Electronic City: ಎಲೆಕ್ಟ್ರಾನಿಕ್ ಸಿಟಿ ಬಳಿ 10 ಕಿಲೋ ಮೀಟರ್ ಟ್ರಾಫಿಕ್ ಜಾಮ್.... ವಿಡಿಯೋ ನೋಡಿ!

ಟ್ರಾಫಿಕ್.. ಟ್ರಾಫಿಕ್.. ಟ್ರಾಫಿಕ್.. ಅಷ್ಟಕ್ಕೂ ಇದು ಬೆಂಗಳೂರಿನ ಜನರ ಪ್ರತಿ ದಿನದ ಸಂಕಷ್ಟ ಅದರಲ್ಲೂ ಬೆಂಗಳೂರಿನ ಕೆಲವು ಏರಿಯಾಗಳು ಟ್ರಾಫಿಕ್ ಕಾರಣಕ್ಕೆ ಸಿಕ್ಕಾಪಟ್ಟೆ ಫೇಮಸ್! ಎಲೆಕ್ಟ್ರಾನಿಕ್ ಸಿಟಿ ಅಂತಾ ನೆನಪು ಮಾಡಿಕೊಂಡರೆ ಸಾಕು, ಕಣ್ಣ ಮುಂದೆ ಕಿಲೋ ಮೀಟರ್ ಉದ್ದ ಸಾಲಾಗಿ ನಿಂತ ವಾಹನಗಳು & ನರಕದಂತೆ ಕಾಣುತ್ತಿರುವ ಟ್ರಾಫಿಕ್ ಜಾಮ್ ರಪ್ ಅಂತಾ ಒಂದು ಬಾರಿ ಪಾಸ್ ಆಗಿ ಹೋಗುತ್ತದೆ.

ಹೀಗೆ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಜಿಗಣಿ ಸುತ್ತಮುತ್ತಲೂ ಕೆಲಸ ಮಾಡುವ ಜನ ಸಂಜೆ ಟ್ರಾಫಿಕ್ ಜಾಮ್ ಇಲ್ಲದೆ, ನೆಮ್ಮದಿಯಾಗಿ ಮನೆಗೆ ಹೋದ್ರೆ ಸಾಕಪ್ಪಾ ದೇವರೆ ಅಂತಾ ಪ್ರತಿದಿನ ಸಂಜೆ ಬೇಡಿಕೊಳ್ಳುತ್ತಾರೆ. ಹೀಗಿದ್ದಾಗಲೇ, ಭಾರಿ ಗಾತ್ರದ ವಾಹನವನ್ನು ನೇರವಾಗಿ ಹೆದ್ದಾರಿಗೆ ನುಗ್ಗಿಸಿ, ಟ್ರಾಫಿಕ್ ಜಾಮ್ ಇರುವ ಜಾಗದಲ್ಲಿ ಲಾರಿ ಚಾಲಕ ಆಟ ಆಡಿದರೆ ಹೇಗೆ ಇರುತ್ತೆ ಹೇಳಿ? ಇಂತಹದ್ದೇ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದ್ದು, ಎಲೆಕ್ಟ್ರಾನಿಕ್ ಸಿಟಿ ಬಳಿ 10 ಕಿಲೋ ಮೀಟರ್ ಟ್ರಾಫಿಕ್ ಜಾಮ್....

Electronic City Traffic This Is What Happened In NH 7 After A Heavy Vehicle Enters In Traffic Time

ರಾಷ್ಟ್ರೀಯ ಹೆದ್ದಾರಿ-7 ರಲ್ಲಿ ಗಲಾಟೆ

ಎಲೆಕ್ಟ್ರಾನಿಕ್ ಸಿಟಿಯ ಬಳಿ ಕೋನಪ್ಪನ ಅಗ್ರಹಾರ ಎಂಬ ಪ್ರದೇಶ ಇದ್ದು, ಇಲ್ಲಿಂದ ನೇರ ನೈಸ್ ರೋಡ್ ಸಂಪರ್ಕ ಮಾಡಬಹುದು. ಆದರೆ ಹೀಗೆ ನೈಸ್ ರೋಡ್ & ಎಲೆಕ್ಟ್ರಾನಿಕ್ ಸಿಟಿ ನಡುವೆ ಸಂಪರ್ಕ ಸಾಧಿಸಲು ಸಹಾಯ ಮಾಡುವ ಪ್ರದೇಶದಲ್ಲೇ, ಭೀಕರ ಘಟನೆ ನಡೆದು ಹೋಗಿದೆ. ಅದು ಏನಂದ್ರೆ ಲಾರಿ ಚಾಲಕ & ಟ್ರಾಫಿಕ್ ಪೊಲೀಸರ ನಡುವೆ ಜಗಳ ಆರಂಭವಾಗಿ ಕೊನೆಗೆ ಅದು ಎಲ್ಲಿಗೆ ಮುಟ್ಟಿದೆ ಗೊತ್ತಾ?

ಬೆಂಗಳೂರು ನಗರದ ಒಳಗೆ ಬೃಹತ್ ಲಾರಿಗಳು ಅಥವಾ ಹೆವಿ ವೆಹಿಕಲ್ಸ್ ಓಡಾಟ ನಡೆಸುವಂತೆ ಇಲ್ಲ ಅಂತಾ ಕೆಲವು ಸಮಯ ನಿಗದಿ ಮಾಡಲಾಗಿದೆ. ರಾತ್ರಿ ಸಮಯದಲ್ಲಿ ಮಾತ್ರ ಹೀಗೆ, ಹೆವಿ ವೆಹಿಕಲ್ಸ್ ಓಡಾಟ ನಡೆಸಬಹುದು. ಆದರೆ ಸಂಜೆ & ಬೆಳಗ್ಗೆ ಬೃಹತ್ ಲಾರಿಗಳು ನಮ್ಮ ಬೆಂಗಳೂರು ನಗರದ ಒಳಗೆ ಓಡಾಟ ನಡೆಸಬಾರದು ಎಂಬ ರೂಲ್ಸ್ ಇದೆ. ಇಂತಹ ರೂಲ್ಸ್ & ಆದೇಶ ಯಾಕೆ ಅಂದ್ರೆ, ಟ್ರಾಫಿಕ್ ಜಾಮ್ ಆಗಬಾರದು ಅಂತಾ. ಆದರೆ ನಿನ್ನೆ ಸಂಜೆ ವೇಳೆ ಬೃಹತ್ ವಾಹನ ನೈಸ್ ರಸ್ತೆ ಕಡೆಯಿಂದ ಬಂದು ಎಲೆಕ್ಟ್ರಾನಿಕ್ ಸಿಟಿ ಬಳಿಯ, ರಾಷ್ಟ್ರೀಯ ಹೆದ್ದಾರಿ 7ಕ್ಕೆ ನುಗ್ಗಿಬಿಟ್ಟಿದೆ!

2,000 ರೂಪಾಯಿ ಲಂಚ ಆರೋಪ!

ಹೀಗೆ ಬಂದ ಹೆವಿ ವೆಹಿಕಲ್ ಅಥವಾ ಬೃಹತ್ ಕಂಟೇನರ್ ಲಾರಿಯನ್ನ ಟ್ರಾಫಿಕ್ ಪೊಲೀಸರು ಅಡ್ಡ ಹಾಕಿದ್ದಾರೆ. ಅಲ್ಲದೆ ಟ್ರಾಫಿಕ್ ಪೊಲೀಸರು ಲಾರಿ ಚಾಲಕನ ತರಾಟೆಗೆ ತೆಗೆದುಕೊಂಡು ರೂಲ್ಸ್ ಬಗ್ಗೆ ತಿಳಿಸಿದ್ದಾರೆ. ಇದರ ಜೊತೆಗೆ ದಂಡ ಕೂಡ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಈ ವೇಳೆ ಪೊಲೀಸರು 2,000 ರೂಪಾಯಿ ಲಂಚ ಪಡೆದು ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಆ ನಂತರ ರೊಚ್ಚಿಗೆದ್ದ ಬೇರೆ ಬೇರೆ ಲಾರಿಗಳ ಚಾಲಕರು ಸೇರಿ, ಭಾರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ & ಹೋರಾಟ ನಡೆಸಿದ್ದಾರೆ. ಇದರಿಂದಾಗಿ ಹೊಸೂರು ರಸ್ತೆಯ ಸಿಲ್ಕ್‌ಬೋರ್ಡ್ ಕಡೆಯಿಂದ ಹಿಡಿದು ಪಿಇಎಸ್ ಕಾಲೇಜು ತನಕ & ಚಂದಾಪುರ ತನಕ ಫುಲ್ ಟ್ರಾಫಿಕ್ ಜಾಮ್ ಆಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+