ಟೊಮೆಟೋ ಬೆಳೆ ಸಾಲ ತೀರಿಸಲು 50ಕ್ಕೂ ಅಧಿಕ ಲ್ಯಾಪ್‌ಟಾಪ್ ಕದ್ದ ಉದ್ಯೋಗಿ-ಮುಂದೇನಾಯ್ತು ಗೊತ್ತಾ? ಇಲ್ಲಿದೆ ಮಾಹಿತಿ
ಬೆಂಗಳೂರು, ಸೆಪ್ಟೆಂಬರ್, 18: ಸಾಮಾನ್ಯವಾಗಿ ರೈತರು ಬೆಳೆಗಳ ಫಸಲು ಬಾರದಿದ್ದರೆ, ನಿಗಧಿತ ಬೆಲೆ ಇಲ್ಲದಿರುವ ಸಂದರ್ಭಗಳಲ್ಲಿ ಕಂಗಲಾಗಿ ಪರಿಹಾರಕ್ಕಾಗಿ ನಿಯತ್ತಿನ ಮಾರ್ಗ ಸರ್ಕಾರದ ಮೊರೆಹೋದ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಉದ್ಯೋಗಿ ಟೊಮೆಟೊ ಬೆಳೆಯಲ್ಲಿ ಕೈಸುಟ್ಟುಕೊಂಡ ಹಿನ್ನೆಲೆ ಇದನ್ನು ಸರಿದೂಗಿಸಲು ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ 50ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳನ್ನು ಕದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೈಟ್ ಫೀಲ್ಡ್ ಪೊಲೀಸರು ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಮುರುಗೇಶ್ ಎಂಬುವನನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದಾರೆ. ಕೃಷಿ ಯೋಜನೆಗಾಗಿ ಸಾಲ ಪಡೆದ ಬಳಿಕ ಹೊಸೂರಿನಲ್ಲಿ 6 ಹೆಕ್ಟೇರ್ ಭೂಮಿಯಲ್ಲಿ ಟೊಮೆಟೊ ಬೆಳೆದಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದಾನೆ.

ಬೆಳೆ ವೈಫಲ್ಯವು ಗಮನಾರ್ಹ ಆರ್ಥಿಕ ನಷ್ಟಕ್ಕೆ ಕಾರಣವಾಯಿತು. ಸಾಲ ತೀರಿಸುವ ಪ್ರಯತ್ನದಲ್ಲಿ, ಮುರುಗೇಶ್ ಈ ವರ್ಷದ ಫೆಬ್ರವರಿಯಿಂದ ತಾನು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಲು ಪ್ರಾರಂಭಿಸಿದನು ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ ಎನ್ನಲಾಗಿದೆ.
ಲ್ಯಾಪ್‌ಟಾಪ್ ಸೇವೆ ಮತ್ತು ರಿಪೇರಿ ಒದಗಿಸುವ ನೆಪ ಇಟ್ಟುಕೊಂಡು ಅವನು ಹಲವಾರು ಸಾಧನಗಳನ್ನು ಕದಿಯುವಲ್ಲಿ ಯಶಸ್ವಿ ಆದನು. ಆಗಸ್ಟ್ ಕೊನೆಗೆ ಅವರು ಕಂಪನಿಯನ್ನು ತೊರೆದರು ಮತ್ತು ಲೆಕ್ಕಪರಿಶೋಧನೆಯ ಸಮಯದಲ್ಲಿ, ಸಂಸ್ಥೆಯು ಕಾಣೆಯಾದ ಲ್ಯಾಪ್‌ಟಾಪ್‌ಗಳ ಬಗ್ಗೆ ತಿಳಿದುಕೊಂಡಿತು. ಕಂಪನಿಯು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ಮುರುಗೇಶ್ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿರುವುದು ಬಟಾ ಬಯಲಾಗಿದೆ.
45 ಲ್ಯಾಪ್ ಟಾಪ್‌ಗಳ ಮಾರಾಟ: ಇನ್ನು ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ತಮಿಳುನಾಡಿನ ಹೊಸೂರಿನಲ್ಲಿರುವ ಅವನ ಊರಿನಲ್ಲಿ ಪತ್ತೆಹಚ್ಚಿದರು. ಬಳಿಕ ಕದ್ದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡರು. ಮುರುಗೇಶ್ ಒಟ್ಟು 57 ಲ್ಯಾಪ್‌ಟಾಪ್‌ಗಳನ್ನು ಕದ್ದು 45 ಲ್ಯಾಪ್ ಟಾಪ್‌ಗಳನ್ನು ಹೊಸೂರಿನ ರಿಪೇರಿ ಸ್ಟೋರ್‌ಗೆ ಮಾರಾಟ ಮಾಡಿದ್ದನು ಎಂದು ತಿಳಿದುಬಂದಿದೆ.
50 ಲ್ಯಾಪ್‌ಟಾಪ್‌ಗಳ ವಶ: ನಾವು 22,00,000 ರೂಪಾಯಿ ಮೌಲ್ಯದ 50 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಆಗಸ್ಟ್‌ನಲ್ಲಿ ಅವರು ಕಂಪನಿಯನ್ನು ತೊರೆದರು. ಬಳಿಕ ಕಂಪನಿಯು ತನ್ನ ಅಂಗಡಿಗಳನ್ನು ಪರಿಶೀಲಿಸಿದಾಗ, ಲ್ಯಾಪ್‌ಟಾಪ್‌ಗಳು ಕಾಣೆಯಾದ ಬಗ್ಗೆ ತಿಳಿದುಬಂದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಸೆಪ್ಟೆಂಬರ್ 9ರಂದು ಮುರುಗೇಶ್ ನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications