ರಾಜಕೀಯ ವಿಕೇಂದ್ರಿಕರಣದ ಜತೆ ಆರ್ಥಿಕ ವಿಕೇಂದ್ರಿಕರಣ: ಬೊಮ್ಮಾಯಿ

ಬೆಂಗಳೂರು, ಮಾರ್ಚ್ 25: ಕರ್ನಾಟಕ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳ ವಿವೇಚನೆಗೆ ಆಸ್ತಿ ನಿರ್ವಹಣೆ ಮಾಡುವ ಸಲುವಾಗಿ ದುಪ್ಪಟ್ಟು ಅನುದಾನ ನೀಡಬೇಕಿದ್ದು, ಅದಕ್ಕಾಗಿ ಎರಡು ಸಾವಿರ ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ರಾಜಕೀಯ ವಿಕೇಂದ್ರಿಕರಣದ ಜೊತೆಗೆ ಆರ್ಥಿಕ ವಿಕೇಂದ್ರೀಕರಣವನ್ನೂ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ 2019-2020, 2020-2021 ಹಾಗೂ 2021-2022ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಮಹಾತ್ಮಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಸಮಾರಂಭ - 2023 ಹಾಗೂ ಪಂಚತಂತ್ರ 2.0 ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ ತೆರಿಗೆ ಸಂಗ್ರಹದ PoS ಉಪಕರಣಗಳ ಲೋಕಾರ್ಪಣೆ ಮತ್ತು ಜಲಶಕ್ತಿ ಅಭಿಯಾನಕ್ಕೆ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Economic decentralization along with political decentralization, CM Bommai

ಗ್ರಾಮ ಪಂಚಾಯಿತಿಗೆ ಶಕ್ತಿ ತುಂಬಬೇಕು

ಜನರ ಸುತ್ತಲೂ ಅಭಿವೃದ್ಧಿಯಾಗಬೇಕು. ಅಭಿವೃದ್ಧಿಗಾಗಿ ಜನ ಓಡಾಡುವಂತಾಗಬಾರದು. ಜನರಿದ್ದಲ್ಲಿ ಆಡಳಿತ, ಅಭಿವೃದ್ಧಿ ಯಾಗಬೇಕು. ಬಾಪೂಜಿ ಕೇಂದ್ರದ ತಂತ್ರಾಂಶಗಳ ಮೂಲಕ ಇನ್ನಷ್ಟು ವೇಗವಾಗಿ ಕೆಲಸಗಳನ್ನು ಮಾಡಲು ಬಾಪೂಜಿ 02 ಯಿಂದ ಅನುಕೂಲ ಲವಾಗಲಿದೆ. ಇದರ ಜೊತೆಗೆ ಸೇವಾ ಭತ್ಯೆಗಳನ್ನು ಒಂದು ಸಾವಿರದಿಂದ 2 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷರಿಗೆ ಆರು ಸಾವಿರ ದೊರೆಯುವಂತೆ ಮಾಡಲಾಗಿದೆ. ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಹಳಷ್ಟು ಮಹತ್ವ ನೀಡಿದೆ. ಬರುವ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಲಾಗುವುದು. ಜನರಿಗೆ ಅತ್ಯಂತ ಹತ್ತಿರವಿರುವ ಸರ್ಕಾರ ಗ್ರಾಮ ಪಂಚಾಯಿತಿಯನ್ನು ಬಲಪಡಿಸಲಾಗುವುದು ಎಂದರು.

ಗ್ರಾಮೀಣಾಭಿವೃದ್ಧಿ ದೇಶದ ಒಟ್ಟು ಅಭಿವೃದ್ಧಿಯ ಮೂಲ

ಅಬ್ದುಲ್ ನಜೀರ್ ಸಾಬ್ ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿಯ ಹರಿಕಾರರು. ಗ್ರಾಮೀಣಾಭಿವೃದ್ಧಿ ಈ ದೇಶದ ಸಮಗ್ರ ಅಭಿವೃದ್ಧಿಯ ಮೂಲ. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ವರ ನೇತೃತ್ವದಲ್ಲಿ ಪ್ರಾರಂಭವಾಗಿ ಈವರೆಗಿನ ಕಾನೂನು ರೂಪಿಸಲಾಯಿತು. 73 ನೇ ತಿದ್ದುಪಡಿ ತಂದು ದೇಶವ್ಯಾಪಿ ಕರ್ನಾಟಕದ ಮಾದರಿ ಅನುಷ್ಠಾನವಾಗಿದೆ. ಮೂರು ಹಂತದ ಪಂಚಾಯತ್ ವ್ಯವಸ್ಥೆ ಯಶಸ್ವಿಯಾಗಲು ಆರ್ಥಿಕ ಅಧಿಕಾರ ನೀಡಬೇಕೆಂಬ ಬೇಡಿಕೆ ಇತ್ತು ಎಂದು ಅವರು ವಿವರಿಸಿದರು.

Economic decentralization along with political decentralization, CM Bommai

ಕರ್ನಾಟಕ: ಬದಲಾವಣೆಯ ನಿರೀಕ್ಷೆ

ನರೇಗಾದಿಂದ ಸಾಕಷ್ಟು ಆಸ್ತಿ ನಿರ್ಮಾಣವಾಗಿದೆ. ಸಾಕಷ್ಟು ಜನರಿಗೆ ಕೆಲಸ ದೊರೆತಿದೆ. ಇದನ್ನು ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತರಲು ಕಾನೂನಿನಲ್ಲಿ ಕೆಲವು ಬದಲಾವಣೆ ತರಬೇಕಾಗಿತ್ತದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಸಾಲೆ, ಆಸ್ಪತ್ರೆಗಳಿಗೆ ನರೇಗಾ ಬಳಕೆ ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರ ಬಳಿ ಮಾತನಾಡಿದ್ದು, ಶೀಘ್ರ ದಲ್ಲಿಯೇ ಬದಲಾವಣೆ ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.

ನರೇಗಾದಲ್ಲಿ ಕರ್ನಾಟಕದ ಪಂಚಾಯತ್ ರಾಜ್ ಇಲಾಖೆ ಅತ್ಯುತ್ತಮ ಕೆಲಸ ಮಾಡಿದ್ದು ದೇಶದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದೆ. ನಿಗದಿಯಾದ ಗುರಿ ಮೀರಿ ಸಾಧನೆ ಮಾಡಿ ಹೆಚ್ಚುವರಿ ಅನುದಾನವನ್ನು ರಾಜ್ಯ ನಿರಂತರವಾಗಿ ಪಡೆದಿದೆ. ಇನ್ನೂ

ಈ ವರ್ಷದ ಬಕೆಟ್ ನಲ್ಲಿ ಎ. ಬಿ.ಸಿ ಪಂಚಾಯಿತಿಗಳಿಗೆ ದುಪ್ಪಟ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಕರ್ನಾಟಕದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜನಪರ ಸರ್ಕಾರವನ್ನು ಮತ್ತೊಮ್ಮೆ ತರಲಾಗುವುದು. ರೈತರಿಗೆ ಅನುಕೂಲವಾಗುವ ಯೋಜನೆಗಳು ಈಗಾಗಲೇ ರೂಪಿಸಲಾಗಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುವ ಸಾಲವನ್ನು ಮೂರು ಲಕ್ಷದಿಂದ 5 ಲಕ್ಷ ರೂ.ಗಳವರೆಗೆ ಏರಿಸಲಾಗಿದೆ. ರೈತರಿಗೆ ಇರರಿಂದ ಬಹಳ ದೊಡ್ಡ ಅನುಕೂಲವಾಗಲಿದೆ. ಯಶಸ್ವಿನಿ ಯೋಜನೆಯನ್ನು ಪುನರಾರಂಭಿಸಿ 300 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರೈತರಿಗೆ ಜೀವನಜ್ಯೋತಿ ಜೀವ ವಿಮಾ ಪ್ರಾರಂಭ ಮಾಡಿ ಸಹಜ ಸಾವಿಗೂ 2 ಲಕ್ಷ ರೂ.ಗಳನ್ನು ಕುಟುಂಬದವರಿಗೆ ನೀಡಲಾಗುವುದು. ಇದಕ್ಕಾಗಿ 180 ಕೋಟಿ ರೂ.ಗಳನ್ನು ರೈತರ ಪರವಾಗಿ ತುಂಬಲಾಗುತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+