ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶಕ್ಕೆ ರಫ್ತಾಗುವ ಮಾವು ಗುಣಮಟ್ಟ ಪರಿಶೀಲನೆಗೆ ಸಂಸ್ಕರಣಾ ಘಟಕ

|
Google Oneindia Kannada News

ಬೆಂಗಳೂರು, ಮಾರ್ಚ್ 10: ಮಾವು ಅಭಿವೃದ್ಧಿ ನಿಗಮವು ಅತ್ಯಾಧುನಿಕ ಮಾವು ಸಂಸ್ಕರಣಾ ಘಟಕವನ್ನು ಚಿಂತಾಮಣಿಯ ಮಾಡಿಕೆರೆಯಲ್ಲಿ ಸ್ಥಾಪಿಸಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.

ಘಟಕದಲ್ಲಿ ಮಾವು ಸಂಸ್ಕರಣೆ ಮಾತ್ರವಲ್ಲದೆ, ರೈತರಿಗೆ ಮಾವು ಕೊಯ್ಲೋತ್ತರದ ಮಾಹಿತಿಯೂ ಸಿಗಲಿದೆ. ಬರೋಬ್ಬರಿ 1.10ಕೋಟಿರೂ. ವೆಚ್ಚದಲ್ಲಿ ಈ ಘಟಕ ನಿರ್ಮಾಣಗೊಂಡಿದೆ. ಕಟ್ಟಡ ಕಾಮಗಾರಿಗೆ 339ಲಕ್ಷ ರೂ ಗಳನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪೂರ್ಣಗೊಳಿಸಲಾಗಿದೆ.

ಮಾರುಕಟ್ಟೆಗೆ ಮಾರ್ಚ್ ಅಂತ್ಯಕ್ಕೆ ಲಗ್ಗೆ ಇಡಲಿವೆ ರುಚಿಯಾದ ಮಾವುಮಾರುಕಟ್ಟೆಗೆ ಮಾರ್ಚ್ ಅಂತ್ಯಕ್ಕೆ ಲಗ್ಗೆ ಇಡಲಿವೆ ರುಚಿಯಾದ ಮಾವು

ಇಂಗ್ಲೆಂಡ್ ಹಾಗೂ ಇತರೆ ಐರೋಪ್ಯ ರಾಷ್ಟ್ರಗಳಿಗೆ ರಫ್ತಾಗುವ ಮಾವಿನ ಹಣ್ಣನ್ನು ಹಾಟ್ ವಾಟರ್ ಡಿಪ್ ತಂತ್ರಜ್ಞಾನದ ಮೂಲಕ ಸಂಸ್ಕರಣೆ ಮಾಡಲಾಗುತ್ತದೆ. ಸುಮಾರು 48 ಡಿಗ್ರಿಗಳಷ್ಟು ಉಷ್ಣಾಂಶ ಇರುವ ನೀರಿನಲ್ಲಿ ಮಾವಿನ ಕಾಯಿಗಳನ್ನು ಹಾಕಿ, ಸುಮಾರು ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಲಾಗುತ್ತದೆ. ಅದಾದ ಬಳಿಕ ತೇವಾಂಶವಿಲ್ಲದಂತೆ ಒರೆಸಿ ಹೊರ ಬರುವ ವ್ಯವಸ್ಥೆ ಇದೆ.

Export quality of Mangoes processing unit in Madikeri

ಜತೆಗೆ ಹಣ್ಣಿನಲ್ಲಿರಬಹುದಾದ ನೊಣದ ಮೊಟ್ಟೆಯೂ ನಾಶವಾಗುತ್ತದೆ ಇದರಿಂದ ಹಣ್ಣು ತಿನ್ನಲು ಯೋಗ್ಯವಾಗಿರುತ್ತದೆ. ಯುರೋಪ್ ರಾಷ್ಟ್ರಗಳು, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಕೊರಿಯಾ, ಮಲೇಶಿಯಾ, ಅಮೆರಿಕಾಕ್ಕೆ ರಫ್ತಾಗುವ ಮಾವಿಎ ಬಿಸಿನೀರಿನ ಸಂಸ್ಕರಣಯನ್ನು ಕಡ್ಡಾಯವಾಗಿ ಮಾಡಲೇಬೇಕು. ಆದರೆ ಅರಬ್ ಮತ್ತು ಸಿಂಗಾಪುರಕ್ಕೆ ರಫ್ತು ಮಾಡುವ ಮಾವಿಗೆ ಈ ರೀತಿಯ ವೈಜ್ಞಾನಿಕ ಕ್ರಮಗಳಿಂದ ಸಂಸ್ಕರಣೆ ಮಾಡುವುದಿಲ್ಲ,
ಘಟಕವು ಒಂದು ಗಂಟೆಗೆ ಒಂದು ಟನ್ ಹಣ್ಣನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕೇಂದ್ರದಲ್ಲಿ 5ಟನ್ ಹಣ್ಣು ಮಾಗಿಸುವ ಘಟಕ, 5ಟನ್ ಪ್ರೀ ಕೂಲಿಂಗ್ ಘಟಕ, 5ಟನ್ ಕೋಲ್ಡ್ ರೂಮ್ ಗಳ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದು ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದ್ದಾರೆ.

English summary
Export quality of Mangos will be processed with hot water therapy in new constructed processing unit at Madikeri near Chintamani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X