Bengaluru Power cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮುಂದಿನ 3 ದಿನಗಳ ಕಾಲ ವಿದ್ಯುತ್ ಕಟ್!
ಬೆಂಗಳೂರಿನಲ್ಲಿ 24 ಗಂಟೆ ವಿದ್ಯುತ್ ಸೌಲಭ್ಯ ಸಿಗುತ್ತದೆ. ಆದರೆ ಈಗ ಕೆಲ ಏರಿಯಾಗಳಲ್ಲಿ ಪವರ್ ಕಟ್ ಆಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) & ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಸೇರಿ ವಿದ್ಯುತ್ ಸರಬರಾಜನ್ನು ಮಾಡುವ ಕಂಪನಿಗಳು ದುರಸ್ತಿ ಮತ್ತು ನಿರ್ವಹಣೆ ಕಾರ್ಯ ಕೈಗೊಳ್ಳಲಿವೆ. ಈ ಕಾರಣಕ್ಕೆ, ಬೆಂಗಳೂರಿನ ಈ ಪ್ರದೇಶದಲ್ಲಿ ಮುಂದಿನ ಕೆಲವು ದಿನಗಳ ಕಾಲ ವಿದ್ಯತ್ ಕಟ್ ಆಗುತ್ತಿದೆ.
ವಿದ್ಯತ್ ದುರಸ್ತಿ ಕಾರ್ಯಾಚರಣೆ ಜೊತೆಗೆ ನವೀಕರಣ, ಆಧುನೀಕರಣ ಮತ್ತೆ ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ, ಓವರ್‌ಹೆಡ್‌ನಿಂದ ಅಂಡರ್ ಗ್ರೌಂಡ್ ಕೇಬಲ್ ಬದಲಾವಣೆ, ವಿದ್ಯುತ್ ಕಂಬ ಬದಲಾವಣೆ, ಹಾನಿಯಾದ ಅಂಡರ್ ಗ್ರೌಂಡ್ ಕೇಬಲ್ ಬದಲಾವಣೆ ಸೇರಿ, ಹಲವು ಕಾಮಗಾರಿಗಳ ಕೈಗೆತ್ತಿಕೊಳ್ಳಲಾಗುತ್ತಿದೆ. ಹೀಗಾಗಿ ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶದಲ್ಲಿ ವಿದ್ಯತ್ ಸಮಸ್ಯೆ ಎದುರಾಗಲಿದೆ. ಹಾಗಾದರೆ ಯಾವ ಪ್ರದೇಶದಲ್ಲಿ ವಿದ್ಯುತ್ ಕೈಕೊಡಲಿದೆ?

ಇಲ್ಲಿ ಸೋಮವಾರ - ಶುಕ್ರವಾರ ಸಮಸ್ಯೆ
ಕೆಲವು ಏರಿಯಾದಲ್ಲಿ ಇಂದಿನಿಂದ ಅಂದ್ರೆ ಸೋಮವಾರದಿಂದ ಶುಕ್ರವಾರ ತನಕ ವಿದ್ಯುತ್ ಸಮಸ್ಯೆ ಎದುರಾಗಲಿದೆ. ಅವು ಯಾವುವು ಅಂದರೆ, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ತಿಪ್ಪನಹಳ್ಳಿ, ಎಲ್‌ಎಚ್ ಪಾಳ್ಯ, ಬೋರಸಂದ್ರ, ಬ್ಯಾಡರಳ್ಳಿ, ದಾಸರಳ್ಳಿ, ವೆಂಕಟಾಪುರ, ಸಾಲುಪರಳ್ಳಿ, ಸೀಬಿ ಅಗ್ರಹಾರ, ದೊಡ್ಡಸೀಬಿ, ತಿರಗದ ಹಳ್ಳಿ, ದುರ್ಗದ ಹಳ್ಳಿ, ದುರ್ಗದ ಹಳ್ಳಿ ಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿ ಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿಯಲ್ಲಿ ಈ ಸಮಸ್ಯೆ ಕಾಡಲಿದೆ. ಹಾಗೇ ಇನ್ನೂ ಹಲವು ಪ್ರದೇಶಗಳ ಪಟ್ಟಿಗೆ ಮುಂದೆ ಓದಿ.
ನವೆಂಬರ್ 20ಕ್ಕೆ ಎಲ್ಲೆಲ್ಲಿ ವಿದ್ಯುತ್ ಕಟ್?
ರಾಜಾಜಿನಗರದ 34, 35 ಮತ್ತು 36 ನೇ ಕ್ರಾಸ್, 2 ನೇ ಬ್ಲಾಕ್, 4 ನೇ ಬ್ಲಾಕ್, 53 ಕ್ರಾಸ್, 54 ಕ್ರಾಸ್, 6 ನೇ ಮುಖ್ಯ, 5 ನೇ ಬ್ಲಾಕ್, ಆರ್‌ಪಿಸಿ ಲೇಔಟ್ ಸೇರಿದಂತೆ ನೇತಾಜಿ ಲೇಔಟ್, ಅತ್ತಿಗುಪ್ಪೆ, ಹೆಚ್-ಹಳ್ಳಿ ಮುಖ್ಯ ರಸ್ತೆ, ಶಿವಾನಂದ ನಗರ, ಲಕ್ಷ್ಮಣ ನಗರ, ಮಾರುತಿ ಹಳೆಯ ಪಟಾಕಿ ಗೋಡೌನ್ ರಸ್ತೆ ಮತ್ತು ಓಂ ಶಕ್ತಿ ದೇವಸ್ಥಾನ ರಸ್ತೆ ಏರಿಯಾದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಲಿದೆ.
ನವೆಂಬರ್ 21ಕ್ಕೆ ಎಲ್ಲೆಲ್ಲಿ ಪವರ್ ಕಟ್?
ಎಸ್‌ಜೆಎಂ ನಗರ, ಬಾಬು ಜಗಜೀವನ ನಗರ, ದೇವರಾಜ್ ಅರಸ್ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ಎಸ್‌ಪಿ ಕಚೇರಿ, ಆರ್‌ಟಿಒ ಕಚೇರಿ & ಎಸ್.ಎಂ.ಕೆ ನಗರದಲ್ಲಿ ವಿದ್ಯತ್ ಕಟ್ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ. ಈ ಜಾಗದಲ್ಲಿ ಹಲವು ದುರಸ್ತಿ ಕಾರ್ಯಗಳು ನಡೆಯಲಿವೆ ಎನ್ನಲಾಗಿದೆ.
ನವೆಂಬರ್ 22ಕ್ಕೆ ಎಲ್ಲೆಲ್ಲಿ ಕರೆಂಟ್ ಕಟ್?
ಹಾಗೇ ನವೆಂಬರ್ 22ರ ಬುಧವಾರದಂದು, ಚೋಳೂರು ಪಾಳ್ಯ, ಪ್ರೇಮನಗರ, ಶಂಕರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಯುನಾನಿ ಆಸ್ಪತ್ರೆ, ನಿರಾಶ್ರಿತರ ಭವನ & ಪಿ ಆ್ಯಂಡ್ ಟಿ ಲೇಔಟ್ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.












Click it and Unblock the Notifications