ಬೆಂಗಳೂರು ಏರ್‌ಪೋರ್ಟ್‌ನಲ್ಲಿ 50 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆ: ಇಬ್ಬರ ಬಂಧನ

ಬೆಂಗಳೂರು ಏಪ್ರಿಲ್ 22: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 50 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯೊಂದಿಗೆ ಇಬ್ಬರನ್ನು ಬಂಧಿಸಲಾಗಿದೆ.

ಬೆಂಗಳೂರಿನಿಂದ ಬ್ಯಾಂಕಾಕ್‌ಗೆ 50 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಇವರಿಬ್ಬರು ದೆಹಲಿಯ ಮೂಲದವರು ಎಂದು ತಿಳಿದು ಬಂದಿದೆ.

Euro notes worth 50 lakhs found at Bengaluru Airport: Two arrested

ಗುರುವಾರ ಬೆಳಗ್ಗೆ 30ರ ಹರೆಯದ ಇಬ್ಬರು ಶಂಕಿತರು ಥಾಯ್ಲೆಂಡ್‌ನ ಬ್ಯಾಂಕಾಕ್‌ಗೆ ತೆರಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಕರೆನ್ಸಿ ದಂಧೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸುಳಿವಿನ ನಂತರ ಡಿಆರ್‌ಐನ ಬೆಂಗಳೂರು ಘಟಕದ ತಂಡ ವಿಮಾನ ನಿಲ್ದಾಣಕ್ಕೆ ತಲುಪಿತು. ಬೆಂಗಳೂರು-ಬ್ಯಾಂಕಾಕ್ ವಿಮಾನ ಹತ್ತಲು ನಿಗದಿಯಾಗಿದ್ದ ಪ್ರಯಾಣಿಕರನ್ನು ತಡೆಯಿತು. ಅವರನ್ನು ಪ್ರಶ್ನಿಸಿದಾಗ ಅನುಮಾನಾಸ್ಪದ ಉತ್ತರಗಳನ್ನು ನೀಡಿದ್ದಾರೆ. ಇದರಿಂದಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅವರು ಥೈಲ್ಯಾಂಡ್ಗೆ ತೆರಳುತ್ತಿರುವುದು ತಿಳಿದು ಬಂದಿದೆ.

ತನಿಖಾಧಿಕಾರಿಗಳು ಇಬ್ಬರು ವ್ಯಕ್ತಿಗಳ ಬಳಿ ಇರುವ ಸೂಟ್‌ಕೇಸ್ ಅನ್ನು ವಿಮಾನದಿಂದ ಹಿಂಪಡೆದಿದ್ದಾರೆ. ಜೊತೆಗೆ ಅದನ್ನು ಪರಿಶೀಲನೆ ಕೂಡ ಮಾಡಿದ್ದಾರೆ. ಸಂಪೂರ್ಣ ಪರಿಶೀಲನೆಯ ನಂತರ ಬಟ್ಟೆ ಮತ್ತು ಇತರ ವಸ್ತುಗಳ ನಡುವೆ 100 ವಿದೇಶಿ ನೋಟುಗಳಿರುವುದು ಪತ್ತೆಯಾಗಿದೆ.

Euro notes worth 50 lakhs found at Bengaluru Airport: Two arrested

ಬಳಿಕ ಇವರನ್ನು ವಿಚಾರಣೆ ಒಳಪಡಿಸಲಾಗಿದೆ. ಇವರಿಬ್ಬರ ವಿಚಾರಣೆ ನಂತರ ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣಕ್ಕೆ ಯೂರೋಗಳನ್ನು ಕಳ್ಳಸಾಗಣೆ ಮಾಡಿರುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ KIA ಯಲ್ಲಿ ನಡೆದ ಅತಿ ದೊಡ್ಡ ಅಕ್ರಮ ವಿದೇಶಿ ಕರೆನ್ಸಿ ಭರಾಟೆ ಇದಾಗಿದೆ. ಇಬ್ಬರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೆಐಎ ಮೂಲಕ ಯಾವುದೇ ಹವಾಲಾ ದಂಧೆ ನಡೆಯುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+