ಕಣ್ವ ಗ್ರೂಪ್‌ನ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇಡಿ
ಬೆಂಗಳೂರು, ಸೆಪ್ಟೆಂಬರ್ 25 : ಕಣ್ವ ಗ್ರೂಪ್‌ನಲ್ಲಿ 650 ಕೋಟಿಗೂ ಅಧಿಕ ಹೂಡಿಕೆ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಕಣ್ವ ಗ್ರೂಪ್‌ಗೆ ಸೇರಿದ 255.17 ಕೋಟಿ ರೂ. ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಕಣ್ವ ಗ್ರೂಪ್‌ನ ಎಂಡಿ ನಂಜುಂಡಯ್ಯ ಹಾಗೂ ಇತರ ನಿರ್ದೇಶಕರ ಹೆಸರಿನಲ್ಲಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಅಧಿಕ ಬಡ್ಡಿ ನೀಡುವುದಾಗಿ 650 ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದ ಕಣ್ವ ಗ್ರೂಪ್ ಬಡ್ಡಿ ನೀಡಲು ವಿಫಲವಾಗಿತ್ತು. ಈ ಕುರಿತು ಮೊದಲು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು.

ಬಳಿಕ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಜಾರಿ ನಿರ್ದೇಶನಾಲಯ ಸಹ ಈ ಕುರಿತು ತನಿಖೆಯನ್ನು ಕೈಗೊಂಡಿತ್ತು. ಈಗ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.
ಹೂಡಿಕೆದಾರರರಿಗೆ 10,000 ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಕಣ್ವ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದರು.
ಕಣ್ವ ಕೋ ಆಪರೇಟಿವ್ ಸಂಸ್ಥೆ ಗ್ರಾಹಕರಿಗೆ ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿದ್ದವು. ಗ್ರಾಹಕರು ಹೂಡಿಕೆ ಮಾಡಿದ ಹಣಕ್ಕೆ ಸರಿಯಾದ ಬಡ್ಡಿಯನ್ನು ನೀಡಿರಲಿಲ್ಲ. ಕಣ್ವ ಗಾರ್ಡನ್ ಸಿಟಿ ಎಂಬ ಹೆಸರಿನಲ್ಲಿಯೂ ಜನರಿಗೆ ವಂಚನೆ ಮಾಡಲಾಗಿದೆ.












Click it and Unblock the Notifications