ಬಿಬಿಎಂಪಿ: ಈ ವಲಯದಲ್ಲಿ ಅ. 20ರ ತನಕ 'ಉದ್ದಿಮೆ ಪರವಾನಿಗೆ ಮೇಳ'

ಬೆಂಗಳೂರು, ಅಕ್ಟೋಬರ್ 06: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಇಂದಿನಿಂದ ಅಕ್ಟೋಬರ್ 20ರವರೆಗೆ ಆಯಾ ವಾರ್ಡ್‌ಗಳಲ್ಲಿ ಬೆಳಗ್ಗೆ 10.30 ರಿಂದ ಸಂಜೆ 4.30 ರವರೆಗೆ 'ಉದ್ದಿಮೆ ಪರವಾನಿಗೆಯ ಮೇಳ' ಹಮ್ಮಿಕೊಂಡಿದ್ದೇವೆ ಎಂದು ಬಿಬಿಎಂಪಿ ತಿಳಿಸಿದೆ.

ನಗರದ ಎಲ್ಲಾ ಉದ್ದಿಮೆದಾರರು ಉದ್ದಿಮೆ ಪರವಾನಿಗೆ ಅರ್ಜಿಯನ್ನು ತಮ್ಮ ಕಟ್ಟಡದ ವಿದ್ಯುತ್ ಬಿಲ್ ಮತ್ತು ಬಾಡಿಗೆ ಕರಾರು ಪತ್ರದ ನಕಲುಗಳನ್ನು ನೀಡಿ ಉದ್ದಿಮೆ ಪರವಾನಿಗೆಯನ್ನು ಪಡೆಯಲು ಸೂಚಿಸಲಾಗಿದೆ. ಇನ್ನೂ ಅರ್ಜಿ ಜೊತೆಗೆ ಸುತ್ತಮುತ್ತಲಿನ (ಅಕ್ಕ-ಪಕ್ಕ, ಹಿಂದೆ-ಮುಂದಿನ) ಮನೆಯವರ ನಿರಪೇಕ್ಷಣಾ ಸಹಿಯೊಂದಿಗೆ ಅರ್ಜಿ ಸಲ್ಲಿಸುವಂತೆ ಹಾಗೂ ಸದರಿ ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಉದ್ದಿಮೆದಾರರಿಗೆ ವಲಯ ಜಂಟಿ ಆಯುಕ್ತರಾದ ಡಾ. ಪಿ. ದಾಕ್ಷಾಯಿಣಿ ರವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

bbmp-mahadevpur-zone

ವಿದ್ಯುತ್ ಚಿತಾಗಾರ ತಾತ್ಕಾಲಿಕ ಸ್ಥಗಿತ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯ ವ್ಯಾಪ್ತಿಯ ಮೈಸೂರು ರಸ್ತೆ ವಿದ್ಯುತ್ ಚಿತಾಗಾರದಲ್ಲಿ ಟ್ರಾನ್ಸ್ ಫಾರ್ಮರ್ ನ ತುರ್ತು ಕೆಲಸಗಳನ್ನು ಕೈಗೊಳ್ಳಬೇಕಿರುವ ಕಾರಣ ಸದರಿ ಚಿತಾಗಾರವನ್ನು ಅಕ್ಟೋಬರ್ 21ರವರೆಗೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗುವುದು ಎಂದು ಸಾರ್ವಜನಿಕರಿಗೆ ಬಿಬಿಎಂಪಿ ತಿಳಿಸಿದೆ.

ಮೈಸೂರು ರಸ್ತೆ ವಿದ್ಯುತ್ ಚಿತಾಗಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಕಾರಣ ಮೃತ ದೇಹದ ದಹನ ಕ್ರಿಯೆಗಾಗಿ ಸಾರ್ವಜನಿಕರು ಸಮೀಪದಲ್ಲಿರುವ ವಿಲ್ಸನ್ ಗಾರ್ಡನ್, ಹರಿಚ್ಚಂದ್ರ ಘಾಟ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬೇಕು ಎಂದು ಪಾಲಿಕೆಯ ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ಪಶ್ಚಿಮ ವಲಯ) ರವರು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+