ಶಿವರಾತ್ರಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಇಂದ 300 ಹೆಚ್ಚುವರಿ ಬಸ್

ಬೆಂಗಳೂರು, ಫೆಬ್ರವರಿ 19: ಶಿವರಾತ್ರಿ ಹಬ್ಬಕ್ಕೆ ಕೆ.ಎಸ್.ಆರ್‌.ಟಿ 300 ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದು, ಹಬ್ಬಕ್ಕೆ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಇದರಿಂದ ಅನುಕೂಲ ಆಗಲಿದೆ.

ಬೆಂಗಳೂರಿನಿಂದ ಮಾತ್ರವೇ 300 ಹೆಚ್ಚುವರಿ ಬಸ್‌ಗಳು ವಿವಿಧ ಊರುಗಳಿಗೆ ತೆರಳುತ್ತಿದ್ದು, ಈ ಸೇವೆಯು ನಾಳೆಯಿಂದ ಹಬ್ಬದ ಹಿಂದಿನ ದಿನವಾದ ಗುರುವಾರದ ವರೆಗೆ ಇರಲಿದೆ.

ನಂತರ ಫೆಬ್ರವರಿ 23 ಕ್ಕೆ ವಿವಿಧ ನಗರಗಳಿಂದ ಬೆಂಗಳೂರಿಗೆ ಆಗಮಿಸಲು ಸಹ ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡುವಂತೆ ಆಯಾ ಡಿಪೋಗಳಿಗೆ ಸೂಚನೆ ನೀಡಲಾಗಿದೆ. ಪ್ರಮುಖ ನಗರಗಳಿಂದ ಬೆಂಗಳೂರಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ.

Extra 300 KSRTC Bus For Bengaluru For Shivrathri

ಆದರೆ ಮತ್ತೊಂದೆಡೆ ನಾಳೆ ಕೆ.ಎಸ್‌.ಆರ್.ಟಿ.ಸಿ ಸೇರಿದಂತೆ ಸಾರಿಗೆ ನಿಗಮಗಳ ನೌಕರರು ಬಂದ್‌ ಗೆ ಕರೆ ನೀಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಒಕ್ಕೂಟ ಕರೆ ಕೊಟ್ಟಿರುವ ಗುರುವಾರದ ಮುಷ್ಕರಕ್ಕೆ ಬಿಎಂಟಿಸಿ ಎನ್‌ಡಬ್ಲೂಕೆಆರ್‌ಟಿಸಿ (ಹುಬ್ಬಳ್ಳಿ) ಹಾಗೂ ಎನ್‌ಇಕೆಆರ್‌ಟಿಸಿ (ಕಲಬುರಗಿ) ಕಾರ್ಮಿಕ ಒಕ್ಕೂಟಗಳೂ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಫೆ 20 ರಂದು ರಾಜ್ಯಾದ್ಯಂತ ಸಾರಿಗೆ ವ್ಯತ್ಯಯ ಆಗಬಹುದೆಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+