ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸಂಜೆ ಕಾಲೇಜು ಆರಂಭ

ಬೆಂಗಳೂರು, ಜೂನ್ 14: ಕಲೆಯ ವಿವಿಧ ಪ್ರಕಾರಗಳಲ್ಲಿ ತರಬೇತಿ ನೀಡುವ ಮೂಲಕ ಯುವ ಕಲಾವಿದರನ್ನು ಕಲಾ ಪ್ರಪಂಚಕ್ಕೆ ಪರಿಚಯಿಸುತ್ತಿರುವ ಕರ್ನಾಟಕ ಚಿತ್ರ ಕಲಾ ಪರಿಷತ್ತಿನಲ್ಲಿ ದೇಶದ ಮೊದಲ ದೃಶ್ಯಕಲೆ ಸಂಜೆ ಕಾಲೇಜು ಆರಂಭಗೊಂಡಿದೆ.

ದೃಶ್ಯಕಲೆ ಕುರಿತಂತೆ ಸಾಮಾನ್ಯ ಕಾಲೇಜುಗಳು ಬೆಂಗಳೂರು ಸೇರಿದಂತೆ ಸೇಶದ ನಾನಾ ಭಾಗಗಳಲ್ಲಿದೆ, ಆದರೆ ಸಂಜೆ ಕಾಲೇಜು ಮೊದಲ ಬಾರಿಗೆ ಸ್ಥಾಪನೆಯಾಗಿದ್ದು, ಜುಲೈ ತಿಂಗಳಿಂದ ಪ್ರವೇಶ ಆರಂಭವಾಗಲಿದೆ.

ಪರಿಷತ್ ಆವರಣದಲ್ಲಿರುವ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ರಾಜ್ಯ, ದೇಶ, ವಿದೇಶಗಳ ಅಭ್ಯರ್ಥಿಗಳೂ ನಿಯಮಿತವಾಗಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ , ಅನಿಮೇಶನ್ ಸೇರಿ ವಿವಿಧ ವಿಷಯದಲ್ಲಿ ಕ್ರಮಬದ್ಧವಾಗಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ವಿಭಾಗದಲ್ಲಿ ಓದುತ್ತಿದ್ದಾರೆ.

Evening college to start in Chitrakala parishat

ಆದರೆ, ಆರ್ಥಿಕ ಸಮಸ್ತೆ ಹಾಗೂ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಕಲಾ ಕಾಲೇಜಿನಲ್ಲಿ ಅಭ್ಯಸಿಸಲು ಸಾದ್ಯವಾಗುತ್ತಿರಲಿಲ್ಲ. ಇದರಿಂದಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಸಂಜೆ ಕಾಲೇಜು ಆರಂಭಿಸಲು ಚಿತ್ರಕಲಾ ಪರಿಷತ್ತು ಇದ್ಧತೆ ನಡೆಸುತ್ತಿದೆ.

ಸಂಜೆ ಕಾಲೇಜಿಗೆ ಬೆಂಗಳೂರು ವಿವಿಯಿಂದ ಮಾನ್ಯತೆ ದೊರೆತಿದ್ದು, ಯುಜಿಸಿ ನಿಯಮಾವಳಿ ಪ್ರಕಾರ ಪಾಠ-ಪ್ರವಚನಗಳು ಸೆಮಿಸ್ಟರ್ ಆಧಾರದಲ್ಲಿ ನಡೆಯಲಿದೆ.

ಇದು ಮೊದಲ ವರ್ಷವಾಗಿದ್ದರಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ತಲಾ 30 ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಸುಸಜ್ಜಿತ ಗ್ರಂಥಾಲಯ, ಕಲಾ ವಸ್ತು ಸಂಗ್ರಹಾಲಯವೂ ಇದೆ. ನುರಿತ ಶಿಕ್ಷಕರು, ನಿರ್ವಹಣೆ ಮಾಡಲು ಕ್ಯುರೇಟರ್, ಉತ್ತಮ ಕ್ಯಾಂಟೀನ್ ಇತ್ಯಾದಿ ಎಲ್ಲಾ ಬಗೆಯ ಸೌಲಭ್ಯಗಳು ಇಲ್ಲಿವೆ. ಸಂಜೆ 5.30ರಿಂದ ರಾತ್ರಿ 9.30ರವರೆಗೆ ತರಗತಿಗಳು ನಡೆಯಲಿವೆ.

ಡೇ ಕಾಲೇಜು ಸ್ಥಳಾಂತರ: ಕುಮಾರಕೃಪಾ ರಸ್ತೆಯ ಸಿಕೆಪಿ ಆವರಣದಲ್ಲಿ ನಡೆಯುತ್ತಿರುವ ಡೇ ಕಾಲೇಜು ರಾಜರಾಜೇಶ್ವರಿನಗರದ ಗಾಣಕಲ್‌ಗೆ ಸ್ಥಳಾಂತರಗೊಳ್ಳಲಿದೆ. ಅಲ್ಲಿ ಸರ್ಕಾರ 14 ಎಕರೆ ಭೂಮಿ ನೀಡಿದ್ದು, 11 ಕೋಟಿ ವೆಚ್ಚದಲ್ಲಿ ಕಾಲೇಜನ್ನು ನಿರ್ಮಿಸಲಾಗುತ್ತಿದೆ.2019ರ ಶೈಕ್ಷಣಿಕ ವರ್ಷದಲ್ಲಿ ಸ್ಥಳಾಂತರಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+