ್ ಅಂತರದಲ್ಲಿ ಸೀಲ್ ಡೌನ್ ಮಾಡಲಾಗುತ್ತದೆ. ಕೇವಲ ಒಂದು ಎರಡು ಪ್ರಕರಣಗಳು ಪತ್ತೆಯಾದಲ್ಲಿ ಮಾತ್ರ ಸೀಲ್ ಡೌನ್ ಮಾಡುವುದನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಸೀಲ್ ಡೌನ್ ತೆರವುಗೊಳಿಸಲಾಗಿದೆ ಎನ್ನುವ ಬಗ್ಗೆ ತಪ್ಪು ಸಂದೇಶಗಳನ್ನು ರವಾನಿಸಬೇಡಿ. ಸಾರ್ವಜನಿಕರಿಗೆ ತಪ್ಪಾಗಿ ಮಾಹಿತಿಯನ್ನು ನೀಡಬೇಡಿ ಎಂದು ಬಿಬಿಎಂಪಿ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+