ಮಾರ್ಚ್ 26 ರಂಗೋಲಿ ಮೆಟ್ರೋದಿಂದ ವನ್ಯಜೀವಿ ದಿನಾಚರಣೆ ಕಾರ್ಯಕ್ರಮ
ಮಾರ್ಚ್ 26ರ ಭಾನುವಾರ ಸಂಜೆ 6.30ಕ್ಕೆ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ರಂಗೋಲಿ ಮೆಟ್ರೋ ಆರ್ಟ್ ಸೆಂಟರ್ ನ ರಂಗಸ್ಥಳದಲ್ಲಿ ವನ್ಯಜೀವಿಗಳ ಕಾನೂನುಬಾಹಿರ ಮಾರಾಟದ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ
ಬೆಂಗಳೂರು, ಮಾರ್ಚ್ 26: ಆನೆಯೂ ಸೇರಿದಂತೆ ಇತರ ಪ್ರಾಣಿಗಳ ಅಂಗಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುವುದರ ವಿರುದ್ಧ ಅರಿವು ಮೂಡಿಸುವ ಉದ್ದೇಶದಿಂದ ಮಾರ್ಚ್ 26ರ ಭಾನುವಾರ ಸಂಜೆ 6.30ಕ್ಕೆ ಫ್ರೆಂಡ್ಸ್ ಆಫ್ ಎಲಿಫೆಂಟ್ಸ್ ಸಂಸ್ಥೆ ಸಹಯೋಗದಲ್ಲಿ ನಮ್ಮ ಮೆಟ್ರೋದಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ರಂಗೋಲಿ ಮೆಟ್ರೋ ಆರ್ಟ್ ಸೆಂಟರ್ ನ ರಂಗಸ್ಥಳದಲ್ಲಿ ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ದ ಐವರಿ ಪೋಚಿಂಗ್ ವಾರ್ಸ್ ಎಂಬ ಚಿತ್ರದ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ಆನೆಯನ್ನು ಕೊಂದು ಅಥವಾ ಜೀವಂತವಾಗಿಯೇ ವ್ಯಾಪಾರ ಮಾಡುವ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ.[ಜಂಗಲ್ ಡೈರಿ: ಹಬ್ಬಗಳಲ್ಲಿ ಆನೆಗಳೆಂದರೆ ಸಂಭ್ರಮವಲ್ಲ, ಸಂಕಟ]

ಈ ವಿಚಾರದ ಬಗ್ಗೆ ಗೌರವ ವನ್ಯಜೀವಿ ಪಾಲಕ ಶರತ್ ಬಾಬು ಮಾತನಾಡಲಿದ್ದಾರೆ. ಆನೆ ಮತ್ತು ಇತರ ವನ್ಯಜೀವಿಗಳ ವ್ಯಾಪಾರ-ಇದಕ್ಕೆ ಹೊಣೆ ಯಾರು? ಎಂಬ ಸಂವಾದ ಕಾರ್ಯಕ್ರಮ ಕೂಡ ಇದ್ದು, ಶರತ್ ಬಾಬು, ಸುಪ್ರೀಂ ಕೋರ್ಟ್ ವಕೀಲ ಕೆವಿ ಧನಂಜಯ್, ಪತ್ರಕರ್ತ ಅಮಿತ್ ಉಪಾಧ್ಯಾಯ್, ಎಸಿಎಫ್ ಕೆಟಿ ಬೋರಯ್ಯ, ಇನ್ ಸ್ಪೆಕ್ಟರ್ ಎಸ್ ಡಿ ಶಶಿಧರ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications