ಮಾಜಿ ಯೋಧನ ಕೊಲೆ ಕೇಸ್: ಕ್ಲೂ ಬಿಡದ ಕೊಲೆ ಪಾತಕ ಪೊಲೀಸರ ಬಲೆಗೆ ಬಿದ್ದ ರೋಚಕ ಸ್ಟೋರಿ.
ಬೆಂಗಳೂರು, ಏ. 15: 'ಆತ ಮಾಜಿ ಯೋಧ, ಸ್ವಂತ ಮನೆಯಿದೆ. ಹಣ ಇದೆ. ಅವನನ್ನು ಕೊಲೆ ಮಾಡಿದ್ರೆ ತುಂಬಾ ಹಣ ಸಿಗುತ್ತೆ. ಆದ್ರೆ ನಾವು ಕೊಲೆಯಾದ ಜಾಗದಲ್ಲಿ ಶ್ವಾನ ದಳ ಪತ್ತೆ ಮಾಡದಂತೆ ಕಾರದ ಪುಡಿ ಎರಚಬೇಕು. ಮೊಬೈಲ್ ಬಳಸಿದ್ರೆ ಲೊಕೇಷನ್ ಜಾಡು ಹಿಡಿದು ಪತ್ತೆ ಮಾಡಿ ಬಿಡ್ತಾರೆ. ಕೊಲೆ ಮಾಡುವಾಗ ಯಾರೂ ಮೊಬೈಲ್ ಇಟ್ಟುಕೊಳ್ಳಬೇಡಿ. ಪೊಲೀಸರಿಗೆ ಸಣ್ಣ ಸುಳಿವು ಸಿಗಬಾರದು. ಫಿಂಗರ್ ಪ್ರಿಂಟ್ ಸಿಗದಂತೆ ಕೈಗೆ ಗ್ಲೌಸ್ ಹಾಕಿಬೇಕು!
ಹೀಗೆ ಭಯಾನಕ ಪ್ಲಾನ್ ರೂಪಿಸಿ ಮಾಜಿ ಯೋಧನನ್ನು ಕಿರಾತಕರು ಕೊಂದೇ ಬಿಟ್ಟರು. ಆತನ ಹೆಸರು ಸುರೇಶ್ ಅಲಿಯಾಸ್ ಜುಡೋ. ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದ. ಆ ಬಳಿಕ ಹಲಸೂರಿನ ಗೌತಮ್ ಕಾಲೋನಿಯಲ್ಲಿ ಸ್ವಂತ ಮನೆ ಮಾಡಿಕೊಂಡು ವಾಸವಾಗಿದ್ದ. ಏ. 12 ರಂದು ರಾತ್ರಿ ಒಬ್ಬಂಟಿಯಾಗಿ ಜೀವನ ಮಾಡುಸತ್ತಿದ್ದ ಜುಡೋ ತೆಡ್ಡಸ್ ಮನೆಗೆ ಐವರು ದುಷ್ಕರ್ಮಿಗಳು ಎಂಟ್ರಿ ಕೊಟ್ಟಿದ್ದರು. ಮನೆಯಲ್ಲಿದ್ದ ಜುಡೋ ನ ಕೊಲೆ ಮಾಡಿದ್ದಾರೆ. ಬಳಿಕ ಮನೆಯಲ್ಲಿ ಸಿಕ್ಕ ಆಪಲ್ ಐ ಪಾಡ್ ಸೇರಿದಂತೆ ಹಲವು ವಸ್ತು ದೋಚಿ ಎಸ್ಕೇಪ್ ಆಗಿದ್ದರು. ಮರು ದಿನ ಬೆಳಗ್ಗೆ ಜುಡೋ ಸ್ನೇಹಿತ ಕರೆ ಮಾಡಿದಾಗ ಆತ ಸ್ವೀಕರಿಸಿರಲಿಲ್ಲ. ಮನೆ ಬಳಿ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದ.
ತಲೆ ಭಾಗದಲ್ಲಿ ಗಂಭೀರ ಗಾಯವಾಗಿ ರಕ್ತ ಸೋರಿ ಹೋಗಿತ್ತು. ಮೈ ಮೇಲೆ ಖಾರದ ಪುಡಿ ಎರಚಲಾಗಿತ್ತು. ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಕ್ಷರಶಃ ಸಣ್ಣ ಸುಳಿವು ಇಲ್ಲದಂತೆ ಕೊಲೆ ಮಾಡಲಾಗಿತ್ತು. ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಏನೂ ಸುಳಿವು ಸಿಗಲಿಲ್ಲ. ಶ್ವಾನ ತರಲು ಯತ್ನಿಸಿದಾಗ ಖಾರದ ಪುಡಿ ನೋಡಿ ಅವು ಮನೆಗೆ ಕಾಲಿಡಲಿಲ್ಲ. ಟವರ್ ಲೊಕೇಷನ್ ನೋಡಿದ್ರೆ ಮೊಬೈಲ್ ಬಳಿಸಿರಲಿಲ್ಲ. ಆರೋ ಆಗುಂತಕರು ಸುಳಿವು ಇಲ್ಲದೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಮನೆಯಲ್ಲಿ ಏನು ವಸ್ತು ಹೋಗಿದೆ ಎಂದು ಹೇಳುವರೂ ಇಲ್ಲ. ಹೀಗಾಗಿ ಹಲಸೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಮಂಜುನಾಥ್ ಮತ್ತು ತಂಡ ಪ್ರಕರಣದ ತನಿಖೆಗೆ ಇಳಿದಿದ್ದರು.

ಖತರ್ ನಾಕ್ ಹಂತಕರು ಸೆರೆ: ಕೊಲೆಯಾದ ಎರಡೇ ದಿನದಲ್ಲಿ ಐವರು ಕೊಲೆ ಪಾತಕಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ಮುರಳಿ, ರಾಜೇಂದ್ರ, ಗಜೇಂದ್ರ, ದೇವೇಂದ್ರ ಹಾಗೂ ಮಾರತಹಳ್ಳಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಬಾಬು ಎಂಬಾತನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮಾರುತಿ ಸುಜುಕಿ ಕಂಪನಿ ಕಾರು, ಫೋರ್ಡ್ ಕಾರು, ಒಂದು ಬೀಗ, ಆಪಲ್ ಐಪಾಡ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಕದ್ದಿದ್ದ ಆಪಲ್ ಪೋನ್ ಐಡಿ ಜಾಡು ಹಿಡಿದು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಾನು ಅವನಲ್ಲ ಅವಳು ರೂಪಿಸಿದ್ದ ಪ್ಲಾನ್: ಬಂಧಿತ ಆರೋಪಿಗಳ ಪೈಕಿ ಕೊಲೆ ಕೇಸಿನ ಪ್ರಮುಖ ಆರೋಪಿ ಬಾಬು. ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಅಗಿದ್ದ. ಹದಿನೈದು ದಿನಗಳ ಹಿಂದೆ ತನ್ನ ತಾಯಿಯನ್ನು ಜುಡೋ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಬು ಪರಿಚಯವಾಗಿದ್ದ. ಇಬ್ಬರು ಪರಿಚಯವಾಗಿದ್ದರು. ಒಂಟಿಯಾಗಿದ್ದ ಜುಡೋಗೆ ಹೆಣ್ಣಿನ ಮೇಲೆ ಆಸೆ ಬಿದ್ದಿತ್ತು. ರಾತ್ರಿ ವೇಳೆ ಹೆಣ್ಣಾಗಿ ಬದಲಾಗುತ್ತಿದ್ದ ಬಾಬು ಸಹವಾಸಕ್ಕೆ ಜುಡೋ ಆತೊರೆಯುತ್ತಿದ್ದ. ಹೀಗಾಗಿ ಒಮ್ಮೆ ಕರೆ ಮಾಡಿ ಬಾಬುನನ್ನು ಸುರೇಶ್ ಮನೆಗೆ ಕರೆಸಿಕೊಂಡಿದ್ದ.

ಮನೆ ನೋಡಿದ್ದ ಬಾಬು, ಈತ ಮಾಜಿ ಮಿಲ್ಟ್ರಿಮ್ಯಾನ್, ಮನೆ ಸ್ವಂತ ಅಂದ್ರೆ, ಹಣ ಸಂಪತ್ತು ಹೆಚ್ಚಾಗಿ ಇಟ್ಟಿರುತ್ತಾನೆ. ಒಮ್ಮೆ ಮುಗಿಸಿದ್ರೆ ಎಲ್ಲವೂ ನಮಗೆ ಸಿಗುತ್ತೆ ಅಂತ ಕೊಲೆಗೆ ಪ್ಲಾನ್ ರೂಪಿಸಿದ್ದಾನೆ. ಅದರಂತೆ ತನಗೆ ಪರಿಚಿತ ಆಂಧ್ರಪ್ರದೇಶದ ನಾಲ್ವರ ಜತೆ ಸೇರಿ ಸಂಚು ರೂಪಿಸಿದ್ದಾರೆ. ಪೊಲೀಸರಿಗೆ ಸಿಗದಂತೆ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆ. ಅದರಂತೆ. ಏ. 12 ರಂದು ರಾತ್ರಿ ಸುಳಿವು ಸಿಗದಂತೆ ಕೊಲೆ ಮಾಡಿ ಮನೆಯಲ್ಲಿ ಸಿಕ್ಕ ವಸ್ತು ದೋಚಿ ಎಸ್ಕೇಪ್ ಅಗಿದ್ದರು.

ಪೊಲೀಸರಿಗೆ ಸುಳಿವು ಸಿಗಬಾರದು ಎಂದು ಮೊಬೈಲ್‌ಗಳನ್ನು ಇಂದಿರಾನಗರದ ಮೋರಿಯಲ್ಲಿ ಬಿಸಾಡಿ ಪರಾರಿಯಾಗಿದ್ದರು. ಆದ್ರೆ, ಕದ್ದ ಆಪಲ್ ಐಪಾಡ್‌ನ ಜಾಡು ಹಿಡಿದು ಆಂಧ್ರ ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ ಐವರನ್ನು ಬಂಧಿಸಿದ್ದಾರೆ. ನಾನು ಅವನಲ್ಲ, ಅವಳಂತೆ ವರ್ತಿಸುತ್ತಿದ್ದ ಬಾಬು ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಕ್ಲೂ ಇಲ್ಲದ ಕೊಲೆ ಕೇಸನ್ನು ಸಣ್ಣ ಎಳೆ ಹಿಡಿದು ಆರೋಪಿಗಳನ್ನು ಬಂಧಿಸುವಲ್ಲಿ ಹಲಸೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯ ಶೈಲಿಯನ್ನು ಡಿಸಿಪಿ ಭೀಮಾ ಶಂಕರ್ ಗುಳೇದ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.












Click it and Unblock the Notifications