• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಡಿಯಿಂದ ನೊಟೀಸ್ ಬಂದಿಲ್ಲ, ಬೇರೆ ನೊಟೀಸ್‌ ಬಂದಿದೆ: ಡಿಕೆಶಿ

|

ಬೆಂಗಳೂರು, ನವೆಂಬರ್ 17: ನನಗೆ ಇಡಿಯಿಂದ (ಜಾರಿ ನಿರ್ದೇಶನಾಲಯ) ಯಾವುದೇ ನೊಟೀಸ್ ಬಂದಿಲ್ಲ, ಆದರೆ ಬಂದಿರುವುದು ಬೇರೆ ನೊಟೀಸ್‌ ಬಂದಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಡಿಕೆಶಿಗೆ ಇಡಿ ನೋಟಿಸ್: ರಾಜಕೀಯ ಷಡ್ಯಂತ್ರ ಎಂದ ದಿನೇಶ್ ಗುಂಡೂರಾವ್

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿಯಿಂದ ನೊಟೀಸ್ ಬಂದಿಲ್ಲ, ಬದಲಿಗೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯೊಂದರಿಂದಲೇ ನೊಟೀಸ್ ಬಂದಿದೆ, ಆದರೆ ಅದನ್ನು ಈ ಹಂತದಲ್ಲಿ ನಾನು ಬಹಿರಂಗಪಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಜನಾರ್ದನ ರೆಡ್ಡಿಗೆ ಆಲ್ ದ ಬೆಸ್ಟ್ ಹೇಳಿದ ಡಿಕೆ ಶಿವಕುಮಾರ್

ನೊಟೀಸ್‌ ಬಂದಾಗ ನಾನು ಇರಲಿಲ್ಲ, ಹಾಗಾಗಿ ಮನೆಯವರು ಅದನ್ನು ಇಡಿ ನೊಟೀಸ್ ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ಹೇಳಿದ ಅವರು, ಯಾವ ಇಲಾಖೆಯಿಂದ ನೊಟೀಸ್ ಬಂದಿದೆ ಎಂದು ಹೇಳಲು ನಿರಾಕರಿಸಿದರು.

ಈಗ ಬಂದಿರುವ ಬೇರೆ ನೊಟೀಸ್‌ಗೆ ನಾನೇ ಉತ್ತರ ನೀಡಿದ್ದೇನೆ, ಮುಂದಿನ ದಿನಗಳಲ್ಲಿ ನೊಟೀಸ್‌ ಬಗ್ಗೆ ವಿವರವಾಗಿ ಮಾತನಾಡುತ್ತೇನೆ. ನನಗೂ ಜನರಿಗೆ ತಿಳಿಸಲು ಬಹಳ ವಿಷಯಗಳಿವೆ ಎಂದು ಮಾರ್ಮಿಕವಾಗಿ ಹೇಳಿದರು.

ಜನಾರ್ದನ ರೆಡ್ಡಿ ಏನು ಕೊಟ್ಟರೂ ಪ್ರಸಾದ ಅಂತ ಸ್ವೀಕರಿಸುತ್ತೇನೆ: ಡಿಕೆ ಶಿವಕುಮಾರ್

ಒಂದುವರ್ಷದ ಹಿಂದೆಯೇ ಎಲ್ಲಾ ಮೌಲ್ಯಮಾಪನ ಮಾಡಿ ವರದಿಗಳನ್ನು ನೀಡಲಾಗಿದೆ. ಆದರೂ ಇನ್ನೂ ಬೇರೆ ಬೇರೆ ದಾರಿಗಳನ್ನು ಹುಡುಕಿ ಉದ್ದೇಶಪೂರ್ವಕವಾಗಿ ನೊಟೀಸ್‌ ನೀಡಲಾಗುತ್ತಿದೆ ಎಂದು ಹೇಳಿದ ಅವರು, ರಾಜಕೀಯ ಪ್ರೇರಿತ ನೊಟೀಸ್ ಇದು ಎಂದು ಆರೋಪಿಸದರು.

ಈ ರೀತಿಯ ಎಲ್ಲ ಪರಿಸ್ಥಿತಿಗಳನ್ನು ನಿಭಾಯಿಸಲು ನಾನು ಶಕ್ತನಾಗಿದ್ದೇನೆ. ರಾಜಕೀಯ ಪಿತೂರಿಗಳಿಗೆ ರಾಜಕೀಯದಿಂದಲೇ ಉತ್ತರ ಕೊಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

English summary
ED does not send any notice to me said minister DK Shivakumar. He said a notice has come from central governments department but it is not from ED. He also said that it is a political motivated action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X