ಐಟಿ ಕೆಲಸ ಬಿಟ್ಟು ಐಸ್‌ಕ್ರೀಮ್ ಮಾರಿದ ಟೆಕ್ಕಿ: ಬೆಂಗಳೂರಲ್ಲಿ 'ಫಲೂದಾ ಶಾಪ್' ತೆರೆಯಲು ಆದ ಖರ್ಚೆಷ್ಟು ಗೊತ್ತಾ?
ಬೆಂಗಳೂರು: ಸಾಮಾನ್ಯವಾಗಿ ಐಟಿ ಕಂಪನಿಯಲ್ಲಿ ಕೈತುಂಬಾ ಸಂಬಳ, ಎಸಿ ಆಫೀಸಿನಲ್ಲಿ ಕೂತು ಮಾಡುವ ಕೆಲಸವಿದ್ದರೆ ಯಾರೂ ಅದನ್ನು ಬಿಟ್ಟು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ಇಷ್ಟಪಡುವುದಿಲ್ಲ. ಆದರೆ, ಒರಾಕಲ್ (Oracle) ನಂತಹ ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಪ್ರದೀಪ್ ಕಣ್ಣನ್ ಎಂಬುವವರು ಮಾಡಿದ್ದು ಅದನ್ನೇ. ಲಕ್ಷಗಳ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿ, ಐಸ್‌ಕ್ರೀಮ್ ಮಾರುವ ಸಾಹಸಕ್ಕೆ ಕೈಹಾಕಿದ ಇವರು, ಇಂದು 'ದಿ ಫಲೂದಾ ಶಾಪ್' (The Falooda Shop) ಎಂಬ ಬ್ರಾಂಡ್ ಮೂಲಕ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಪ್ರದೀಪ್, ಬೆಂಗಳೂರಿನಂತಹ ದುಬಾರಿ ನಗರದಲ್ಲಿ ತಮ್ಮ ಮೊದಲ ಐಸ್‌ಕ್ರೀಮ್ ಔಟ್‌ಲೆಟ್ ತೆರೆಯಲು ಎಷ್ಟು ಖರ್ಚಾಯಿತು ಎಂಬುದರ ಸಂಪೂರ್ಣ ಲೆಕ್ಕಾಚಾರವನ್ನು (Breakdown) ನೀಡಿದ್ದಾರೆ. ಹೊಸದಾಗಿ ಉದ್ಯಮ ಆರಂಭಿಸಲು ಬಯಸುವವರಿಗೆ ಈ ಮಾಹಿತಿ ಈಗ ಬೆಳಕಾಗಲಿದೆ.

ಬೆಂಗಳೂರಲ್ಲಿ ಶಾಪ್ ತೆರೆಯಲು ಬೇಕಾದ ಬಂಡವಾಳ ಎಷ್ಟು?
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT) ಪದವೀಧರರಾಗಿರುವ ಪ್ರದೀಪ್ ಕಣ್ಣನ್ ಅವರ ಪ್ರಕಾರ, ಬೆಂಗಳೂರಿನಲ್ಲಿ 'ದಿ ಫಲೂದಾ ಶಾಪ್'ನ ಮೊದಲ ಶಾಖೆಯನ್ನು ಪ್ರಾರಂಭಿಸಲು ಅವರಿಗೆ ಸುಮಾರು 22 ಲಕ್ಷ ರೂಪಾಯಿ ವೆಚ್ಚವಾಯಿತಂತೆ. ಈ ಹಣ ಎಲ್ಲೆಲ್ಲಿ ಖರ್ಚಾಯಿತು ಎಂಬುದರ ಪಟ್ಟಿ ಇಲ್ಲಿದೆ:
1. ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸ (Interiors): ಗ್ರಾಹಕರನ್ನು ಸೆಳೆಯಲು ಅಂಗಡಿಯ ಅಂದ ಚೆಂದ ಮುಖ್ಯ. ಇದಕ್ಕಾಗಿ ಅತಿ ಹೆಚ್ಚು, ಅಂದರೆ ಸುಮಾರು 10 ಲಕ್ಷ ರೂ. ಖರ್ಚು ಮಾಡಲಾಗಿದೆ.
2. ಬಾಡಿಗೆ ಠೇವಣಿ (Rental Deposit): ಬೆಂಗಳೂರಿನಲ್ಲಿ ಕಮರ್ಷಿಯಲ್ ಜಾಗ ಬಾಡಿಗೆಗೆ ಪಡೆಯುವುದು ಸುಲಭದ ಮಾತಲ್ಲ. ಅಂಗಡಿಯ ಮುಂಗಡ ಅಥವಾ ಅಡ್ವಾನ್ಸ್‌ಗಾಗಿ ಅವರು 2.4 ಲಕ್ಷ ರೂ. ನೀಡಬೇಕಾಯಿತು.
3. ಕಚ್ಚಾ ವಸ್ತುಗಳು ಮತ್ತು ಪ್ಯಾಕೇಜಿಂಗ್: ವ್ಯಾಪಾರ ಆರಂಭಿಸಲು ಬೇಕಾದ ಐಸ್‌ಕ್ರೀಮ್ ಫ್ಲೇವರ್‌ಗಳು, ಹಾಲು, ಡ್ರೈ ಫ್ರೂಟ್ಸ್ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳಿಗೆ ಆರಂಭದಲ್ಲಿ 3.2 ಲಕ್ಷ ರೂ. ಬಂಡವಾಳ ಹೂಡಲಾಗಿತ್ತು.
4. ಉಪಕರಣಗಳು: ಫ್ರಿಡ್ಜ್, ಮಿಕ್ಸರ್ ಮತ್ತು ಇತರ ಅಗತ್ಯ ಎಲೆಕ್ಟ್ರಾನಿಕ್ ಉಪಕರಣಗಳಿಗೆ 2 ಲಕ್ಷ ರೂ. ವೆಚ್ಚವಾಗಿದೆ.
5. ಪರವಾನಗಿ ಮತ್ತು ನೋಂದಣಿ: ಯಾವುದೇ ಉದ್ಯಮ ಆರಂಭಿಸಲು ಲೈಸೆನ್ಸ್ ಕಡ್ಡಾಯ. FSSAI ಸೇರಿದಂತೆ ವಿವಿಧ ಪರವಾನಗಿಗಳು ಮತ್ತು ನೋಂದಣಿಗಾಗಿ 60,000 ರೂ. ತಗುಲಿದೆ.
6. ಸಿಬ್ಬಂದಿ ಸಂಬಳ: ಮೊದಲ ತಿಂಗಳ ಸಿಬ್ಬಂದಿ ವೇತನಕ್ಕಾಗಿ 80,000 ರೂ. ಮೀಸಲಿಡಲಾಗಿತ್ತು.
7. ಬ್ರ್ಯಾಂಡಿಂಗ್ ಮತ್ತು ಲಾಂಚ್: ಅಂಗಡಿಯ ಪ್ರಚಾರ ಮತ್ತು ಉದ್ಘಾಟನಾ ಸಮಾರಂಭಕ್ಕಾಗಿ 1 ಲಕ್ಷ ರೂ. ಖರ್ಚು ಮಾಡಲಾಗಿದೆ.
8. ವರ್ಕಿಂಗ್ ಕ್ಯಾಪಿಟಲ್: ತುರ್ತು ಸಂದರ್ಭಗಳಿಗೆ ಅಥವಾ ದೈನಂದಿನ ನಿರ್ವಹಣೆಗೆ ಕೈಯಲ್ಲಿರಬೇಕಾದ ಹಣವಾಗಿ (Working Capital) 2 ಲಕ್ಷ ರೂ. ಇಟ್ಟುಕೊಂಡಿದ್ದೆ ಎಂದು ಪ್ರದೀಪ್ ತಿಳಿಸಿದ್ದಾರೆ.
ಈ ಎಲ್ಲಾ ಲೆಕ್ಕಾಚಾರವನ್ನು ನೀಡಿದ ಅವರು, ಹೊಸ ಉದ್ಯಮಿಗಳಿಗೆ ಒಂದು ಕಿವಿಮಾತನ್ನೂ ಹೇಳಿದ್ದಾರೆ. "ನೀವು ಅಂಗಡಿಯನ್ನು ಅತಿಯಾಗಿ ಅಲಂಕರಿಸಬೇಕಿಲ್ಲ, ನಿಮಗೆ ಬೇಕಿರುವುದು ಫ್ಯಾನ್ಸಿ ಇಂಟೀರಿಯರ್ಸ್ ಅಲ್ಲ, ಬದಲಾಗಿ ಮತ್ತೆ ಮತ್ತೆ ಬರುವ ಗ್ರಾಹಕರು (Repeat Customers)," ಎಂದು ಅವರು ಬರೆದುಕೊಂಡಿದ್ದಾರೆ.
https://x.com/Pradeepkannanj/status/2021095755168219154?s=20ಐಟಿ ಮ್ಯಾನೇಜರ್ ಹುದ್ದೆಯಿಂದ ಐಸ್‌ಕ್ರೀಮ್ ವ್ಯಾಪಾರಿಯವರೆಗೆ
2019ರಲ್ಲಿ ಪ್ರದೀಪ್ ಕಣ್ಣನ್ ಅವರು ಒರಾಕಲ್ ಇಂಡಿಯಾದಲ್ಲಿ 'ಆಪರೇಷನ್ಸ್ ಹೆಡ್' ಆಗಿ ಕೆಲಸ ಮಾಡುತ್ತಿದ್ದರು. ಕೈತುಂಬಾ ಸಂಬಳ, ಸುಂದರವಾದ ಕೌಟುಂಬಿಕ ಜೀವನ ಎಲ್ಲವೂ ಇತ್ತು. ಸಮಾಜದ ದೃಷ್ಟಿಯಲ್ಲಿ ಅವರು 'ಸೆಟಲ್' ಆಗಿದ್ದರು. ಆದರೆ, ಅವರ ಮನಸ್ಸಿನ ಮೂಲೆಯಲ್ಲಿ ಏನೋ ಸಾಧಿಸಬೇಕು ಎಂಬ ತುಡಿತವಿತ್ತು. ಹೀಗಾಗಿ, ಎಲ್ಲರೂ ಹುಚ್ಚು ಎಂದು ಕರೆಯುವ ನಿರ್ಧಾರವನ್ನು ತೆಗೆದುಕೊಂಡರು. ಬೆಂಗಳೂರು ಬಿಟ್ಟು ತಮಿಳುನಾಡಿನ ಕರೂರು ಎಂಬ ಸಣ್ಣ ಪಟ್ಟಣಕ್ಕೆ ಹೋಗಿ ಫಲೂದಾ ಮಾರಲು ನಿರ್ಧರಿಸಿದರು.
"ನಾನು ಕೆಲಸ ಬಿಟ್ಟಾಗ ಜನ ನನ್ನನ್ನು ನೋಡಿ ನಕ್ಕರು. ಇವನಿಗೇನೂ ಹುಚ್ಚಾ? ಇಂಥ ಒಳ್ಳೆ ಕೆಲಸ ಬಿಟ್ಟು ಐಸ್‌ಕ್ರೀಮ್ ಮಾಡ್ತಾನಾ ಎಂದು ಹೀಯಾಳಿಸಿದರು," ಎಂದು ಪ್ರದೀಪ್ ಹಿಂದೊಮ್ಮೆ ತಮ್ಮ ನೋವನ್ನು ಹಂಚಿಕೊಂಡಿದ್ದರು. ಆದರೆ, ಅಂದು ನಕ್ಕವರೇ ಇಂದು ಹುಬ್ಬೇರಿಸುವಂತೆ ಬೆಳೆದಿದ್ದಾರೆ. ಕೇವಲ ಆರು ವರ್ಷಗಳಲ್ಲಿ, ಒಂದು ಸಣ್ಣ ಅಂಗಡಿಯಿಂದ ಆರಂಭವಾದ 'ದಿ ಫಲೂಡಾ ಶಾಪ್' ಇಂದು ಭಾರತ ಮತ್ತು ದುಬೈ ಸೇರಿದಂತೆ ಒಟ್ಟು 18 ಕಡೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.
ಯಾರೋ ಏನೋ ಅನ್ನುತ್ತಾರೆ ಎಂದು ಹೆದರದೆ, ತಮ್ಮ ಕನಸಿನ ಬೆನ್ನೇರಿದ ಪ್ರದೀಪ್ ಕಣ್ಣನ್ ಅವರ ಈ ಪಯಣ ಮತ್ತು ಅವರು ಹಂಚಿಕೊಂಡಿರುವ ಬಿಸಿನೆಸ್ ಲೆಕ್ಕಾಚಾರ, ಸ್ವಂತ ಉದ್ಯಮ ಆರಂಭಿಸುವ ಕನಸು ಕಾಣುತ್ತಿರುವ ಸಾವಿರಾರು ಯುವಕರಿಗೆ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications