• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ಲ್ಯಾಕ್‌ಮೇಲ್: ನ್ಯೂಸ್ ಚಾನೆಲ್ ಮಾಲೀಕ ಸೇರಿ 6 ಮಂದಿ ಅರೆಸ್ಟ್

|

ಬೆಂಗಳೂರು, ಅಕ್ಟೋಬರ್ 12: ನ್ಯೂಸ್ ಚಾನೆಲ್ ಆರಂಭಿಸಿ ಬೀದಿಗೆ ಸುಲಿಗೆಗಿಳಿದಿದ್ದ ಪ್ರಜಾಪ್ರತಿನಿಧಿ ಸುದ್ದಿ ಮಾಲೀಕ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಬಾಗಿಲು ಮುಚ್ಚಿದ ಸ್ವರಾಜ್ ಸುದ್ದಿ ವಾಹಿನಿ, ಪೊಲೀಸರಿಗೆ ದೂರು

ಬಟ್ಟೆ ವ್ಯಾಪಾರಿಗಳ ರಹಸ್ಯ ಕಾರ್ಯಾಚರಣೆ ನೆಪದಲ್ಲಿ ಬೆದರಿಸಿ ನಕಲಿ ಪತ್ರಕರ್ತರ ಸುಲಿಗೆ ಪ್ರಕರಣದಲ್ಲಿ ಸ್ಥಳೀಯ ಸುದ್ದಿವಾಹಿನಿ ಮುಖ್ಯಸ್ಥನೊಬ್ಬ ಬನಶಂಕರಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪಾಪರೆಡ್ಡಿ ಪಾಳ್ಯದ ನಿವಾಸಿ ಸುದ್ದಿ ವಾಹಿನಿ ಮುಖ್ತಸ್ಥ ಸಂತೋಷ್ ಬಂಧಿತರು.

ರವಿ-ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್ ಸೇರಿದ ಸೋಮಣ್ಣ

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಎಂಟು ತಿಂಗಳ ಹಿಂದೆ ಸ್ಥಳೀಯವಾಗಿ ಆರಂಭಿಸಿದ್ದ ಸುದ್ದಿವಾಹಿನಿಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಲು ಸಹಚರರ ಜೊತೆ ವಸೂಲಿ ದಂಧೆಗಿಳಿದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬನಶಂಕರಿ ಸ್ಟೈಲೋ ಬಟ್ಟೆ ಅಂಗಡಿ ಮಾಲಿಕ ಅಮಿತ್ ಅವರಿಗೆ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಉತ್ಪನ್ನ ಮಾರಾಟ ಮಾಡುತ್ತಿರುವ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತೇನೆ ಎಂದು ಬೆದರಿಸಿ ಸಂತೋಷ್ ತಂಡ ವಸೂಲಿಗೆ ಯತ್ನಿಸಿತ್ತು. ಈ ಕುರಿತು ಅಮಿತ್ ನೀಡಿದ ದೂರಿನ ಮೇರೆಗೆ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

'ಸ್ಟಿಂಗ್' ವಿಡಿಯೋ ಪ್ರಸಾರ ಮಾಡದಂತೆ ಚುನಾವಣಾ ಆಯೋಗ ಸೂಚನೆ

ಮೊದಲು ಸಂತೋಷ್ ಪ್ರಜಾಪ್ರತಿನಿಧಿ ಎನ್ನುವ ಪತ್ರಿಕೆಯನ್ನು ನಡೆಸುತ್ತಿದ್ದ ಬಳಿಕ ಅದನ್ನು ಸ್ಥಗಿತಗೊಳಿಸಿ ಎಂಟು ತಿಂಗಳ ಬಳಿಕ ಸುದ್ದಿ ವಾಹಿನಿಯನ್ನು ತನ್ನ ಹೆಂಡತಿ ಅಶ್ವಿನಿಯ ಹೆಸರಲ್ಲಿ ಆರಂಭಿಸಿದ್ದ.

ಈ ವಾಹಿನಿಗೆ ಅಶೋಕ್ ಕುಮಾರ್, ನವೀನ್, ರೋಹಿತ್, ಮಹದೇವ್ ಎಂಬುವರನ್ನು ನೇಮಿಸಿಕೊಂಡಿದ್ದ. ಕೇವಲ ಬನಶಂಕರಿ ಮಾತ್ರವಲ್ಲದೆ ಯಲಹಂಕ ಸೇರಿದಂತೆ ಅನೇಕ ಕಡೆಗಳಲ್ಲಿ ಇದೇರೀತಿ ಅಂಗಡಿಯ ವಿಡಿಯೋ ಚಿತ್ರೀಕರಿಸಿ ಬಳಿಕ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

English summary
Banashankari police have arrested six persons including a news channel owner who were involved in extorting people. Prime accused identified as Santosh Kumar, owner of Praja Pratinidhi channel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X